SRHಗೆ ಗುನ್ನಾ ಇಡುತ್ತಾ GT? – ಗೆದ್ದವ್ರು ಟಾಪರ್.. ಸೋತ್ರೆ ಸಂಕಷ್ಟ
ಟಾಪ್-4 ಟಾರ್ಗೆಟ್ ಗೆಲ್ಲೋದ್ಯಾರು?

SRHಗೆ ಗುನ್ನಾ ಇಡುತ್ತಾ GT? – ಗೆದ್ದವ್ರು ಟಾಪರ್.. ಸೋತ್ರೆ ಸಂಕಷ್ಟಟಾಪ್-4 ಟಾರ್ಗೆಟ್ ಗೆಲ್ಲೋದ್ಯಾರು?

ಪ್ಲೇ ಆಫ್ಸ್ ರೇಸ್ ನಲ್ಲಿರೋ ತಂಡಗಳಿಗೆ ಇನ್ಮುಂದೆ ಒಂದೊಂದು ಪಂದ್ಯವೂ ಕ್ರೂಶಿಯಲ್. ಯಾಕಂದ್ರೆ ಪಾಯಿಂಟ್ಸ್ ಪಟ್ಟಿಯಲ್ಲಿ ಎಲ್ಲಾ ಉಲ್ಟಾಪಲ್ಟಾ ಆಗಿಬಿಡುತ್ತೆ. ಫಸ್ಟ್ ಆಫ್​ನಲ್ಲಿ ಸೋಲೇ ಕಾಣದೆ ನಂಬರ್ 1 ಸ್ಥಾನದಲ್ಲಿದ್ದ ಪಂಜಾಬ್ ಈಗ ಸತತ ನಾಲ್ಕು ಮ್ಯಾಚ್ ಸೋತು 4ನೇ ಸ್ಥಾನದಲ್ಲಿದೆ. ಅತ್ತ ಸ್ಟಾರ್ಟಿಂಗ್ ಟ್ರಬಲ್​ನಲ್ಲಿದ್ದ ಗುಜರಾತ್ ಟಾಪ್-3ನಲ್ಲಿ ಮೆರೀತಿದೆ. ಸ್ಟಿಲ್ ಈವರೆಗೂ ಯಾರಿಗೂ ಪ್ಲೇಆಫ್ಸ್ ಕನ್ಫರ್ಮ್ ಆಗಿಲ್ಲ. ಬಟ್ ಇವತ್ತಿನ ಮ್ಯಾಚ್ ಒಬ್ರಿಗೆ ಸೇಫ್ ಜೋನ್ ಆಗುತ್ತೆ.

ಇದನ್ನೂ ಓದಿ : ಗೆಲುವಿನ ಟ್ರ್ಯಾಕ್ ಬಿಟ್ಟ PBKS – RCB ಟ್ರೋಲ್ ಮಾಡಿ ಕೆಟ್ರಾ?

ರಿವೇಂಜ್ ಮ್ಯಾಚ್​​ಗಳ ರಿಯಾಲಿಟಿ ಇದೆ ನೋಡಿ. ಫಸ್ಟ್ ಆಫ್​ನಲ್ಲಿ ಎಷ್ಟೇ ಮ್ಯಾಚಸ್ ಗೆದ್ರೂ ಅಂಥಾ ದೊಡ್ಡ  ಲಾಭ ಏನಿರಲ್ಲ. ಬಟ್ ಸೆಕೆಂಡ್ ಆಫ್​​ನಲ್ಲಿ ಕಂಟಿನ್ಯೂಯಸ್ ಸೋಲ್ತಾ ಇದ್ರೆ ಕೆಳಗೆ ಜಾರ್ತಾ ಹೋಗ್ಬೇಕು. ಈಗ ಆಗಿರೋದೂ ಅದೇ. ಅದ್ರಲ್ಲೂ ಇವತ್ತಿನ ಪಂದ್ಯ ಎರಡೂ ತಂಡಗಳಿಗೆ ಮಸ್ಟ್ ವಿನ್ ಮ್ಯಾಚ್. ಅಂಕಪಟ್ಟಿಯಲ್ಲಿ ಟಾಪ್-2 ಮತ್ತು ಟಾಪ್-3ನಲ್ಲಿರೋ ಹೈದ್ರಾಬಾದ್ ಮತ್ತು ಗುಜರಾತ್ ನಡುವೆ ಮ್ಯಾಚ್ ಗೆದ್ದವ್ರು ಟೇಬಲ್ ಟಾಪರ್ ಆಗ್ತಾರೆ. ಸೋತವರಿಗೆ ಸಂಕಷ್ಟ ಗ್ಯಾರಂಟಿ.

ಹೈದ್ರಾಬಾದ್ & ಗುಜರಾತ್ ನಡುವಿನ ಪಂದ್ಯ ಗೆದ್ದವ್ರಿಗೆ ಲಾಭ!

ಪ್ರಸ್ತುತ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂಬರ್ 1ಸ್ಥಾನದಲ್ಲಿದೆ. ಹೈದ್ರಾಬಾದ್ ಎರಡು ಹಾಗೇ ಗುಜರಾತ್ ಮೂರನೇ ಸ್ಥಾನದಲ್ಲಿದೆ. ವಿಷ್ಯ ಅಂದ್ರೆ ಈ ಮೂರೂ ತಂಡಗಳದ್ದೂ ಸೇಮ್ ಪಾಯಿಂಟ್ಸ್.. ತಲಾ 14 ಅಂಕ ಇದೆ. ನೆಟ್ ರನ್ ರೇಟ್ ಆಧಾರದಲ್ಲಿ ಮೇಲೆ ಕೆಳಗೆ ಸ್ಥಾನ ಇದೆ. ಬಟ್ ಇವತ್ತಿನ ಮ್ಯಾಚಲ್ಲಿ ಹೈದ್ರಾಬಾದ್ ಮತ್ತು ಗುಜರಾತ್ ಮುಖಾಮುಖಿ ಆಗ್ತಿದ್ದು ಗೆದ್ದವ್ರು 16 ಅಂಕಗಳೊಂದಿಗೆ ಟೇಬಲ್ ಟಾಪರ್ ಆಗ್ತಾರೆ. ಅಂದ್ರೆ ಸೇಫ್ ಜೋನ್​ಗೆ ಹೋಗ್ತಾರೆ. ಆದ್ರೆ ಸೋತವ್ರು 14 ಅಂಕಗಳಲ್ಲೇ ಉಳಿಯುತ್ತಾರೆ. ಪ್ಲೇ ಆಫ್​​ಗೆ ಹೋಗೋಕೆ ನೆಕ್ಸ್​ಟ್ ಚಾನ್ಸ್ ಏನೋ ಇರುತ್ತೆ. ಬಟ್ ಒಂದು ಪಂದ್ಯ ಅವ್ರಿಗೆ ಮೈನಸ್ ಆಗುತ್ತೆ. ಯಾಕಂದ್ರೆ ಪ್ಲೇ ಆಫ್ಸ್ ರೇಸ್​ನಲ್ಲಿರೋ 7 ತಂಡಗಳ ಪೈಕಿ ಕೆಕೆಆರ್ ಬಿಟ್ರೆ ಉಳಿದೆಲ್ಲಾ ತಂಡಗಳಿಗೆ ಇನ್ಮುಂದೆ ಉಳಿದಿರೋದೇ ಮೂರ್ಮೂರು ಮ್ಯಾಚ್. ಸೋ ಮುಂದಿನ ಪ್ರತೀ ಪಂದ್ಯವೂ ತುಂಬಾನೇ ಮುಖ್ಯ ಆಗುತ್ತೆ. ಒಂದು ಸೋಲು ಅತಿದೊಡ್ಡ ಪೆಟ್ಟು ಕೊಡ್ಬೋದು. ಅದ್ರಲ್ಲೂ ಟೇಬಲ್ ಟಾಪರ್​ಗಳ ನಡುವಿನ ಕ್ಲ್ಯಾಶ್ ಎಲ್ಲಾ ಲೆಕ್ಕಾಚಾರಗಳನ್ನ ಉಲ್ಟಾಪಲ್ಟಾ ಮಾಡಿಬಿಡುತ್ತೆ.

20 ಅಂಕಗಳ ರೇಸ್!

ಬೆಂಗಳೂರು, ಗುಜರಾತ್ ಮತ್ತು ಹೈದರಾಬಾದ್ ಗೆ ತಲಾ 3 ಪಂದ್ಯ ಬಾಕಿ

19 ಅಂಕಗಳ ರೇಸ್!

ಪಂಜಾಬ್ ಕಿಂಗ್ಸ್ ತಂಡ ಪ್ರಸ್ತುತ 13 ಅಂಕ, 3 ಪಂದ್ಯಗಳು ಬಾಕಿ

18 ಅಂಕಗಳ ರೇಸ್!

ಚೆನ್ನೈ & ರಾಜಸ್ಥಾನ ಸದ್ಯ 12 ಅಂಕ.. 3 ಪಂದ್ಯಗಳು ಬಾಕಿ

17 ಅಂಕಗಳ ರೇಸ್!

ಕೊಲ್ಕತ್ತಾ ಸದ್ಯ 13 ಅಂಕಗಳಿದ್ದು ಇನ್ನೂ ನಾಲ್ಕು ಪಂದ್ಯಗಳು ಬಾಕಿ

ಅಲ್ಲಿಗೆ ಈ ಸೀಸನ್​ನಲ್ಲಿ ಇನ್ನು ಮ್ಯಾಕ್ಸಿಮಮ್ ಅಂದ್ರೆ 20 ಅಂಕಗಳನ್ನ ಗಳಿಸೋದೇ ಹೈಯೆಸ್ಟ್ ನಂಬರ್ಸ್ ಆಗುತ್ತೆ. ಌಂಡ್ 17 ಹಾಗೇ ಅದಕ್ಕಿಂತ ಹೆಚ್ಚಿನ ನಂಬರ್ ಪಡೆದುಕೊಳ್ಳೋಕೆ 7 ತಂಡಗಳು ಅರ್ಹತೆ ಪಡೆದಿವೆ. ಇನ್ನು ಫಸ್ಟ್ ಆಫ್ಸ್​​ನಲ್ಲಿ ಬಾಟಮ್ ಟೀಮ್ಸ್ ಅನ್ಕೊಂಡಿದ್ದ ಕೆಕೆಆರ್ ಸತತ ನಾಲ್ಕು ಪಂದ್ಯ ಗೆದ್ದು ಮುನ್ನುಗ್ತಿದೆ. ಚೆನ್ನೈ ಸತತ ಮೂರು ಪಂದ್ಯ ಗೆದ್ದು ಅದ್ಭುತ ಟ್ರ್ಯಾಕ್​ನಲ್ಲಿದೆ. ಅತ್ತ ಗುಜರಾತ್ ಕೂಡ ಸತತ 4 ಪಂದ್ಯಗಳನ್ನ ಗೆದ್ದಿದೆ. ಬಟ್ ಪಂಜಾಬ್ ಮಾತ್ರ ಸತತ 4 ಪಂದ್ಯಗಳನ್ನ ಸೋತು ಮೊಮೆಂಟಮ್ ಕಳ್ಕೊಂಡಿದ್ದಾರೆ. ಇತ್ತ ಆರ್​ಸಿಬಿ ಬ್ಯಾಕ್ ಟು ಬ್ಯಾಕ್ ಸೋತ್ರೂ ಮುಂಬೈ ವಿರುದ್ಧ ಲಾಸ್ಟ್ ಬಾಲ್​ನಲ್ಲಿ ಗೆದ್ದು ಮ್ಯಾಜಿಕ್ ಮಾಡಿದೆ. ಹೀಗಾಗಿ ಯಾರದ್ದೋ ಗೆಲುವು ಇನ್ಯಾರದ್ದೋ ಸೋಲು ಮತ್ತೊಬ್ಬರ ಪ್ಲೇ ಆಫ್ಸ್ ಜರ್ನಿಯನ್ನ ಡಿಸೈಡ್ ಮಾಡೋ ಚಾನ್ಸಸ್ ಇರುತ್ತೆ. ಹೀಗಾಗಿ ಪ್ಲೇ ಆಫ್ ರೇಸ್​ನಲ್ಲಿರೋ ತಂಡಗಳಿಗೆ ಇರೋ ಅಜೆಂಡಾ ಒಂದೇ.. ಗೆಲ್ಬೇಕು ಗೆಲ್ಬೇಕು ಗೆಲ್ಬೇಕು. ಅದೊಂದೇ ಮಂತ್ರ ಪಾಲಿಸಿದ್ರೆ ಪ್ಲೇ ಆಫ್ ಟಿಕೆಟ್​ ತಡೆಯೋಕೆ ಯಾರಿಂದಲೂ ಸಾಧ್ಯನೇ ಇಲ್ಲ.

Shantha Kumari

Leave a Reply

Your email address will not be published. Required fields are marked *