ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಹೈದರಾಬಾದ್ – ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ ಎಸ್‌ಆರ್‌ಹೆಚ್

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಹೈದರಾಬಾದ್ – ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ ಎಸ್‌ಆರ್‌ಹೆಚ್

ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಮೂಲಕ ಶುಭಾರಂಭ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಸತತ 2ನೇ ಸೋಲು ಅನುಭವಿಸಿದೆ.  ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಮುಗ್ಗರಿಸಿದೆ. ಸೋಲಿನಿಂದ ಕಂಗೆಟ್ಟಿದ್ದ ಎಸ್‌ಆರ್‌ಹೆಚ್ ಇದೀಗ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಏ. 11 ರಿಂದ ಮೇ 29 ರವರೆಗೆ ಬೇಸಿಗೆ ರಜೆ- ರಜೆಯಲ್ಲಿ ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಿಸಲಾಗುತ್ತಾ?

ರಾಜೀವ್​ ಗಾಂಧಿ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​​ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್​​​​ ಚೆನ್ನೈ ಸೂಪರ್​​ ಕಿಂಗ್ಸ್ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ಗೆದ್ದು ಬೀಗಿದೆ. ಸಿಎಸ್‌ಕೆ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಹೈದರಾಬಾದ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಚೆನ್ನೈ ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಸನ್​ರೈಸರ್ಸ್​ ಹೈದರಾಬಾದ್​ ತಂಡ ಕೇವಲ 18.1 ಓವರ್​​ನಲ್ಲಿ 4 ವಿಕೆಟ್​ ನಷ್ಟಕ್ಕೆ 166 ರನ್​​ ಗಳಿಸೋ ಮೂಲಕ ಗೆಲುವು ಸಾಧಿಸಿದೆ. ಹೈದರಾಬಾದ್​ ಪರ ಟ್ರಾವಿಸ್​ ಹೆಡ್​​ 31 ರನ್​ ಗಳಿಸಿದ್ರು. ಅಭಿಶೇಕ್​ ಶರ್ಮಾ ಕೇವಲ 12 ಬಾಲ್​ನಲ್ಲಿ 4 ಸಿಕ್ಸರ್​​, 3 ಫೋರ್​ ಸಮೇತ 37 ರನ್​ ಸಿಡಿಸಿದ್ರು. ಏಡನ್​ ಮರ್ಕ್ರಮ್​​ 50, ಶಾಬಾಜ್​ ಅಹ್ಮದ್​​ 18, ಕ್ಲಾಸೆನ್​ 10, ನಿತೀಶ್​ ರೆಡ್ಡಿ 14 ರನ್​ ಗಳಿಸಿದ್ರು.

ಇನ್ನು, ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಚೆನ್ನೈ ಪರ ರಾಚಿನ್ ರವೀಂದ್ರ 12, ಗಾಯಕ್ವಾಡ್​​ 26, ರಹಾನೆ 35, ದುಬೆ 45, ಜಡೇಜಾ 31, ಮಿಚೆಲ್​​ 13, ಧೋನಿ 1 ರನ್​ ಗಳಿಸಿದ್ರು.

Shwetha M