ಲಂಕಾ ದಹನ ಮಾಡಿದ ಕಿವೀಸ್ ಪಡೆ – ಟಿ20 ವಿಶ್ವಕಪ್ನಿಂದ ಹೊರಬಿದ್ದ ಶ್ರೀಲಂಕಾ

ಟಿ20 ವಿಶ್ವಕಪ್ ಟೂರ್ನಿಯಿಂದ ಶ್ರೀಲಂಕಾ ತಂಡ ತನ್ನದೇ ನೆಲದಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಟೂರ್ನಿಯಿಂದ ಶ್ರೀಲಂಕಾ ಹೊರಬೀಳುವ ಮೂಲಕ ವಿಶ್ವಕಪ್ ಕನಸು ಭಗ್ನವಾಗಿದೆ. ಲಂಕಾ ದಹನ ಮಾಡಿರುವ ಕಿವೀಸ್ ಪಡೆ 3 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ:ವಿಶ್ವಕಪ್ ಸೋತ್ರೆ ಗಂಭೀರ್ ಕಿಕ್ ಔಟ್ – BCCIಗೆ ಮಾಜಿ ಕ್ರಿಕೆಟಿಗರಿಂದ್ಲೇ ಒತ್ತಡ?
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆತಿಥೇಯ ಶ್ರೀಲಂಕಾವನ್ನು 61 ರನ್ಗಳಿಂದ ಸೋಲಿಸಿದೆ. ಶ್ರೀಲಂಕಾ ಕೇವಲ 107 ರನ್ಗಳಿಗೆ ಆಲೌಟ್ ಆಗುವ ಮೂಲಕ ವಿಶ್ವಕಪ್ನಿಂದ ಅಧಿಕೃತವಾಗಿ ಹೊರಬಿದ್ದಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 168 ರನ್ ಗಳಿಸಿತು. ಒಂದು ಹಂತದಲ್ಲಿ ನ್ಯೂಜಿಲೆಂಡ್ 84 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕಿವೀಸ್ ಸ್ಕೋರ್ ಹೆಚ್ಚಾಗುವಂತೆ ಮಾಡಿದ್ದು, ಕೋಲ್ ಮೆಕಾಂಚಿ ಮತ್ತು ಮಿಚೆಲ್ ಸ್ಯಾಂಟ್ನರ್ . 7ನೇ ವಿಕೆಟ್ಗೆ ದಾಖಲೆಯ 47 ಎಸೆತಗಳಲ್ಲಿ 84 ರನ್ಗಳ ಜೊತೆಯಾಟ ನಡೆಸಿದ ಈ ಜೋಡಿ ತಂಡದ ಮೊತ್ತ 168 ರನ್ಗಳವರೆಗೆ ಸೇರಿಸಿದರು.
169 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಪವರ್ಪ್ಲೇನಲ್ಲಿಯೇ ತತ್ತರಿಸಿಹೋಯಿತು. ಪವರ್ಪ್ಲೇನಲ್ಲಿ ತಂಡ ಕೇವಲ 20 ರನ್ ಮಾತ್ರ ಗಳಿಸಿತ್ತು. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ 4 ವಿಕೆಟ್ಗಳನ್ನು ಕಬಳಿಸಿದರು. ಶ್ರೀಲಂಕಾ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 107 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ 61 ರನ್ಗಳಿಂದ ಲಂಕಾ ಕಿವೀಸ್ ಎದುರು ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ, ಶ್ರೀಲಂಕಾ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ. ನ್ಯೂಜಿಲೆಂಡ್ ಸೂಪರ್ -8 ರ ಗ್ರೂಪ್ ಬಿ ನಲ್ಲಿ 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ನೋಡಿರಿ

