ನಂಬರ್ 1 ಪಟ್ಟಕ್ಕೇರಿದ SRH – ಶ್ರೇಯಸ್ ಪಡೆಗೆ ಹ್ಯಾಟ್ರಿಕ್ ಸೋಲು
ಕಿರಿಯ ಶತಕವೀರ ಕೊನೊಲಿ

ನಂಬರ್ 1 ಪಟ್ಟಕ್ಕೇರಿದ SRH – ಶ್ರೇಯಸ್ ಪಡೆಗೆ ಹ್ಯಾಟ್ರಿಕ್ ಸೋಲುಕಿರಿಯ ಶತಕವೀರ ಕೊನೊಲಿ

ಸತತ 8 ಪಂದ್ಯಗಳಲ್ಲಿ ಗೆದ್ದು ಟೇಬಲ್ ಟಾಪರ್ ಆಗಿ ಮೆರೀತಿದ್ದ ಪಂಜಾಬ್ ಕಿಂಗ್ಸ್ ಈಗ ಅಕ್ಷರಶಃ ಪಂಕ್ಚರ್ ಆಗಿದೆ. ಒಂದಲ್ಲ ಎರಡಲ್ಲ ಸತತ ಮೂರು ಸೋಲು. ಮತ್ತೊಂದೆಡೆ ಸೂಪರ್ ಡೂಪರ್ ಪ್ರದರ್ಶನ ನೀಡ್ತಿರೋ ಸನ್ ರೈಸರ್ಸ್ ಹೈದ್ರಾಬಾದ್ ಈಗ ಪಾಯಿಂಟ್ಸ್ ಪಟ್ಟಿಯಲ್ಲೂ ನಂಬರ್ 1 ಪಟ್ಟಕ್ಕೇರಿದೆ. ಅಂಕಪಟ್ಟಿಯ ಅಸಲಿ ಆಟವೂ ಸ್ಟಾರ್ಟ್ ಆಗಿದೆ.

ಇದನ್ನೂ ಓದಿ : ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟ! – ಚಿನ್ನಸ್ವಾಮಿ ಕೈ ತಪ್ಪಿದ IPL ಫೈನಲ್‌

ರಾಜೀವ್​ಗಾಂಧಿ ನ್ಯಾಷನಲ್ ಸ್ಟೇಡಿಯಮ್​ನಲ್ಲಿ ನಡೆದ ಪಂಜಾಬ್ ವರ್ಸಸ್ ಹೈದ್ರಾಬಾದ್ ನಡುವಿನ ಮ್ಯಾಚಲ್ಲಿ ಹೈದ್ರಾಬಾದ್​ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಪಿಬಿಕೆಎಸ್​ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಹೀಗಾಗಿ ಬ್ಯಾಟಿಂಗ್​ಗೆ ಬಂದ ಹೈದ್ರಾಬಾದ್​ ಆರಂಭದಿಂದಲೇ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಆರಂಭಿಸಿದ್ರು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ 3.3ನೇ ಓವರ್​ನಲ್ಲೇ 50+ ರನ್ಸ್ ಜೊತೆಯಾಟವಾಡಿದ್ರು. ಈ ವೇಳೆ ಅಭಿಷೇಕ್ 35 ರನ್ಸ್​ಗೆ ಔಟ್ ಆದ್ರೆ ಹೆಡ್ 38 ರನ್ಸ್​ಗೆ ವಿಕೆಟ್ ಒಪ್ಪಿಸಿದ್ರು. ಆ ನಂತ್ರ ಇಶಾನ್ ಕಿಶನ್ ಹಾಗೇ ಹೆನ್ರಿಕ್ ಕ್ಲಾಸೆನ್ ಕೂಡ ತಲಾ ಅರ್ಧಶತಕ ಬಾರಿಸಿ ಮಿಂಚಿದ್ರು. ನಿತೀಶ್ ರೆಡ್ಡಿ ಕೂಡ ಒಂದೊಳ್ಳೆ ಸಾಥ್ ಕೊಟ್ಟಿದ್ರಿಂದ 20 ಓವರ್​ನಲ್ಲಿ 3 ವಿಕೆಟ್ ಕಳ್ಕೊಂಡು 235 ರನ್ಸ್ ಕಲೆ ಹಾಕಿದ್ರು. ಆದ್ರೆ ಈ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್​ ಚೇಸಿಂಗ್​ ರೇಸ್​ನಲ್ಲಿ ಇರಲೇಇಲ್ಲ. ಹೈದ್ರಾಬಾದ್ ಬೌಲಿಂಗ್​ನಲ್ಲಿ ಫಸ್ಟ್, ಸೆಕೆಂಡ್ ಓವರ್​ನಲ್ಲೇ ಓಪನರ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ರು. ಶ್ರೇಯಸ್ 5 ರನ್​ಗೆ ಸುಸ್ತಾದ್ರು. ಕೂಪರ್ ಕೊನೊಲಿ ಏಕಾಂಗಿಯಾಗಿ ಹೋರಾಡಿ ಶತಕ ಬಾರಿಸಿದ್ರೂ ಗೆಲುವಿನ ದಡ ಮುಟ್ಟಿಸೋಕೆ ಆಗ್ಲಿಲ್ಲ. 202 ರನ್ ಅಷ್ಟೇ ಗಳಿಸಿ 33 ರನ್​ಗಳಿಂದ ಸೋಲೊಪ್ಪಿಕೊಂಡ್ರು.

ಪಂಜಾಬ್ ಸೋಲಿಗೆ ಕಾರಣಗಳು!

ಬೌಲಿಂಗ್ ನಲ್ಲಿ ದುಬಾರಿಯಾದ ಪಂಜಾಬ್ ಬೌಲರ್ಸ್

ಕಳಪೆ ಫೀಲ್ಡಿಂಗ್ ಮತ್ತು ಸಾಲು ಸಾಲು ಕ್ಯಾಚ್ ಡ್ರಾಪ್

ಬಿಗ್ ಚೇಸಿಂಗ್ ಬೆನ್ನತ್ತಿದ ಪಂಜಾಬ್​ಗೆ ಆರಂಭದಲ್ಲೇ ಆಘಾತ

ಸ್ಫೋಟಕ ಓಪನರ್ಸ್ ಪ್ರಿಯಾನ್ಶ್ (1) & ಪ್ರಭ್ ಸಿಮ್ರಾನ್ (3) ಔಟ್

ಶ್ರೇಯಸ್ ಅಯ್ಯರ್ 5(5)ಕೂಡ ಬೇಗ ವಿಕೆಟ್ ಒಪ್ಪಿಸಿದ್ದು

ಅಜೇಯ 107 ರನ್ ಗಳಿಸಿದ ಕಿರಿಯ ಶತಕವೀರ ಕೊನೊಲಿ

ಬ್ಯಾಟಿಂಗ್, ಬೌಲಿಂಗ್ ಡಾಮಿನೇಷನ್ ಮಾಡಿ ಗೆದ್ದ ಹೈದ್ರಾಬಾದ್

ಹೀಗೆ ಪಂಜಾಬ್ ಬ್ಯಾಕ್ ಟು ಬ್ಯಾಕ್ 3 ಮ್ಯಾಚ್ ಸೋತು ಒದ್ದಾಡ್ತಿದೆ. ಹೈದ್ರಾಬಾದ್ ನಂಬರ್ 1 ಪಟ್ಟಕ್ಕೇರಿದೆ. ಪಂಜಾಬ್ 2ನೇ ಸ್ಥಾನಕ್ಕೆ ಕುಸಿದಿದ್ರೆ ಆರ್​ಸಿಬಿ 3ನೇ ಸ್ಥಾನಕ್ಕೆ ಜಾರಿದೆ. ಹೀಗಾಗಿ ಇನ್ಮುಂದಿನ ಒಂದೊಂದು ಪಂದ್ಯಗಳ ಸೋಲು ಗೆಲುವು ಪಾಯಿಂಟ್ಸ್ ಪಟ್ಟಿಯಲ್ಲಿ ಬಿಗ್ ವೇರಿಯೇಷನ್ಸ್ ಮಾಡುತ್ತೆ.

Shantha Kumari