7 ದೇಶಗಳ ಪ್ರವಾಸಿಗರಿಗೆ ಉಚಿತ ವೀಸಾ ಘೋಷಿಸಿದ ಶ್ರೀಲಂಕಾ – ಭಾರತೀಯರಿಗೂ ಸಿಗಲಿದ್ಯಾ ಈ ಸೌಲಭ್ಯ?
ಶ್ರೀಲಂಕಾಗೆ ಹೋಗಬೇಕೆಂದರೆ ವೀಸಾ ಹೊಂದಿಬೇಕು. ವೀಸಾ ಪಡೆಯಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು ಅನ್ನೋ ಚಿಂತೆ ಬೇಡ. ಏಕೆಂದರೆ ಶ್ರೀಲಂಕಾ ಸರ್ಕಾರ 7 ದೇಶದ ಪ್ರಯಾಣಿಕರಿಗೆ ಉಚಿತ ವೀಸಾ ನೀಡಲು ನಿರ್ಧರಿಸಿದೆ. ಏಳು ದೇಶಗಳ ಪ್ರವಾಸಿಗರಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ಕ್ಯಾಬಿನೆಟ್ ತನ್ನ ಒಪ್ಪಿಗೆ ನೀಡಿದೆ.
ಉಚಿತ ವೀಸಾ ಪಡೆಯುವ 7 ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಇರಲಿದೆ. ಇನ್ನುಮುಂದೆ ಭಾರತೀಯರು ಶ್ರೀಲಂಕಾಗೆ ಹೋಗುವುದಾದರೆ ವೀಸಾ ಮಾಡಿಸಬೇಕೆಂದಿಲ್ಲ. ಈ ಬಗ್ಗೆ ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಅವರು ಮಾಹಿತಿ ನೀಡಿದ್ದಾರೆ. ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಹೀಗೆ ಒಟ್ಟು ಏಳು ದೇಶಗಳ ಪ್ರಯಾಣಿಕರಿಗೆ ಉಚಿತ ವೀಸಾ ನೀಡಲು ಶ್ರೀಲಂಕಾ ಕ್ಯಾಬಿನೆಟ್ ತನ್ನ ಒಪ್ಪಿಗೆ ನೀಡಿದೆ. ಈ ನಿರ್ಧಾರವು ಪ್ರಾಯೋಗಿಕ ಯೋಜನೆಯಾಗಿ ತಕ್ಷಣವೇ ಪ್ರಾರಂಭವಾಗಿದೆ ಮತ್ತು ಮುಂದಿನ ವರ್ಷದ ಮಾರ್ಚ್ 31 ರವರೆಗೆ ಜಾರಿಯಲ್ಲಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್!
ಈ ಬೆಳವಣಿಗೆಯು ಪ್ರವಾಸಿಗರ ಆಗಮನವನ್ನು ಹೆಚ್ಚಿಸುತ್ತದೆ ಎಂದು ಅಲಿ ಸಬ್ರಿ ಭರವಸೆ ವ್ಯಕ್ತಪಡಿಸಿದ್ದಾರೆ. ಮುಂಬರುವ ವರ್ಷಗಳಲ್ಲಿ ಪ್ರವಾಸಿಗರ ಆಗಮನವನ್ನು ಐದು ಮಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಶ್ರಿಲಂಕಾ ಸರಕಾರದ ಸಚಿವಾಲಯವು ಹೇಳಿದೆ. ಈ ಕ್ರಮವು ಪ್ರಯಾಣಿಕರಿಗೆ ವೀಸಾ ಪಡೆಯಲು ಖರ್ಚು ಮಾಡುವ ಹಣ ಮತ್ತು ಸಮಯವನ್ನು ಉಳಿಸುತ್ತದೆ.
ಕಳೆದ ವಾರದ ಆರಂಭದಲ್ಲಿ, ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯವು ಐದು ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವಾಸಿ ವೀಸಾಗಳನ್ನು ನೀಡುವ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಘೋಷಿಸಿತ್ತು.
ಕ್ಯಾಬಿನೆಟ್ ಪೇಪರ್ ಅನ್ನು ಶ್ರೀಲಂಕಾದ ಪ್ರಧಾನಿ ದಿನೇಶ್ ಗುಣವರ್ಧನಾ, ಪ್ರವಾಸೋದ್ಯಮ ಮತ್ತು ಭೂ ಸಚಿವ ಹರಿನ್ ಫೆರ್ನಾಂಡೋ, ಸಾರ್ವಜನಿಕ ಭದ್ರತಾ ಸಚಿವ ತಿರಾನ್ ಅಲ್ಲೆಸ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಜಂಟಿಯಾಗಿ ಮಂಡಿಸಿದ್ದಾರೆ.
ಈ ದೇಶಗಳಿಗೆ ಹೋಗುವವರು ಮತ್ತು ಪ್ರವಾಸಿಗರು ಈಗ ಶ್ರೀಲಂಕಾಕ್ಕೆ ಯಾವುದೇ ಶುಲ್ಕವಿಲ್ಲದೆ ವೀಸಾಗಳನ್ನು ಪಡೆಯಬಹುದು. ಇದು ದೇಶದಲ್ಲಿ ಗಮನಾರ್ಹ ಬದಲಾವಣೆಯನ್ನು ಗುರುತಿಸುತ್ತದೆ. ಭಾರತವು ಐತಿಹಾಸಿಕವಾಗಿ ಶ್ರೀಲಂಕಾ ತೆರಳುವ ಪ್ರವಾಸೋದ್ಯಮದ ಪ್ರಾಥಮಿಕ ಮೂಲವಾಗಿದೆ. ಭಾರತಕ್ಕೆ ಬಂದೇ ಶ್ರೀಲಂಕಾಕ್ಕೆ ತೆರಳಬೇಕು.
ಪಿಟಿಐ ವರದಿಯಂತೆ ಸೆಪ್ಟೆಂಬರ್‌ನಲ್ಲಿ, ಭಾರತದ ಮೂಲಕ 30,000 ಕ್ಕೂ ಹೆಚ್ಚು ಜನರು ಶ್ರೀಲಂಕಾಕ್ಕೆ ತೆರೆದಿದ್ದಾರೆ. ಒಟ್ಟು 26 ಪ್ರತಿಶತವನ್ನು ಒಳಗೊಂಡಿದೆ, ಚೀನಾ ಮೂಲಕ 8,000 ಕ್ಕೂ ಹೆಚ್ಚು ಪ್ರವಾಸಿಗರು ಪ್ರಯಾಣಿಸಿದ್ದು ಎರಡನೇ ಸ್ಥಾನದಲ್ಲಿದೆ.