RCB ವಿರುದ್ಧ 300 ರನ್ಸ್ ಟಾರ್ಗೆಟ್ – ಹೆಡ್ ಗೆ ಚಿನ್ನಸ್ವಾಮಿ ಅಂದ್ರೆ ಇಷ್ಟನಾ?
SRHಗೆ ಬ್ರೇಕ್ ಹಾಕುತ್ತಾ ಬೆಂಗಳೂರು?

19ನೇ ಸೀಸನ್ ಐಪಿಎಲ್ ಆರಂಭಕ್ಕೆ ಮೂರೇ ದಿನ ಬಾಕಿ. ಫಸ್ಟ್ ಮ್ಯಾಚಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಾಮುಖಿ ಆಗ್ತಾರೆ. ಚಿನ್ನಸ್ವಾಮಿಯಲ್ಲಿ ಮತ್ತೊಂದು ಹೈವೋಲ್ಟೇಜ್ ಮ್ಯಾಚ್ಗಾಗಿ ಫ್ಯಾನ್ಸ್ ಕಾಯ್ತಾ ಇದ್ರೆ ಅತ್ತ ಆರೆಂಜ್ ಆರ್ಮಿ ಕ್ಯಾಂಪ್ನಲ್ಲಿ ದೊಡ್ಡ ರಣತಂತ್ರವೇ ರೆಡಿಯಾಗಿದೆ. ಬಿಗ್ ಟಾರ್ಗೆಟ್ ಇಟ್ಕೊಂಡೇ ಅಖಾಡಕ್ಕೆ ಇಳಿಯೋಕೆ ರೆಡಿಯಾಗಿದ್ದಾರೆ. ಆರ್‌ಸಿಬಿ ವಿರುದ್ಧ ಮತ್ತೊಂದು ಇತಿಹಾಸದ ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ : IPL ಅಭಿಮಾನಿಗಳಿಗೆ ಗುಡ್‌ನ್ಯೂಸ್! – ದೇಶದ 15 ನಗರಗಳಲ್ಲಿ ಬಿಗ್ ಸ್ಕ್ರೀನ್‌ಗಳಲ್ಲಿ IPL ಮ್ಯಾಚ್ ಪ್ರಸಾರ!
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೃಹತ್ ಮೊತ್ತವನ್ನು ದಾಖಲಿಸೋ ಮೂಲಕ ಟೂರ್ನಿಯಲ್ಲಿ ಬಿರುಗಾಳಿ ಎಬ್ಬಿಸಿದ ತಂಡ ಅಂದ್ರೆ ಅದು ಸನ್‌ರೈಸರ್ಸ್ ಹೈದರಾಬಾದ್. ಅಗ್ರೆಸ್ಸಿವ್ ಬ್ಯಾಟಿಂಗ್ ಲೈನಪ್ ಹೊಂದಿರೋ ಎಸ್ಆರ್ಹೆಚ್ನ ಅತಿದೊಡ್ಡ ಶಕ್ತಿಯೇ ಬ್ಯಾಟರ್ಸ್. ಈಗಾಗ್ಲೇ ಟೂರ್ನಿಯಲ್ಲಿ ಟಾಪ್ 4 ಹೈಯೆಸ್ಟ್ ಸ್ಕೋರ್ಗಳ ದಾಖಲೆ ಮಾಡಿರೋ ಹೈದ್ರಾಬಾದ್ ತಂಡದ ಟಾರ್ಗೆಟ್ ಇರೋದು 300ಪ್ಲಸ್ ಸ್ಕೋರ್ ಮಾಡ್ಬೇಕು ಅನ್ನೋದು. ಇದೀಗ ಆರ್‌ಸಿಬಿ ವಿರುದ್ಧದ ಓಪನಿಂಗ್ ಮ್ಯಾಚಲ್ಲೇ ಇಂಥದ್ದೊಂದು ಮೈಲುಗಲ್ಲು ಸ್ಥಾಪಿಸೋ ಪ್ಲ್ಯಾನ್ನಲ್ಲಿದ್ದಾರೆ.
300 ರನ್ ಗಳ ಗೇಮ್ ಪ್ಲ್ಯಾನ್ ಬಿಚ್ಚಿಟ್ಟ ಇಶಾನ್ ಕಿಶನ್!
ಪಾಕೆಟ್ ಡೈನಮೋ ಇಶಾನ್ ಕಿಶನ್ ಈಗ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಕ್ಯಾಪ್ಟನ್. ಈ ಆವೃತ್ತಿಯಲ್ಲಿ ತಂಡವನ್ನ ಯಶಸ್ವಿಯಾಗಿ ನಿಭಾಯಿಸೋ ನಿರೀಕ್ಷೆಯಲ್ಲಿರೋ ಕಿಶನ್ ಈ ಸಲ ತಮ್ಮ ತಂಡದ ಟಾರ್ಗೆಟ್ 300ಪ್ಲಸ್ ರನ್ಸ್ ಅಂದಿದ್ದಾರೆ. ಸನ್ ರೈಸರ್ಸ್ ಹೈದ್ರಾಬಾದ್ ಆಯೋಜನೆ ಮಾಡಿದ್ದ ಈವೆಂಟ್ನಲ್ಲಿ ಮಾತನಾಡಿದ ಕಿಶನ್ ಈ ದಾಖಲೆಯ ಗುಟ್ಟು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಮೊದಲ ಪಂದ್ಯದಿಂದಲೇ ನಾವು ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸ್ತೀವಿ. 300 ರನ್ಗಳ ಗುರಿಯನ್ನ ಹೇಗೆ ತಲುಪಬೇಕು ಅನ್ನೋದನ್ನ ಹೇಳಿದ್ದಾರೆ. ಟ್ರಾವಿಸ್ ಹೆಡ್ ಮತ್ತು ಹೆನ್ರಿಕ್ ಕ್ಲಾಸೆನ್ ಇಬ್ರೂ ಸೆಂಚುರಿ ಹೊಡೆದ್ರೆ ನಾವು 300 ರನ್ಗಳನ್ನ ರೀಚ್ ಆಗೋಕೆ ಸಾಧ್ಯವಿದೆ ಎಂದಿದ್ದಾರೆ.
ಆರ್ ಸಿಬಿ ವಿರುದ್ಧ ಬ್ಯಾಟಿಂಗ್ ಅಂದ್ರೆ ಹೆಡ್ ಗೆ ಇಷ್ಟನಾ?
ಮತ್ತೊಂದೆಡೆ ಹೈದ್ರಾಬಾದ್ ತಂಡದ ವೈಸ್ ಕ್ಯಾಪ್ಟನ್ ಅಭಿಷೇಕ್ ಶರ್ಮಾ ಕೂಡ ಆರ್ಸಿಬಿಯನ್ನ ಗ್ರಾಂಟೆಡ್ ಆಗಿ ತಗೊಂಡಿದ್ದಾರೆ ಅನ್ಸುತ್ತೆ. ಆರೆಂಜ್ ಆರ್ಮಿ ಈವೆಂಟ್ನಲ್ಲಿ ಮಾತನಾಡಿದ ಅಭಿಷೇಕ್, ಟ್ರಾವಿಸ್ ಹೆಡ್ ಆರ್‌ಸಿಬಿ ವಿರುದ್ಧ ಆಡೋದನ್ನ ಇಷ್ಟ ಪಡ್ತಾರೆ ಅನ್ನೋ ಮೂಲಕ ಈ ವರ್ಷವೂ ಅವ್ರಿಂದ ಅಂಥದ್ದೇ ಪರ್ಫಾಮೆನ್ಸ್ ಬರುತ್ತೆ ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ. ಯಾಕಂದ್ರೆ ಐಪಿಎಲ್ನಲ್ಲಿ ದಾಖಲಾದ ತಂಡವೊಂದರ ಹೈಯೆಸ್ಟ್ ಸ್ಕೋರ್ ಹೈದ್ರಾಬಾದ್ ಹೆಸ್ರಲ್ಲಿದೆ. ಅದೂ ಕೂಡ ಆರ್‌ಸಿಬಿ ವಿರುದ್ಧ ಚಿನ್ನಸ್ವಾಮಿಯಲ್ಲೇ ನಡೆದಿದ್ದ ಪಂದ್ಯದಲ್ಲಿ. 2024ರ ಸೀಸನ್ನಲ್ಲಿ ಏಪ್ರಿಲ್ 15ರಂದು ನಡೆದಿದ್ದ ಆ ಮ್ಯಾಚಲ್ಲಿ ಫಸ್ಟ್ ಬ್ಯಾಟ್ ಮಾಡಿದ್ದ ಎಸ್ಆರ್ಹೆಚ್ 3 ವಿಕೆಟ್ ನಷ್ಟಕ್ಕೆ 287 ರನ್ಗಳನ್ನ ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಕೇವಲ 41 ಎಸೆತಗಳಲ್ಲೇ 102 ರನ್ ಬಾರಿಸಿದ್ರು. ಇದೇ ಪರ್ಫಾಮೆನ್ಸ್ ಬಗ್ಗೆಯೇ ಅಭಿಷೇಕ್ ಮಾತನಾಡಿದ್ದಾರೆ. ಸೋ ಈ ಸಲವೂ ಅವ್ರಿಂದ ಅಂಥದ್ದೇ ಪರ್ಫಾಮೆನ್ಸ್ ಬರುತ್ತೆ ಅನ್ನೋ ರೀತಿಯಲ್ಲಿ ಹೇಳಿದ್ದಾರೆ.
ಅಷ್ಟಕ್ಕೂ ಹೈದ್ರಾಬಾದ್ ಬಿಗ್ ಸ್ಕೋರ್ ಕಲೆ ಹಾಕಿದ್ರು ಆರ್‌ಸಿಬಿ ಈಸಿಯಾಗಿ ಸೋಲೊಪ್ಪಿಕೊಂಡಿರಲಿಲ್ಲ. 7 ವಿಕೆಟ್ ನಷ್ಟಕ್ಕೆ 262 ರನ್ಗಳನ್ನ ಕಲೆ ಹಾಕಿತ್ತು. ಹೀಗಾಗಿ ಈ ವರ್ಷದ ಬ್ಯಾಟಲ್ ಕೂಡ ಸಖತ್ ಥ್ರಿಲ್ ಅಂತೂ ಇರುತ್ತೆ. ಇದೇ ಗೆಲುವಿನ ಗುಂಗಲ್ಲಿ ಹೈದ್ರಾಬಾದ್ ಮತ್ತೆ ಆರ್ಭಟಿಸೋ ನಿರೀಕ್ಷೆಯಲ್ಲಿದ್ರೆ ಅತ್ತ ಬೆಂಗಳೂರು ಟೀಂ ಅದೇ ಮೈದಾನದಲ್ಲೇ ರಿವೇಂಜ್ ತಗೊಳ್ಳೋಕೆ ಕಾಯ್ತಿದೆ. ಅದೂ ಅಲ್ದೇ ಈ ಸೀಸನ್ ಆರ್ಸಿಬಿಗೂ ಸ್ಪೆಷಲ್.
ಆರ್ ಸಿಬಿಯ ಮೃತ 11 ಫ್ಯಾನ್ಸ್ ಗೆ ವಿಶೇಷ ಗೌರವ!
ಈ ಬಾರಿಯ ಟೂರ್ನಿಯನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ವಲ್ಪ ಸ್ಪೆಷಲ್ ಆಗಿ ಸ್ಟಾರ್ಟ್ ಮಾಡ್ತಿದೆ. ಟ್ವೆಲ್ತ್ ಮ್ಯಾನ್ ಆರ್ಮಿಯ 11 ಅಭಿಮಾನಿಗಳ ಸಾವಿಗೆ ಗೌರವ ನೀಡಲು ಕೆಲ ನಿರ್ಧಾರಗಳನ್ನ ಕೈಗೊಂಡಿದೆ. ಮೃತರ ನೆನಪಿಗಾಗಿ ಮತ್ತು ಅವರ ಅಭಿಮಾನವನ್ನ ಶಾಶ್ವತವಾಗಿ ಕ್ರೀಡಾಂಗಣದ ಇತಿಹಾಸದಲ್ಲಿ ಉಳಿಸಲು ಮೈದಾನದ ಆವರಣದಲ್ಲಿ ಎಲ್ಲರ ಹೆಸರಿರುವ ಫಲಕವನ್ನು ಅನಾವರಣಗೊಳಲಾಗುತ್ತೆ. ಹಾಗೇ ಮ್ಯಾಚ್ಗಳ ಟೈಮಲ್ಲಿ ಕ್ರೀಡಾಂಗಣದ ನಿರ್ದಿಷ್ಟ ಭಾಗದಲ್ಲಿ 11 ಸೀಟುಗಳನ್ನು ಕಾಯ್ದಿರಿಸಲಾಗುತ್ತೆ. ಅಂತರರಾಷ್ಟ್ರೀಯ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಸಹ 11 ಸೀಟ್ ಗಳು ಮೃತರ ಹೆಸರಿನಲ್ಲಿ ಮೀಸಲಿಡಲಾಗುತ್ತೆ.ಇದ್ರ ಜೊತೆಗೆ ಆರ್‌ಸಿಬಿ ಆಟಗಾರರು ಅಭ್ಯಾಸದ ವೇಳೆ 11 ನಂಬರ್ ಜರ್ಸಿ ಧರಿಸಿ ಪ್ರಾಕ್ಟೀಸ್ ಮಾಡಲಿದ್ದಾರೆ. 19 ನೇ ಆವೃತ್ತಿಯ IPL ಉದ್ಘಾಟನಾ ಪಂದ್ಯದ ವೇಳೆ ಮೃತರಿಗೆ 1 ನಿಮಿಷ ಮೌನಾಚರಣೆ ಮಾಡಲಾಗುತ್ತದೆ. ಕಳೆದ ವರ್ಷ ವಿಜಯೋತ್ಸವದಲ್ಲಿ ಪ್ರಾಣ ಬಿಟ್ಟವರ ಟ್ರಿಬ್ಯೂಟ್ಗಾಗಿ ಈ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ.

ನೋಡಿರಿ

