ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ – ಈ ಬಾರಿ ಎರಡು ದಿನ ಶ್ರೀ ಕೃಷ್ಣ ಜನ್ಮೋತ್ಸವದ ಸಡಗರ

ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ – ಈ ಬಾರಿ ಎರಡು ದಿನ ಶ್ರೀ ಕೃಷ್ಣ ಜನ್ಮೋತ್ಸವದ ಸಡಗರ

ಸೆಪ್ಟೆಂಬರ್ 6. ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಶ್ರೀಕೃಷ್ಣನ ಭಕ್ತರು ಭಕ್ತಿ ಮತ್ತು ಸಮರ್ಪಣೆಯ ಮನೋಭಾವದಿಂದ ಹಬ್ಬವನ್ನು ಆಚರಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿ ಶ್ರೀಕೃಷ್ಣನ ಜನನವನ್ನು ನೆನಪಿಸುವ ಹಬ್ಬವಾಗಿದೆ. ಜೊತೆಗೆ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಭರ್ಜರಿ ತಯಾರಿ – ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಬಿಬಿಎಂಪಿ ಸುತ್ತೋಲೆ

ಹಿಂದೂ ಪುರಾಣಗಳ ಪ್ರಕಾರ ಶ್ರೀಕೃಷ್ಣನು ಈ ದಿನದಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಹಾಗಾಗಿ ಈ ದಿನವನ್ನು ಸಂತೋಷದಿಂದ ಆಚರಣೆ ಮಾಡಲಾಗುತ್ತದೆ. ಈ ಬಾರಿ ಪಂಚಾಂಗದ ಪ್ರಕಾರ, ಕೃಷ್ಣ ಜನ್ಮಾಷ್ಟಮಿ ಸತತ ಎರಡು ದಿನಗಳಲ್ಲಿಯೂ ಆಚರಿಸಲಾಗುತ್ತದೆ. ಅಷ್ಟಮಿ ತಿಥಿ ಸೆಪ್ಟೆಂಬರ್ 06, 2023 ರಂದು ಸಂಜೆ 15:37 ಕ್ಕೆ ಆರಂಭವಾಗಿ ಮತ್ತು ಸೆಪ್ಟೆಂಬರ್ 07, ಸಂಜೆ 4:14 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಈ ಹಬ್ಬವನ್ನು ಎರಡೂ ದಿನಗಳಲ್ಲಿ ಆಚರಿಸಲಾಗುತ್ತದೆ.

ಜನ್ಮಾಷ್ಟಮಿ ದಿನದಂದು ಭಗವಾನ್ ವಿಷ್ಣುವು ಭೂಮಿಯ ಮೇಲೆ ಕೃಷ್ಣನಾಗಿ ಅವತರಿಸಿದನೆಂದು ನಂಬಲಾಗಿದೆ. ಈ ದಿನದಂದು ಭಕ್ತರು ತಮ್ಮ ವಿಗ್ರಹಗಳಿಗೆ ಪೂರ್ಣ ಭಕ್ತಿಯಿಂದ ಪೂಜೆ ಮಾಡಿ ಉಪವಾಸ ಮಾಡುತ್ತಾರೆ. ಜನ್ಮಾಷ್ಟಮಿಯ ದಿನದಂದು ರಾತ್ರಿ 12 ಗಂಟೆಗೆ ಮಗುವಿನ ರೂಪದಲ್ಲಿ ಶ್ರೀಕೃಷ್ಣನ ಜನ್ಮೋತ್ಸವವನ್ನು ಆಚರಿಸುತ್ತಾರೆ. ಶಂಖದಲ್ಲಿ ಹಾಲಿನ ಅಭಿಷೇಕ ಮಾಡುತ್ತಾರೆ. ಅಭಿಷೇಕವನ್ನು ಐದು ವಸ್ತುಗಳಿಂದ ಕೂಡ ಮಾಡಬಹುದು . ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾಜಲ ಅಭಿಷೇಕ ಮಾಡಿ.  ನಂತರ, ಕೃಷ್ಣನಿಗೆ ಸುಂದರವಾದ ಬಟ್ಟೆಗಳನ್ನು ತೊಡಿಸಿ, ಕಿರೀಟವನ್ನು ತೊಡಿಸುತ್ತಾರೆ . ಕೃಷ್ಣ ಜನ್ಮಾಷ್ಟಮಿಯ ದಿನದಂದು, ಧಾರ್ಮಿಕ ಸ್ಥಳಕ್ಕೆ ಹೋಗಿ ಹಣ್ಣು ಮತ್ತು ಧಾನ್ಯಗಳನ್ನು ದಾನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿದೆ.

ಕೃಷ್ಣ ಜನ್ಮಾಷ್ಟಮಿ ಕೇವಲ ಆಚರಣೆಯಲ್ಲ. ಇದೊಂದು ಜೀವನ ಪ್ರೀತಿ. ಶ್ರೀಕೃಷ್ಣನ ಜೀವನವು ಪ್ರೀತಿ, ಸೌಹಾರ್ದತೆ ಮತ್ತು ಕೆಡುಕಿನ ಮೇಲೆ ಒಳಿತಿನ ವಿಜಯದ ದಾರಿದೀಪವಾಗಿದೆ. ಹಬ್ಬವು ಆಚರಣೆಗಳನ್ನು ಮೀರಿ, ಕರುಣೆ ಮತ್ತು ಸದಾಚಾರದ ಸದ್ಗುಣಗಳನ್ನು ಅಳವಡಿಸಿಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತದೆ.

suddiyaana