SRH ತಂಡದ ಮಾಲಕಿ ಕಾವ್ಯ ಮಾರನ್ ಮದುವೆಗೆ ಸಿದ್ಧತೆ –ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ವಿವಾಹ ಫಿಕ್ಸ್

ಸನ್ರೈಸರ್ಸ್ ಹೈದ್ರಾಬಾದ್ ತಂಡ ಈಗಾಗಲೇ ಪ್ಲೇಆಫ್ ಗೆ ಎಂಟ್ರಿಪಡೆದಿದೆ. ತಂಡದ ಓನರ್ ಕಾವ್ಯಮಾರನ್ ಕೂಡಾ ತಂಡದ ಭರ್ಜರಿ ಪ್ರದರ್ಶನದಿಂದ ಖುಷಿಯಾಗಿದ್ದಾರೆ. ಇದೇ ಸಂಭ್ರಮದ ನಡುವೆ ಕಾವ್ಯ ಮಾರನ್ ಮದುವೆ ಸುದ್ದಿ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ:RCB ಸಕ್ಸಸ್ ಸೀಕ್ರೆಟ್ DK – ಮೆಂಟರ್ ಪಟ್ಟದ ಹಿಂದೆ ಕೊಹ್ಲಿ ಆಟ!
SRH ಮಾಲಕಿ ಕಾವ್ಯ ಮಾರನ್ ಐಪಿಎಲ್ ಬಂದಾಗ ಸದಾ ಸುದ್ದಿಯಲ್ಲಿರುತ್ತಾರೆ. ತಂಡ ಗೆದ್ದಾಗ ಸಂಭ್ರಮಿಸುವುದು, ತಂಡ ಸೋತಾಗ ಬೇಜಾರಿಲ್ಲರುವುದು, ಹೈದ್ರಾಬಾದ್ ತಂಡ ಕಣಕ್ಕಿಳಿದಾಗ ಕಾವ್ಯ ಮಾರನ್ ಸಂಭ್ರಮ ನೋಡೋದೇ ಅಭಿಮಾನಿಗಳಿಗೆ ಖುಷಿ. ಇದೀಗ ಕಾವ್ಯ ಪರ್ಸನಲ್ ಲೈಫ್ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾವ್ಯ ಮಾರನ್ ಪ್ರೀತಿಯಲ್ಲಿ ಬಿದ್ದಾರಂತೆ. ಸೂಪರ್ ಸ್ಟಾರ್ ರಜನೀಕಾಂತ್ ಅವರ ಸಂಬಂಧಿ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಡೇಟಿಂಗ್ ನಡೆಸ್ತಾ ಇದ್ದಾರೆ. ಶ್ರೀಘ್ರದಲ್ಲೇ ಮದ್ವೆ ಕೂಡ ಆಗಲಿದ್ದಾರೆ ಅನ್ನೋ ಮಾತು ಕೇಳಿಬಂದಿದೆ. ಕಾವ್ಯ ಮಾರನ್ ಹಾಗೂ ಅನಿರುದ್ಧ್ ಕಳೆದ ಕೆಲವು ತಿಂಗಳಿನಿಂದ ಡೇಟಿಂಗ್ ನಡೆಸ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಅನಿರುದ್ಧ್ ರವಿಚಂದರ್ ಹುಟ್ಟಿ, ಬೆಳೆದಿದ್ದೆಲ್ಲಾ ಚೆನ್ನೈನಲ್ಲೇ. ರವಿಚಂದರ್ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ರಜನಿಕಾಂತ್ ಪತ್ನಿ ಲತಾ ಅವರ ಸೋದರ ಸಂಬಂಧಿ. ಹಾಗಾಗಿ ಚಿತ್ರರಂಗಕ್ಕೆ ಬರೋದು ಕಷ್ಟವಾಗಲಿಲ್ಲ. ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಧನುಷ್ ನಟಿಸಿದ ‘3’ ಚಿತ್ರಕ್ಕೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದ್ರು. ಆ ಚಿತ್ರದ ‘ಕೊಲವೆರಿ ಡಿ’ ಸಾಂಗ್ ವಿಶ್ವದಾದ್ಯಂತ ಸದ್ದು ಮಾಡಿತ್ತು. ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳಿಗೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದರು. ನೋಡ ನೋಡುತ್ತಲೇ ಸೌತ್ ಸಿನಿದುನಿಯಾದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಪಟ್ಟಕ್ಕೇರಿದರು. ತಮ್ಮ ಸೂಪರ್ ಹಿಟ್ ಸಂಗೀತದಿಂದ ಸೌತ್ ಸಿನಿದುನಿಯಾದಲ್ಲಿ ರಾಕ್ಸ್ಟರ್ ಅಂತ್ಲೇ ಅನಿರುದ್ಧ್ ಜನಪ್ರಿಯರಾಗಿದ್ದಾರೆ.
ಅನಿರುದ್ಧ್ ರವಿಚಂದರ್ ಅವರ ಚಿಕ್ಕಪ್ಪ ಸೂಪರ್ಸ್ಟಾರ್ ರಜನಿಕಾಂತ್ ಮದುವೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದು ವರದಿಯಾಗಿದೆ. ಅನಿರುದ್ಧ್ ಅವರ ತಾಯಿ ಲಕ್ಷ್ಮಿ, ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರ ಸಹೋದರಿ. ಹೀಗಾಗಿ ಸಂಬಂಧದಲ್ಲಿ ಅನಿರುದ್ಧ್ ಅವರಿಗೆ ರಜನಿಕಾಂತ್ ಚಿಕ್ಕಪ್ಪ.ಸ್ವತಃ ರಜನಿಕಾಂತ್ ಅವರೇ ಕಲಾನಿಧಿ ಮಾರನ್ ಅವರೊಂದಿಗೆ ಮಾತನಾಡಿ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರನ್ನು ಆಶೀರ್ವದಿಸುವಂತೆ ಕೇಳಿಕೊಂಡಿದ್ದಾರೆ. ಎರಡೂ ಕಡೆಯ ಹಿರಿಯರು ಮದುವೆಗೆ ಬಹುತೇಕ ಒಪ್ಪಿಕೊಂಡಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ವರ್ಷದ ಅಂತ್ಯದಲ್ಲಿ ಇವರಿಬ್ಬರ ವಿವಾಹ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ನೋಡಿರಿ

