ಡಗೌಟ್ ನಿಂದ್ಲೇ ಜಯಸೂರ್ಯ ಸಿಡಿಲು – ಲಂಕಾ ಹೊಡೆತಕ್ಕೆ ಆಸೀಸ್ ಔಟ್
ವಿಂಡೀಸ್ ದೈತ್ಯರು ವೆರಿ ಡೇಂಜರಸ್

ಟಿ-20 ವಿಶ್ವಕಪ್ನಲ್ಲಿ ಒನ್ ಆಫ್ ದಿ ಮೋಸ್ಟ್ ಡೇಂಜರಸ್ ಹಾಗೇ ಟ್ರೋಫಿ ಗೆಲುವಿನ ಫೇವರೆಟ್ ಟೀಂ ಆಗಿ ಅಖಾಡಕ್ಕಿಳಿದಿದ್ದ ಆಸ್ಟ್ರೇಲಿಯಾ ಈಗ ಗ್ರೂಪ್ ಸ್ಟೇಜ್ನಲ್ಲೇ ಟೂರ್ನಿಯಿಂದ ಹೊರಬೀಳೋ ಆತಂಕದಲ್ಲಿದೆ. ಕಳೆದ ಬಾರಿ ಜಿಂಬಾಬ್ವೆ ನೀಡಿದ್ದ ಏಟಿನಿಂದ ಚೇತರಿಸಿಕೊಳ್ಳೋ ಮೊದ್ಲೇ ಈಗ ಶ್ರೀಲಂಕಾದ ಸಿಡಿಲಮರಿಗಳೂ ಕಾಂಗರೂಗಳ ಕಾಲು ಮುರಿದಿದ್ದಾರೆ. ಮುಳುಗುತ್ತಿದ್ದ ಲಂಕೆಗೆ ನಾವಿಕನಾಗಿ ಬಂದ ಸನತ್ ಜಯಸೂರ್ಯ ಈಗ ಲಂಕೆಯನ್ನೇ ಬೆಳಗುತ್ತಿದ್ರೆ ಅತ್ತ ಕೆರೆಬಿಯನ್ ದೈತ್ಯರು ಡೇಂಜರಸ್ ಆಗಿದ್ದಾರೆ.
ಇದನ್ನೂ ಓದಿ : ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಹೊಸ ಇತಿಹಾಸ – ಒಂದೇ ಇನಿಂಗ್ಸ್ನಲ್ಲಿ 736 ರನ್ ಚಚ್ಚಿದ ಪಡಿಕ್ಕಲ್ ಪಡೆ
ಟಿ-20 ವಿಶ್ವಕಪ್ ಅಖಾಡ ದಿನೇ ದಿನೇ ರಂಗೇರ್ತಿದೆ. ಆಲ್ರೆಡಿ ಸೂಪರ್ 8 ಲೆಕ್ಕಾಚಾರ ಸ್ಟಾರ್ ಆಗಿದೆ. ಟೂರ್ನಿಯಲ್ಲಿ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅತ್ಯದ್ಭುತವಾಗಿ ಪರ್ಫಾಮ್ ಮಾಡ್ತಿದ್ದಾರೆ. ಅದ್ರಲ್ಲೂ ಸೋಮವಾರ ಆಸೀಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಸೂಪರ್ 8ಗೆ ಲಗ್ಗೆ ಇಟ್ಟಿದ್ದಾರೆ. ಅದು ಅಂತಿಂಥಾ ಗೆಲುವಲ್ಲ. ಸೆಂಚುರಿ ಸಿಡಿಲಿನ ಗೆಲುವು.
ಆಸೀಸ್ ಗೆ ಮಣ್ಣು ಮುಕ್ಕಿಸಿದ ಲಂಕಾ ಪ್ಲೇಯರ್ಸ್!
ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್ ಬಿನಲ್ಲಿರೋ ಶ್ರೀಲಂಕಾ ತಂಡ ಹ್ಯಾಟ್ರಿಕ್ ಗೆಲುವಿನೊಂದಿಗೆ ನೆಕ್ಸ್ಟ್ ಸುತ್ತಿಗೆ ಸೆಲೆಕ್ಟ್ ಆಗಿದೆ. ಆದ್ರೆ ಆಸ್ಟ್ರೇಲಿಯಾ ತಂಡ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಸೋತು ಟೂರ್ನಿಯಿಂದಲೇ ಹೊರಬೀಳೋ ಹಂತದಲ್ಲಿದೆ. ಸೋಮವಾರ ಲಂಕಾ ಮತ್ತು ಆಸೀಸ್ ತಂಡಗಳು ಮುಖಾಮುಖಿ ಆಗಿದ್ವು. ಈ ವೇಳೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 181 ರನ್ ಕಲೆ ಹಾಕಿತ್ತು. ಆಸೀಸ್ ನೀಡಿದ ಟಾರ್ಗೆಟ್ ಬೆನ್ನತ್ತಿದ್ದ ಲಂಕಾ ಪರ ಪಥುಮ್ ನಿಸ್ಸಾಂಕಾ ಅದ್ಭುತ ಶತಕ ಬಾರಿಸಿದ್ರು. 52 ಎಸೆತಗಳಲ್ಲಿ 5 ಸಿಕ್ಸರ್, 10 ಬೌಂಡರಿ ಬಾರಿಸಿದ್ರು. ಟೂರ್ನಿಯ ಮೊದಲ ಶತಕ ಇದು. ಹಾಗೇ ಕುಶಾಲ್ ಮೆಂಡಿಸ್ 51 ರನ್ ಸಿಡಿಸಿದರು. ಈ ಮೂಲಕ 18 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆದ ಲಂಕಾ ಪಂದ್ಯವನ್ನ ಗೆದ್ದುಕೊಳ್ತು. 2 ವರ್ಷಗಳ ಹಿಂದೆ ಡಮ್ಮಿಯಾಗಿ ಕಾಣ್ತಿದ್ದ ಲಂಕಾ ಈಗ ಟಫ್ ಟೀಂ ಆಗಿದೆ. ಇದಕ್ಕೆ ಕಾರಣವೇ ಲಂಕಾ ಕೋಚ್ ಸತನ್ ಜಯಸೂರ್ಯ.
ಜಯಸೂರ್ಯ ಕೋಚ್ ಆದ್ಮೇಲೆ ಪ್ರಜ್ವಲಿಸುತ್ತಿದೆ ಲಂಕಾ!
1990 ರ ದಶಕದಲ್ಲಿ ಲಂಕಾದಲ್ಲಿ ಸಿಡಿಲಮರಿಗಳ ದಂಡೇ ಇತ್ತು. ವಿಶ್ವಕ್ರಿಕೆಟ್ನೇ ಆಳುವಂಥ ದಿಗ್ಗಜ ಆಟಗಾರರಿದ್ರು. ಸನತ್ ಜಯಸೂರ್ಯ, ಕುಮಾರ್ ಸಂಗಕ್ಕರ, ಮಹೇಲಾ ಜಯವರ್ಧನೆ, ತಿಲಕರತ್ನೆದಿಲ್ಶಾನ್ ಚಮಿಂದಾ ವಾಸ್, ಮುತ್ತಯ್ಯ ಮುರಳೀಧರನ್, ಲಸಿತ್ ಮಾಲಿಂಗ ಇವ್ರೆಲ್ಲಾ ಎದುರಾಳಿ ಆಟಗಾರರ ಎದೆ ಝಲ್ ಅನ್ನಿಸುತ್ತಿದ್ರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಲಂಕಾ ಇದ್ದೂ ಇಲ್ಲದಂತೆ ಕಾಣ್ತಿತ್ತು. ಇನ್ನೇನು ಮುಳುಗುವ ಹಡಗು ಅಂತಾನೇ ಎಲ್ರೂ ಅನ್ಕೊಳ್ತಿದ್ರು. ಯಾವಾಗ ಸನತ್ ಜಯಸೂರ್ಯ ಹೆಡ್ಕೋಚ್ ಆಗಿ ಬಂದ್ರೋ ಅಲ್ಲಿಂದ ತಂಡದ ನಸೀಬೇ ಬದ್ಲಾಗಿದೆ. ಒಂದ್ಕಡೆ ಫೈನಾನ್ಶಿಯಲಿ ವೀಕ್ ಆಗ್ತಿದ್ದ ಲಂಕಾದಲ್ಲಿ ಕ್ರಿಕೆಟ್ ತಂಡದ ಯುವ ಪಡೆಗೆ ಸರಿಯಾದ ಗೈಡೆನ್ಸ್ ಸಿಗದೆ ಅಲುಗಾಡೋಕೆ ಸ್ಟಾರ್ಟ್ ಮಾಡಿತ್ತು. ಇಂಥಾ ಟೈಮಲ್ಲಿ ದ್ರೋಣಾಚಾರ್ಯನಾಗಿ ಬಂದವರೇ ಜಯಸೂರ್ಯ. ಕ್ರಿಕೆಟ್ ಜಗತ್ತಿನ ಘಾತಕ ವೇಗಿಗಳನ್ನೂ ಹುರಿದು ಮುಕ್ಕುತ್ತಿದ್ದ ಡೇಂಜರಸ್ ಬ್ಯಾಟರ್. ಅವರ ತಂತ್ರಗಳು ಈಗ ಕೋಚ್ ಆಗಿ ಮತ್ತೆ ಯಶಸ್ವಿಯಾಯ್ತು. ಟಿ-20 ವಿಶ್ವಕಪ್ನಲ್ಲಿ ಕಾಂಗರೂಗಳನ್ನ ಬೇಟೆಯಾಡ್ತಿದ್ದ ಒಂದೊಂದು ಕ್ಷಣವನ್ನೂ ಜಯಸೂರ್ಯ ಡಗ್ಔಟ್ ನಲ್ಲೇ ಕುಳಿತು ಎಂಜಾಯ್ ಮಾಡ್ತಿದ್ರು. ಪಥುಮ್, ಮೆಂಡೀಸ್ ಬ್ಯಾಟಿಂಗ್ ಟೈಮಲ್ಲಂತೂ ತಾವೇ ಬ್ಯಾಟ್ ಬೀಸ್ತಿದ್ದಾರೇನೋ ಅನ್ನೋ ಹಾಗೇ ಸೆಲೆಬ್ರೇಟ್ ಮಾಡ್ತಿದ್ರು. ಉತ್ತಮ ಆಟಗಾರನಷ್ಟೇ ಉತ್ತಮ ಗುರುವಾಗಬಲ್ಲ ಅನ್ನೋದನ್ನ ಸಾಬೀತು ಪಡಿಸ್ತಿದ್ರು. 2024ರ ಅಕ್ಟೋಬರ್ 1ರಂದು ಕೋಚ್ ಆಗಿ ಜಾಯ್ನ್ ಆಗಿದ್ದು ಪ್ಲೇಯರ್ಸ್ ಫ್ರೆಂಡ್ಲಿಯಾಗಿ ಲಂಕಾ ತಂಡದ ಗತವೈಭವ ಮರಳುವಂತೆ ಮಾಡ್ತಿದ್ದಾರೆ. ಹಾಗೇ ಪ್ರತೀ ಪಂದ್ಯದ ವೇಳೆಯೇ ಡಗ್ಔಟ್ನಲ್ಲೇ ಕುಳಿತು ಆಟಗಾರರಿಗೆ ಕಮ್ಯುನಿಕೇಟ್ ಮಾಡುತ್ತಾ ಪಂದ್ಯದ ದಿಕ್ಕನ್ನೇ ಬದಲಿಸ್ತಿದ್ದಾರೆ. ಲಂಕಾ ಕೊಟ್ಟಿರೋ ಏಟಿಗೆ ಈಗ ಆಸ್ಟ್ರೇಲಿಯಾ ತಂಡ ಟಿ-20 ವಿಶ್ವಕಪ್ನಿಂದಲೇ ಹೊರಬೀಳೋ ಆತಂಕದಲ್ಲಿದೆ.
2 ಪಂದ್ಯ ಸೋತ ಆಸೀಸ್ ಗೆ ಈಗ ಡು ಆರ್ ಡೈ!
ಕ್ರಿಕೆಟ್ ಜಗತ್ತಿನ ಅನಭಿಷಕ್ತ ದೊರೆಯಾಗಿ ಮೆರೀತಿದ್ದ ಆಸ್ಟ್ರೇಲಿಯಾ ಈ ಬಾರಿ ಟಿ-20 ವಿಶ್ವಕಪ್ನಲ್ಲೂ ವೀಕ್ ಆಗಿದೆ. ಜಿಂಬಾಬ್ವೆ ವಿರುದ್ಧದ ಸೋಲಿನ ನಂತರ ಈಗ ಲಂಕಾ ವಿರುದ್ಧವೂ ಸೋತಿದೆ. ಪ್ರಸ್ತುತ 3 ಪಂದ್ಯಗಳಲ್ಲಿ 1 ಪಂದ್ಯ ಅಷ್ಟೇ ಗೆದ್ದಿದೆ. ಹೀಗಾಗಿ 2 ಅಂಕಗಳೊಂದಿಗೆ +0.414 ರನ್ ರೇಟ್ ಹೊಂದಿದೆ. ಆಸ್ಟ್ರೇಲಿಯಾ ಗ್ರೂಪ್ ಬಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಲ್ರೆಡಿ ಲಂಕಾ ಸೂಪರ್ 8ಗೆ ಕಾಲಿಟ್ಟಿರೋದ್ರಿಂದ ಆಸೀಸ್ ಪಡೆ ಡು ಆರ್ ಡೈ ಸ್ಟೇಜ್ನಲ್ಲಿದೆ. ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ಓಮಾನ್ ವಿರುದ್ಧದ ಪಂದ್ಯವನ್ನು ಗೆಲ್ಲಬೇಕು. ಗೆದ್ರೆ ಸಾಕಾಗಲ್ಲ ಇತರೆ ತಂಡಗಳ ಫಲಿತಾಂಶವೂ ಇವರ ಪರವಾಗಿ ಬರಬೇಕು. ಪ್ರಸ್ತುತ ಜಿಂಬಾಬ್ವೆ 2ನೇ ಸ್ಥಾನದಲ್ಲಿದ್ದು 2 ಪಂದ್ಯ ಬಾಕಿ ಇವೆ. ಶ್ರೀಲಂಕಾ ಅಥವಾ ಐರ್ಲೆಂಡ್ ವಿರುದ್ಧ ಒಂದು ಪಂದ್ಯವನ್ನ ಗೆದ್ರೂ 6 ಅಂಕಗಳನ್ನು ಪಡೀತಾರೆ. ಆಸ್ಟ್ರೇಲಿಯಾ ಔಟ್ ಆಗುತ್ತೆ. ಅಕಸ್ಮಾತ್ ಜಿಂಬಾಬ್ವೆ ಎರಡೂ ಪಂದ್ಯಗಳನ್ನು ಸೋತರೆ ಮತ್ತು ಆಸ್ಟ್ರೇಲಿಯಾ ಓಮಾನ್ ವಿರುದ್ಧದ ಪಂದ್ಯವನ್ನು ಗೆದ್ದರೆ ಆಸೀಸ್ ಮತ್ತು ಐರ್ಲೆಂಡ್ ಎರಡೂ 4 ಪಂದ್ಯಗಳಿಂದ 4 ಅಂಕಗಳನ್ನು ಪಡೆದುಕೊಳ್ಳುತ್ತವೆ. ಆಗ ಸೂಪರ್ ಎಂಟನೇ ಹಂತಕ್ಕೆ ಆಸ್ಟ್ರೇಲಿಯಾದ ಅರ್ಹತೆ ಸಂಪೂರ್ಣವಾಗಿ ನೆಟ್ ರನ್ ರೇಟ್ ಮೇಲೆ ಡಿಪೆಂಡ್ ಆಗಿರುತ್ತ. ಸದ್ಯದ ಸಿಚುಯೇಷನ್ ನೋಡಿದ್ರೆ ಆಸೀಸ್ಗೆ ಮುಂದಿನ ದಾರಿ ಸ್ವಲ್ಪ ಕಠಿಣವಾಗಿಯೇ ಇದೆ. ಇದು ಆಸೀಸ್ ಕಥೆಯಾದ್ರೆ ಅತ್ತ ವಿಂಡೀಸ್ ದೈತ್ಯರು ಈ ಸಲ ಸಿಕ್ಕಾಪಟ್ಟೆ ಡೇಂಜರಸ್ ಆಗಿದ್ದಾರೆ.
ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್ 8ಗೆ ವಿಂಡೀಸ್!
ಇನ್ನು ವಿಶ್ವಕಪ್ ಟೂರ್ನಿಯ ಗ್ರೂಪ್ ಸಿ ನಲ್ಲಿರೋ ವೆಸ್ಟ್ ಇಂಡೀಸ್ ಅಂತೂ ಈ ಸಲ ಮೋಸ್ಟ್ ಡೇಂಜರಸ್ ಟೀಂ ಆಗಿದೆ. ಆಡಿರುವಂಥ ಮೂರಕ್ಕೆ ಮೂರೂ ಪಂದ್ಯ ಗೆದ್ದು ಸೂಪರ್ 8ಗೆ ಕಾಲಿಟ್ಟಿದ್ದಾರೆ. ಅದೂ ಕೂಡ ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಒನ್ ಸೈಡೆಡ್ ಆಗಿ ವಿನ್ ಆಗಿದ್ದಾರೆ. ಸ್ಕಾಟ್ಲೆಂಡ್ ವಿರುದ್ಧ 9 ವಿಕೆಟ್ಗಳ ಜಯ, ಇಂಗ್ಲೆಂಡ್ ವಿರುದ್ಧ 30 ರನ್ಗಳ ಜಯ ಹಾಗೇ ನೇಪಾಳ ವಿರುದ್ಧ 9 ವಿಕೆಟ್ಗಳಿಂದ ಗೆದ್ದು ಡೇಂಜರಸ್ ಆಗಿದ್ದಾರೆ. ನಾಯಕ ಶಾಯ್ ಹೋಪ್ ಕ್ಯಾಪ್ಟನ್ಸಿಯಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ.

ನೋಡಿರಿ

