RCB ಪ್ಲೇ ಆಫ್ SRH ಕೈಯಲ್ಲಿ! – LSG ಗೆದ್ರೆ ಬೆಂಗಳೂರು ಟೀಂ ಔಟ್
ರಾಹುಲ್ ಸೋತ್ರೆ ಕರ್ನಾಟಕ ಸೇಫ್

RCB ಪ್ಲೇ ಆಫ್ SRH ಕೈಯಲ್ಲಿ! – LSG ಗೆದ್ರೆ ಬೆಂಗಳೂರು ಟೀಂ ಔಟ್ರಾಹುಲ್ ಸೋತ್ರೆ ಕರ್ನಾಟಕ ಸೇಫ್

ಐಪಿಎಲ್ ಸೀಸನ್ 17ನ ಫಸ್ಟ್ ಆಫ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದ್ದ ಆರ್​ಸಿಬಿ ಸೆಕೆಂಡ್ ಆಫ್ ನಲ್ಲಿ ಚೇತರಿಕೆ ಕಂಡಿದೆ. ಹ್ಯಾಟ್ರಿಕ್ ಗೆಲುವಿನ ಮೂಲಕ ಪ್ಲೇಆಫ್ ಕನಸನ್ನ ಜೀವಂತವಾಗಿರಿಸಿಕೊಂಡಿದೆ. ಆದ್ರೆ ಟಾಪ್ ಫೋರ್​ಗೆ ಹೋಗಲು ಬೆಂಗಳೂರು ತಂಡಕ್ಕೆ ಸಾಲು ಸಾಲು ಅಗ್ನಿಪರೀಕ್ಷೆಗಳಿವೆ. ತನ್ನ ಮುಂದಿನ ಮೂರು  ಮ್ಯಾಚ್​ಗಳನ್ನ ಗೆಲ್ಲೋದ್ರ ಜೊತೆಗೆ ಇತರೆ ತಂಡಗಳ ಸೋಲು ಗೆಲುವು ಕೂಡ ಪ್ರಮುಖ ಪಾತ್ರ ವಹಿಸುತ್ತೆ. ಅದ್ರಲ್ಲೂ ಬುಧವಾರ ನಡೆಯಲಿರುವ ಎಸ್​ಆರ್​ಹೆಚ್ ಮತ್ತು ಎಲ್​ಎಸ್​ಜಿ ತಂಡಗಳ ಪಂದ್ಯ ಆರ್​ಸಿಬಿ ಪ್ಲೇ ಆಫ್ ಭವಿಷ್ಯವನ್ನ ನಿರ್ಧರಿಸಲಿದೆ. ಹಾಗಾದ್ರೆ ಲಕ್ನೋ ವರ್ಸಸ್ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಯಾರು ಗೆಲ್ಲಬೇಕು..? ಯಾರು ಸೋತ್ರೆ ಆರ್​ಸಿಬಿಗೆ ಪ್ಲಸ್ ಪಾಯಿಂಟ್ ಆಗುತ್ತೆ..? ಪಾಯಿಂಟ್ಸ್ ಟೇಬಲ್​ನಲ್ಲಿ ಏನೆಲ್ಲಾ ಚೇಂಜಸ್ ಆಗಲಿದೆ ಅನ್ನೋ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IPLನಲ್ಲಿ ಅಬ್ಬರಿಸದ ರೋಹಿತ್ ವಿಶ್ವಕಪ್ ಗೆಲ್ತಾರಾ? – ಫ್ಯಾನ್ಸ್ ಕೆರಳಿದ್ದು ಯಾಕೆ?  

ಬುಧವಾರ ಐಪಿಎಲ್​ನ 57ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇಆಫ್​ಗೆ ಹತ್ತಿರವಾಗಲಿದೆ. ಹಾಗೇ ಅಂಕ ಪಟ್ಟಿಯಲ್ಲಿ ಟಾಪ್ 3 ಪ್ಲೇಸ್​ಗೆ ಏರಲಿದೆ. ಈ ಪಂದ್ಯದಲ್ಲಿ ಯಾರು ಗೆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಳ್ಳೇದು ಎಂಬ ಚರ್ಚೆಗಳು ನಡೀತಿವೆ. ಸದ್ಯ ಗುಜರಾತ್ ವಿರುದ್ಧದ ಪಂದ್ಯದ ಬಳಿಕ ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿರುವ ಆರ್​ಸಿಬಿ ಪ್ಲೇಆಫ್ ಪ್ರವೇಶವನ್ನು ಎದುರು ನೋಡುತ್ತಿದೆ. ಹೀಗಾಗಿ ಉಳಿದ ತಂಡಗಳ ಫಲಿತಾಂಶ ಕೂಡ RCB ಪಾಲಿಗೆ ಇಲ್ಲಿ ಮುಖ್ಯವಾಗುತ್ತದೆ. ಇಂದಿನ ಮ್ಯಾಚ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಣ ಮುಖಾಮುಖಿಯಲ್ಲಿ ಆರ್​ಸಿಬಿ ಪಾಲಿಗೆ ಎಸ್​ಆರ್​ಹೆಚ್ ಗೆಲ್ಲುವುದು ಉತ್ತಮ. ಏಕೆಂದರೆ ಸನ್​ರೈಸರ್ಸ್ ಹೈದರಾಬಾದ್ ತಂಡ ಆಡಿರುವ ಹನ್ನೊಂದು ಪಂದ್ಯಗಳ ಪೈಕಿ 6ರಲ್ಲಿ ಗೆಲುವು ಕಂಡು ಐದರಲ್ಲಿ ಸೋಲು ಕಂಡಿದೆ. ಈ ಮೂಲಕ 12 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ 4ನೇ ಸ್ಥಾನದಲ್ಲಿದೆ. ಎಲ್​ಎಸ್​ಜಿ ವಿರುದ್ಧ ಗೆದ್ದರೆ 14 ಪಾಯಿಂಟ್ಸ್​ನೊಂದಿಗೆ 3ನೇ ಸ್ಥಾನಕ್ಕೇರಲಿದೆ.

ಇತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಹನ್ನೊಂದು ಪಂದ್ಯಗಳನ್ನ ಆಡಿದ್ದು 6ರಲ್ಲಿ ಗೆಲುವು ಐದರಲ್ಲಿ ಸೋಲು ಕಂಡಿದೆ. 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಒಂದು ವೇಳೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೋತರೆ ಪ್ಲೇಆಫ್ ಪ್ರವೇಶಿಸುವ ಹಾದಿ ಮತ್ತಷ್ಟು ಕಠಿಣವಾಗಲಿದೆ. ಇದರ ನಡುವೆ ಆರ್​ಸಿಬಿ ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಹಿಂದಿಕ್ಕಿ 12 ಅಂಕಗಳೊಂದಿಗೆ 5ನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಹೀಗಾಗಿ ಆರ್​ಸಿಬಿ ಪಾಲಿಗೆ ಇಂದಿನ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡ ಗೆಲ್ಲುವುದು ಉತ್ತಮ. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಆಫ್ ಹಾದಿ ಮತ್ತಷ್ಟು ಸುಗಮವಾಗಲಿದೆ. ಫ್ಯಾನ್ಸ್ ಕೂಡ ಎಸ್​ಆರ್​ಹೆಚ್ ತಂಡದ ಗೆಲುವನ್ನು ಎದುರು ನೋಡುತ್ತಿದ್ದಾರೆ.

ಸನ್ ರೈಸರ್ಸ್ ಹೈದ್ರಾಬಾದ್ ತಂಡ ಆರಂಭದಲ್ಲಿ ಒಳ್ಳೆಯ ಪರ್ಫಾಮೆನ್ಸ್ ನೀಡಿದ್ರೂ ನಂತರದ ಪಂದ್ಯಗಳಲ್ಲಿ ಡಲ್ ಆಗಿದೆ. ಯಾಕಂದ್ರೆ ಆ ತಂಡಕ್ಕೆ ಪ್ಲಸ್ ಮತ್ತೆ ಮೈನಸ್ ಎರಡೂ ಬ್ಯಾಟ್ಸ್​ಮನ್​ಗಳೇ. ಈ ಬಾರಿ ಸತತ ಮೂರು ಬಾರಿ 250 ಪ್ಲಸ್ ರನ್ ಹೊಡೆದಿದ್ದ ಹೈದ್ರಾಬಾದ್ ಪ್ಲೇಯರ್ಸ್ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸ್ಕೋರ್ ಮಾಡಿದ್ರು. ಆದ್ರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲನ್ನು ಕಂಡಿದೆ. ಇದಕ್ಕೆ ಮೇನ್ ರೀಸನ್ ಅಂದ್ರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯತೆ. ಸದ್ಯ ಸನ್‌ರೈಸರ್ಸ್ ಹೈದರಾಬಾದ್ ಈಗ ಟೂರ್ನಿಯಲ್ಲಿ ಇನ್ನೂ 3 ಲೀಗ್ ಪಂದ್ಯಗಳನ್ನು ಆಡಬೇಕಿದೆ. ಚೆನ್ನೈ ಮತ್ತು ಲಕ್ನೋ ಕೂಡ ಅಷ್ಟೇ ಸಂಖ್ಯೆಯ ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ ಇಲ್ಲಿ ಪ್ಲೇಆಫ್‌ನ 3 ಮತ್ತು 4ನೇ ಸ್ಥಾನಕ್ಕಾಗಿ ಈ 3 ತಂಡಗಳಿಗೆ ಅವಕಾಶವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಲಕ್ನೋ ಮತ್ತು ಹೈದ್ರಾಬಾದ್ ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸದ್ಯ ಪಾಯಿಂಟ್ಸ್ ಟೇಬಲ್​ನಲ್ಲಿ ಕೆಕೆಆರ್ ತಂಡವು ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ಸೆಕೆಂಡ್ ಪ್ಲೇಸ್​ನಲ್ಲಿದೆ. ಈ ಎರಡೂ ತಂಡಗಳು ಪ್ಲೇಆಫ್​ಗೆ ಏರೋದು ಕನ್ಫರ್ಮ್ ಆಗಿದೆ.  ಇನ್ನುಳಿದ ಎರಡು ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೀತಿದೆ. ಕಳೆದ ಮೂರು ಮ್ಯಾಚ್​ಗಳಲ್ಲಿ ಹ್ಯಾಟ್ರಿಕ್ ಗೆಲುವು ಕಂಡಿರುವ ಆರ್​ಸಿಬಿ ಪ್ಲೇಆಫ್ ಪ್ರವೇಶಿಸೋ ನಿರೀಕ್ಷೆಯಲ್ಲಿದ್ರೂ ಅದು ಅಷ್ಟು ಸುಲಭವಲ್ಲ. ಆರ್​ಸಿಬಿ ಈವರೆಗೂ ಹನ್ನೊಂದು ಪಂದ್ಯಗಳನ್ನ ಆಡಿದ್ದು ನಾಲ್ಕರಲ್ಲಿ ಗೆಲುವು ಕಂಡಿದೆ. ಕೊನೆಯ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಒಟ್ಟಾರೆ 8 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಆರ್​ಸಿಬಿ ಇನ್ನು ಮೂರು ಪಂದ್ಯಗಳನ್ನ ಆಡಬೇಕಿದೆ. ಈ ಮೂರೂ ಮ್ಯಾಚ್​ಗಳನ್ನ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಮೇ 9ರಂದು ಅಂದ್ರೆ ಗುರುವಾರ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಹಾಗೇ ಮೇ 12 ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಎದುರಿಸಲಿದೆ. ಇನ್ನು ಮೇ 18ರಂದು ಆರ್​ಸಿಬಿ ಮತ್ತು ಸಿಎಸ್​ಕೆ ಮ್ಯಾಚ್ ನಡೆಯಲಿದೆ. ಈ ಮೂರೂ ಪಂದ್ಯಗಳನ್ನ ಆರ್​ಸಿಬಿ ಗೆದ್ದು ಇತರೆ ತಂಡಗಳ ಸೋಲು ಗೆಲುವು ನೆಟ್​ರನ್ ರೇಟ್ ತಾಳೆ ಆದ್ರೆ ಮಾತ್ರವೇ ಆರ್​ಸಿಬಿ ಪ್ಲೇಆಫ್​ಗೆ ಹೋಗುತ್ತೆ. ಇಲ್ಲದಿದ್ರೆ ಈ ಸಲವೂ ಕಪ್ ನಮ್ದಲ್ಲ ಅಂತಾ ಮುಂದಿನ ಸಲದ ಐಪಿಎಲ್ ಸೀಸನ್​ಗಾಗಿ ಫ್ಯಾನ್ಸ್ ಎದುರು ನೋಡಬೇಕಾಗುತ್ತೆ ಅಷ್ಟೇ.

Shwetha M