ಸೆಮಿಫೈನಲ್ ತಲುಪುವ ಪಾಕ್ ಕನಸು ಭಗ್ನ – ಕೊನೇವರೆಗೂ ಹೋರಾಡಿ ಸೋತರೂ ಮನಗೆದ್ದ ದಾಸುನ್ ಶನಕ

ಸೆಮಿಫೈನಲ್ ತಲುಪುವ ಪಾಕ್ ಕನಸು ಭಗ್ನ – ಕೊನೇವರೆಗೂ ಹೋರಾಡಿ ಸೋತರೂ ಮನಗೆದ್ದ ದಾಸುನ್ ಶನಕ

ಟಿ20 ವಿಶ್ವಕಪ್‌ನಿಂದ ಮೊದಲೇ ಶ್ರೀಲಂಕಾ ಹೊರಗೆ ಬಿದ್ದಿತ್ತು. ಈಗ ಸೋತರೂ ಕೂಡಾ ಲಂಕನ್ನರು ಪಾಕಿಸ್ತಾನವನ್ನೂ ಕೂಡಾ ಮನೆಗೆ ಕಳಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಮೂಲಕ ಪಾಕಿಸ್ತಾನ 2026 ರ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಶ್ರೀಲಂಕಾ ವಿರುದ್ಧ ಗೆದ್ದರೂ ಕೂಡಾ ಪಾಕಿಸ್ತಾನ ಸೆಮಿಫೈನಲ್ ತಲುಪಲು ವಿಫಲವಾಗಿದೆ.

ಇದನ್ನೂ ಓದಿ:ಸಂಜು ಕೈಯಲ್ಲಿ ಬ್ಯಾಟಿಂಗ್ ಬಲ – ಅತಿ ಆತ್ಮವಿಶ್ವಾಸ ಬಿಡ್ತಾರಾ ಸೂರ್ಯ?

ಟಿ20 ವಿಶ್ವಕಪ್‌ ನಲ್ಲಿ ಸೆಮಿಫೈನಲ್ ರೇಸ್‌ ಗೆ ಎಂಟ್ರಿಕೊಡುವ ಆಸೆ ಹೊತ್ತು ಲಂಕನ್ನರ ವಿರುದ್ಧ ಪಾಕಿಸ್ತಾನ ಕಣಕಿಳಿದಿತ್ತು. ಆದರೆ, ಈಗ ಶ್ರೀಲಂಕಾ ಪಾಕಿಸ್ತಾನದ ಎದುರು ಸೋತರೂ ಕೂಡಾ ಪಾಕಿಸ್ತಾನದ ಸೆಮಿಫೈನಲ್ ಕನಸನ್ನು ಭಗ್ನಗೊಳಿಸಿದೆ. ಇದರೊಂದಿಗೆ ಪಾಕಿಸ್ತಾನ 2026 ರ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ಪರ ಸಾಹಿಬ್ಜಾದಾ ಫರ್ಹಾನ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಫರ್ಹಾನ್ ಸಿಂಹಳೀಯರ ವಿರುದ್ಧ ಶತಕ ಸಿಡಿಸಿದರು. ಈ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಶತಕವನ್ನು ಬಾರಿಸಿದ್ದಾರೆ ಫರ್ಹಾನ್. ಇನ್ನು ಫಖರ್ ಜಮಾನ್ ಕೂಡ 84 ರನ್​ಗಳ ಇನ್ನಿಂಗ್ಸ್ ಆಡಿದರು. ಇವರಿಬ್ಬರನ್ನು ಬಿಟ್ಟರೆ ಇನ್ನುಳಿದ ಪಾಕ್ ಬ್ಯಾಟರ್ ಗಳು ಒಳ್ಳೇ ಸ್ಕೋರ್ ಮಾಡಲೇಇಲ್ಲ. ಪಾಕಿಸ್ತಾನ 8 ವಿಕೆಟ್‌ಗಳ ನಷ್ಟಕ್ಕೆ 212 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ವಿಕೆಟ್‌ಗಳು ಬೀಳುತ್ತಾ ಹೋಯಿತು. ಆಗ ಪಾಕಿಗಳಿಗೆ ಸೆಮೆಫೈನಲ್ ಕನಸು ಚಿಗುರತೊಡಗಿತು. ಆಗಲೇ ಶುರುವಾಗಿದ್ದು ಶ್ರೀಲಂಕಾ ನಾಯಕ ದಾಸುನ್ ಶನಕ ಹೊಡಿಬಡಿ ಬ್ಯಾಟಿಂಗ್. ಪಾಕಿಸ್ತಾನ ಬೌಲರ್‌ಗಳಿಗೆ ಶನಕ ನಡುಕ ಹುಟ್ಟಿಸಿದರು. ಕೊನೆವರೆಗೂ ಹೋರಾಡಿದ ಶನಕ ಗೆಲುವಿನ ಅಂಚಿನಲ್ಲಿ ಸೋಲಬೇಕಾಯಿತು. ದಾಸುನ್ ಶನಕ 31 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ, ಕೊನೆಯ ಎಸೆತದಲ್ಲಿ ಪಾಕಿಸ್ತಾನ 5 ರನ್​ಗಳಿಂದ ಗೆಲುವು ಸಾಧಿಸಿತು. ಶ್ರೀಲಂಕಾ ತಂಡ 147 ಅಂಕಗಳನ್ನು ದಾಟಿದ ತಕ್ಷಣ, ಪಾಕಿಸ್ತಾನ ಸೆಮಿಫೈನಲ್ ರೇಸ್‌ನಿಂದ ಹೊರಬಿತ್ತು. ಮತ್ತೊಂದೆಡೆ, ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಟಿಕೆಟ್ ಪಡೆದುಕೊಂಡಿತು.

Sulekha