RCB ವಿರುದ್ಧ ಸೋತ ಸಿಟ್ಟಲ್ಲಿ ಕಮಿನ್ಸ್ ಸಿಡಿಮಿಡಿ – SRH ತಂಡದ ಓನರ್ ಕಾವ್ಯ ಮಾರನ್ ನೋವಿಗೂ ಕೊನೆಯಿಲ್ಲ..!
ಆರ್‌ಸಿಬಿ ಒಗ್ಗಟ್ಟಿನ ಪ್ರದರ್ಶನಕ್ಕೆ ಹೋಮ್ ಗ್ರೌಂಡ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಚೊಂಬು ಸಿಕ್ಕಿದೆ. ತವರಿನಲ್ಲಿ ಸೋಲಿನ ಅವಮಾನ ತಂಡವನ್ನು ಕಂಗೆಿಡಿಸಿದೆ. ಒಂದೆಡೆ ಪಂದ್ಯ ಸೋತಿದ್ದಕ್ಕೆ ಎಸ್‌ಆರ್‌ಹೆಚ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಸಿಟ್ಟಾದರೆ, ಮತ್ತೊಂದೆಡೆ ತಂಡದ ಮಾಲಕಿ ಕಾವ್ಯ ಮಾರನ್ ಸಿಕ್ಕಾಪಟ್ಟೆ ನೋವಲ್ಲಿದ್ದಾರೆ.
ಇದನ್ನೂ ಓದಿ: ತವರಿನಲ್ಲೇ ಸನ್ ರೈಸರ್ಸ್‌ಗೆ ಹೀನಾಯ ಸೋಲು – ಹೈದರಾಬಾದ್ ವಿರುದ್ಧ 35 ರನ್ಗಳಿಂದ ಗೆದ್ದು ಬೀಗಿದ ಬೆಂಗಳೂರು!
ಆರ್‌ಬಿಸಿ ಬೌಲರ್ಸ್ ಸತತ ಸೋಲಿನ ಸುಳಿಯಿಂದ ಸಿಡಿದೆದ್ದು ರೊಚ್ಚಿಗೆದ್ದು ಬೌಲಿಂಗ್ ಮಾಡಿದ್ದೇ ತಡ, ಹೈದ್ರಾಬಾದ್ ಟೀಮ್‌ನ ವಿಕೆಟ್‌ಗಳು ಉರುಳುತ್ತಾ ಹೋದ್ವು. ಒಂದೊಂದು ವಿಕೆಟ್ ಬಿದ್ದಾಗಲೂ ಇಡೀ ಸ್ಟೇಡಿಯಂ ಸ್ತಬ್ಧವಾಗಿತ್ತು. ಕಂಪ್ಲೀಟ್ ಸೈಲೆಂಟ್ ಆಗಿತ್ತು. ಇದ್ರ ಮಧ್ಯೆ ಸೋತ ಮೇಲೆ ಹೈದ್ರಾಬಾದ್ ಟೀಮ್‌ನ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ‘ಇದು ನಮಗೆ ಒಳ್ಳೆಯ ರಾತ್ರಿ ಆಗಿಲ್ಲ.ನಮ್ಮ ಸೋಲಿಗೆ ನಮ್ಮ ಬೌಲರ್ಗಳೇ ನೇರ ಕಾರಣ ಎಂದು ದೂರಿದ್ರು. ಆದ್ರೆ, ತಾನು ಕೂಡಾ ನಾಲ್ಕು ಓವರ್‌ಗೆ 55 ರನ್ ನೀಡಿದ್ದೆ ಅನ್ನೋದು ಪಾಪ.. ಪ್ಯಾಟ್ ಕಮಿನ್ಸ್‌ಗೆ ಮರೆತೇ ಹೋಗಿರಬೇಕು.
ಸೋತ ಮೇಲೆ ಸಿಡಿಮಿಡಿಗೊಂಡ ಸನ್‌ರೈಸರ್ಸ್ ಹೈದ್ರಾಬಾದ್ ಕ್ಯಾಪ್ಟನ್ ಕಮಿನ್ಸ್ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ. ಆರ್‌ಸಿಬಿ ಏನೋ 35 ರನ್ಗಳ ಅಂತರದಿಂದ ಸೋಲಿಸಿ ಹಳೆಯ ಸೇಡನ್ನು ತೀರಿಸಿಕೊಂಡಿದೆ. ಇದಾದ ಮೇಲೆ ಮ್ಯಾಚ್‌ನ್ನ ಕ್ರೀಡಾಸ್ಪೂರ್ತಿಯಿಂದ ಪ್ರತಿಯೊಬ್ಬ ನಾಯಕನೂ ಮಾತಾಡಬೇಕು. ಆದ್ರೆ, ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಸೋಲುತ್ತಿದ್ದಂತೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ರು. ಗೆದ್ದಾಗ ನಾನು ಮಾತನಾಡುತ್ತೇನೆ, ಸೋತಾಗ ಕೋಚ್ ಡೇನಿಯಲ್ ವೆಟ್ಟೋರಿ ಮಾತನಾಡುತ್ತಾರೆ. ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದು ಸಿಟ್ಟಲ್ಲೇ ಮಾತಾಡಿದ್ರು.
ಅತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೋಪದಲ್ಲಿ ಕುದಿಯುತ್ತಿದ್ದರೆ, ಇತ್ತ ತಂಡದ ಓನರ್ ಕಾವ್ಯ ಮಾರನ್ ಹ್ಯಾಪ್ ಮೋರೆ ಹಾಕ್ಕೊಂಡು ಸಪ್ಪಾಗಾಗಿದ್ರು. ಅದ್ರಲ್ಲೂ ಸ್ಪೋಟಕ ಬ್ಯಾಟರ್‌ಗಳಾದ ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮಾ, ಮಾರ್ಕ್‌ರಮ್ ಹಾಗೂ ಕ್ಲಾಸೇನ್ ಔಟಾಗುತ್ತಿದ್ದಂತೆ ಒಂದೊಂದು ರೀತಿಯಲ್ಲಿ ತಮ್ಮ ಬೇಜಾರನ್ನು ವ್ಯಕ್ತಪಡಿಸುತ್ತಿದ್ರು. ಬ್ಯಾಟರ್‌ಗಳ ಪ್ರದರ್ಶನ ಕಂಡು ನೋವಲ್ಲಿ ಒದ್ದಾಡಿದ ಕಾವ್ಯ ಮಾರನ್ ಅವರ ರಿಯಾಕ್ಷನ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.