ಪಂತ್ ಗೆದ್ರಷ್ಟೇ ಗೋಯೆಂಕಾ ಗಪ್ ಚುಪ್ – SRH ಬ್ಯಾಟರ್ಸ್ ಗೆ ಬ್ರೇಕ್ ಹಾಕ್ತಾರಾ ಶಮಿ?
ಬಿಗ್ ಸ್ಟಾರ್ಸ್ ಇದ್ರೂ LSG ಪ್ರಾಬ್ಲಂ ಏನು?

ಪಂತ್ ಗೆದ್ರಷ್ಟೇ ಗೋಯೆಂಕಾ ಗಪ್ ಚುಪ್ –  SRH ಬ್ಯಾಟರ್ಸ್ ಗೆ ಬ್ರೇಕ್ ಹಾಕ್ತಾರಾ ಶಮಿ?ಬಿಗ್ ಸ್ಟಾರ್ಸ್ ಇದ್ರೂ LSG ಪ್ರಾಬ್ಲಂ ಏನು?

ಇಂದು ಎರಡು ಐಪಿಎಲ್ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ Vs ಸಿಎಸ್‌ಕೆ ಬದ್ಧವೈರಿಗಳ ನಡುವೆ ಕಾದಾಟ ನಡೆದ್ರೆ. ಈ ಪಂದ್ಯಕ್ಕೂ ಮುಂಚೆ ಸನ್‌ರೈಸರ್ಸ್ ಹೈದರಾಬಾದ್ Vs ಲಕ್ನೋ ಸೂಪರ್ ಜೈಂಟ್ಸ್ ಪಂದ್ಯ ರಾಜೀವ್ ಗಾಂಧಿ ಇಂಟ್ರನ್ಯಾಷನ್ ಸ್ಟೇಡಿಯಂ ಹೈಗರಾಬಾದ್‌ನಲ್ಲಿ ಪಂದ್ಯ ನಡೆಯಲಿದೆ. ಈ ಮ್ಯಾಚ್ ಕೂಡ ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ.. ಮೊದಲ ಗೆಲುವಿಗಾಗಿ ಪಂತ್ ಪಡೆ ಹೊಂಚು ಹಾಕಿ ಕುಳಿತಿದ್ರೆ, ಆರ್‌ಸಿಬಿ ವಿರುದ್ಧ ಮೊದಲ ಪಂದ್ಯದಲ್ಲಿ ಸೋತ್ರು ಎರಡನೇ ಪಂದ್ಯದಲ್ಲಿ ಕೆಕೆಆರ್‌ಗೆ ಮಣ್ಣು ಮುಕ್ಕಿಸಿರೋ SRH 2ನೇ ಗೆಲುವನ್ನ ಎದುರು ನೋಡುತ್ತಿದೆ.

Fu  ಯಾರು ಗೆಲ್ಲುವ ಸಾಧ್ಯತೆ ಹೆಚ್ಚು?  

ಹೈದರಾಬಾದ್‌ನ ಹೋಮ್ ಗ್ರೌಂಡ್ ಆಗಿರುವುದರಿಂದ SRHಗೆ ಲಾಭವಿದೆ.  ಇಂದಿನ ಮೊದಲ ಪಂದ್ಯದಲ್ಲಿ  SRH ಸ್ವಲ್ಪ ಫೇವರಿಟ್ ಆಗಿದೆ.  ಹಾಗಂತ ಇಲ್ಲಿ LSG ಸೋಲುತ್ತೆ ಅಂತ ಹೇಳುವುದ್ದಕ್ಕೆ ಆಗಲ್ಲ. ಯಾಕಂದ್ರೆ ಎಲ್‌ಎಸ್‌ಜಿ ಈಗ ಒಂದು ಸೋಲಿನಿಂದ ಕಂಗೆಟ್ಟು ಹೋಗಿದೆ. ಎಲ್‌ಎಸ್‌ಜಿ ಮಾಲೀಕ ಸಂಜಯ್ ಗೋಯಾಂಕ್ ಪಂತ್‌ಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ. ಹಾಗಾಗಿ ಲಕ್ನೋ ಈ ಪಂದ್ಯವನ್ನ ತುಂಬಾ ಚಾಲೆಂಜ್ ಆಗಿ ತೆಗೆದುಕೊಂಡಿದೆ.

 SRH ಗೆ ಪ್ಲಸ್ ಏನು? ಮೈನೆಸ್ ಏನು?

ಎಸ್‌ಆರ್‌ಹೆಚ್‌ನ ಪವರ್ ಅಂದ್ರೆ ಅದು ಬ್ಯಾಟಿಂಗ್..  ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿಯಂತಹ ಬಿಗ್ ಹಿಟ್ಟರ್ ಇದ್ದಾರೆ. ಪವರ್ ಪ್ಲೇಯಲ್ಲಿ ದೊಡ್ಡ ಸ್ಕೋರ್ ಮಾಡುವ ಸಾಮರ್ಥ್ಯ ಹೈದಾರಬಾದ್ ತಂಡಕ್ಕಿದೆ.  ಇನ್ನು ಹೈದರಾಬಾದ್ ಪಿಚ್ ಬ್ಯಾಟಿಂಗ್‌ಗೆ ಪಿಚ್‌ ಆಗಿದ್ದು, ಬಿಗ್ ಸ್ಕೋರ್ ಮಾಡೋ ನಿರೀಕ್ಷೆ ಇದೆ.  ಕೆೇವಲ ಬ್ಯಾಟಿಂಗ್ ಮಾತ್ರ ಅಲ್ಲ ಬೌಲಿಂಗ್‌ನಲ್ಲಿ ಎಸ್‌ಆರ್‌ಹೆಚ್‌ ಬಲವಿದೆ. ಹರ್ಷಲ್ ಪಟೇಲ್, ಜಯದೇವ್,ಕಾರ್ಸೆ, ಅಸ್ಸಾರಿಯಂತ ಬೆಂಕಿ ಬೌಲರ್ ಇದ್ದಾರೆ. ಟಾಪ್ ಆರ್ಡರ್ + ಮಿಡಲ್ ಆರ್ಡರ್ ಆಕ್ರಮಣಕಾರಿ ಬ್ಯಾಟಿಂಗ್  ಕೈಹಿಡಿದ್ರೆ ಒಳ್ಳೆ ಸ್ಕೋರ್ ಬರಲಿದೆ.

SRH ಗೆಲ್ಲುವುದ್ದಕ್ಕೆ ಏನು ಮಾಡಬೇಕು?

SRH ಗೆಲ್ಲಬೇಕಾದ್ರೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಆಗಿರೋ ಹೆಡ್ ಮತ್ತು ಅಭಿಷೇಕ್ ದೊಡ್ಡ ಸ್ಕೋರ್ ಕಟ್ಟಬೇಕು. ಕ್ಲಾಸೆನ್ ಅಥವಾ ಲಿವಿಂಗ್‌ಸ್ಟೋನ್ ಮಿಡಲ್‌ನಲ್ಲಿ ಆಕ್ರಮಣ ಮಾಡಬೇಕು. ಕಮ್ಮಿನ್ಸ್ ಮತ್ತು ಹರ್ಷಲ್ ಡೆತ್ ಓವರ್‌ಗಳಲ್ಲಿ ಚೆನ್ನಾಗಿ ಬೌಲ್ ಮಾಡಬೇಕು.

ಪಂತ್ ಪಡೆ ಪ್ಲಸ್ ಏನು? ಮೈನೆಸ್ ಏನು?

ಈಗಾಗಲೇ ಪಂತ್ ಪಡೆ ಮೊದಲ ಪಂದ್ಯದಲ್ಲಿ ಸೋತು, ತನ್ನ ಮಾಲೀಕರ ಜೊತೆ ಉಗಿಸಿಕೊಂಡಿದೆ. ಹೀಗಾಗಿ ಎಸ್ಆರ್‌ಹೆಚ್ ವಿರುದ್ಧ ಗೆಲುವು LSGಗೆ ಅನಿವಾರ್ಯ. ಲಕ್ನೋ ಪೇಸ್ ಅಟ್ಯಾಕ್ ಬಲಿಷ್ಠವಾಗಿದೆ.    ಮೊಹಮ್ಮದ್ ಶಮಿ, ಮಯಾಂಕ್ ಯಾದವ್, ಅನ್ರಿಚ್  , ಮೊಹ್ಸಿನ್ ಖಾನ್ ಬಲವಿದೆ. ಇದು IPLನಲ್ಲಿ ಒಂದು ಅತ್ಯುತ್ತಮ ಪೇಸ್ ಯೂನಿಟ್ ಆಗಬಹುದು.   ಬ್ಯಾಟಿಂಗ್‌ನಲ್ಲಿ ಮಿಡಲ್ ಆರ್ಡರ್ ಸಖತ್ ಸ್ಟ್ರಾಂಗ್ ಇದೆ.  ಕ್ಯಾಪ್ಟನ್ ರಿಷಬ್ ಪಂತ್ ,  ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್‌ಬಿಗ್ ರನ್‌ಗಳಿಸುವ ಸಾಮರ್ಥ್ಯವನ್ನ ಹೊಂದಿದ್ದಾರೆ. ಪೇಸ್ ಬೌಲಿಂಗ್ + ಮಿಡಲ್ ಆರ್ಡರ್ ಫೈರ್‌ಪವರ್ ಪ್ಲೇಸ್ ಆದ್ರೆ,  ಓಪನಿಂಗ್ ಅಥವಾ ಲೋಯರ್ ಆರ್ಡರ್ ಸ್ಥಿರತೆ ಲಕ್ನೋಗೆ ಮೈನೆಸ್ ಆಗಲಿದೆ.

LSG ಗೆಲ್ಲುವುದ್ದಕ್ಕೆ ಏನ್ ಮಾಡಬೇಕು?  ಲಕ್ನೋ ಗೆಲ್ಲಬೇಕಂದ್ರೆ ಪಂತ್ ಮತ್ತು ಪೂರನ್ ಮಿಡಲ್ ಆರ್ಡರ್‌ನಲ್ಲಿ ಗೇಮ್ ಚೇಂಜ್ ಮಾಡಬೇಕು. ಶಮಿ  + ಮಯಾಂಕ್ ಯಾದವ್ನ ಪೇಸ್ ಅನ್ನು SRH ಟಾಪ್ ಆರ್ಡರ್ ವಿರುದ್ಧ ಬಳಸಬೇಕು.

Kishor KV