ಸೂಪರ್ ಸ್ಟ್ರಾಂಗ್ SRH.. ಅಭಿ & ಹೆಡ್ ಡೆಡ್ಲಿ ಓಪನರ್ಸ್ – IPL ಟ್ರೋಫಿಗಾಗಿ ಕಾವ್ಯಾ ರಣತಂತ್ರ   

ಸೂಪರ್ ಸ್ಟ್ರಾಂಗ್ SRH.. ಅಭಿ & ಹೆಡ್ ಡೆಡ್ಲಿ ಓಪನರ್ಸ್ – IPL ಟ್ರೋಫಿಗಾಗಿ ಕಾವ್ಯಾ ರಣತಂತ್ರ   

ಟಿ-20 ಫಾರ್ಮೆಟ್ ಅಂದ್ರೆ ಹೊಡಿಬಡಿ ಆಟ ಅನ್ನೋದು ಐಪಿಎಲ್​ನಲ್ಲಿ ಯಾವಾಗ್ಲೋ ಪ್ರೂವ್ ಆಗಿ ಹೋಗಿದೆ. ಅದ್ರಲ್ಲೂ ಕಳೆದ ವರ್ಷದ ಐಪಿಎಲ್​ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಟೀಮ್​ನವ್ರು ಆಡಿದ್ದನ್ನ ನೋಡಿದ್ರೆ ಬೌಲರ್​ಗಳಿಗೆ ಬೆಲೆಯೇ ಇರಲಿಲ್ಲ. ಸಿಕ್ಸ್, ಫೋರ್ ಅಂತಾ ಮೈದಾನದ ಮೂಲೆ ಮೂಲೆಗೂ ಚೆಂಡುಗಳನ್ನ ಅಟ್ಟಿದ್ರು. ಇದೀಗ 2025ಕ್ಕೂ ಅದಕ್ಕಿಂತ್ಲೂ ಜಾಸ್ತಿಯೇ ಪ್ರದರ್ಶನ ನೀಡೋದು ಪಕ್ಕಾ. ಸಾಲಿಡ್ ಬ್ಯಾಟಿಂಗ್ ಲೈನಪ್ ಹೊಂದಿರೋ ಕಾವ್ಯಾ ಮಾರನ್ ಒಡೆತನದ ಫ್ರಾಂಚೈಸಿ ಟ್ರೋಫಿ ಗೆಲ್ಲೋ ಲೆಕ್ಕಾಚಾರದಲ್ಲಿದೆ.

ಇದನ್ನೂ ಓದಿ :  ಸಂಜುಗೆ ಟೀಂ ಇಂಡಿಯಾ ಬಸ್ ಮಿಸ್ – ಕರಿಯರ್ ಮುಗಿಸುತ್ತಾ ಸತತ ಸೋಲು?

ಸನ್‌ರೈಸರ್ಸ್ ಹೈದರಾಬಾದ್ ಮಾಲೀಕರು ಹರಾಜಿಗೂ ಮುನ್ನ ಐವರನ್ನ ರಿಟೇನ್ ಮಾಡಿಕೊಂಡಿದ್ರು. ಬರೋಬ್ಬರಿ 75 ಕೋಟಿ ಇನ್ವೆಸ್​ ಮಾಡಿದ್ರು. ಹೆನ್ರಿಚ್ ಕ್ಲಾಸೆನ್ (23 ಕೋಟಿ), ಪ್ಯಾಟ್ ಕಮಿನ್ಸ್ (18 ಕೋಟಿ), ಟ್ರಾವಿಸ್ ಹೆಡ್ (14 ಕೋಟಿ), ಅಭಿಷೇಕ್ ಶರ್ಮಾ (14 ಕೋಟಿ), ನಿತೀಶ್ ಕುಮಾರ್ ರೆಡ್ಡಿ (6 ಕೋಟಿ)ಗೆ ಉಳಿಸಿಕೊಂಡಿದ್ರು. ಆ ನಂತ್ರ ಹರಾಜಿನಲ್ಲೂ ಕೂಡ ಸ್ಟಾರ್ ಪ್ಲೇಯರ್ಸ್ ಮೇಲೆಯೇ ಹಣ ಸುರಿದಿದ್ರು. ತಂಡಕ್ಕೆ ಬೇಕಾದ ಆಟಗಾರರ ಮೇಲೆ ಮಾತ್ರ ಗಮನ ಹರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಓನರ್ ಕಾವ್ಯಾ ಮಾರನ್ ಬಹಳ ಬುದ್ಧಿವಂತಿಕೆಯಿಂದ ಆಟಗಾರರನ್ನ ಖರೀದಿಸಿದರು. ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರನ್ನು 10 ಕೋಟಿ ರೂಗೆ ಖರೀದಿಸಿದರೆ, ಪೇಸ್ ಆಲ್ ರೌಂಡರ್ ಹರ್ಷಲ್ ಪಟೇಲ್ 8 ಕೋಟಿ ನೀಡಿದ್ದಾರೆ. ಬ್ಯಾಟಿಂಗ್ ಸ್ನೇಹಿ ಹೈದರಾಬಾದ್ ಪಿಚ್‌ನಲ್ಲಿ ಹರ್ಷಲ್ ಪಟೇಲ್ ಅವರ ನಕಲ್​ ಬೌಲಿಂಗ್ ನೆರವಾಗಬಹುದು.

ಭಾರತದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್ ಕೂಡ ಈ ಸಲ ಸನ್ ರೈಸರ್ಸ್ ಹೈದ್ರಾಬಾದ್ ಸೇರಿದ್ದಾರೆ. 3ನೇ ಸ್ಲಾಟ್​ನಲ್ಲಿ ಆಡಬಲ್ಲ ಕಿಶನ್, 11.25 ಕೋಟಿ ಬೃಹತ್ ಬೆಲೆಗೆ ಖರೀದಿಸಿತ್ತು. ಅನ್​ಕ್ಯಾಪ್ಡ್​ ಆಟಗಾರರ ಖರೀದಿಯಲ್ಲೂ ಕಾವ್ಯ ಬುದ್ದಿವಂತಿಕೆ ತೋರಿಸಿದ್ದರು. ಬ್ಯಾಟರ್‌ಗಳಾದ ಅಭಿನವ್ ಮನೋಹರ್ ಜೊತೆಗೆ ವಿಕೆಟ್​ ಕೀಪರ್ ಅಥರ್ವ ತೈಡೆಯನ್ನ ಖರೀದಿಸಿದರು. ಐಪಿಎಲ್​ನ ಹತ್ತೂ ತಂಡಗಳಲ್ಲಿ ಪ್ರಸ್ತುತ ಫಾರ್ಮ್​ ಗಮನಿಸಿದರೆ ಸನ್ ರೈಸರ್ಸ್ ಹೈದರಾಬಾದ್ ಎಲ್ಲಾ ತಂಡಗಳಿಗಿಂತ ಸ್ಟ್ರಾಂಗ್​​​ ಇದೆ ಅನ್ನಸ್ತಿದೆ.  ಬ್ಯಾಟಿಂಗ್, ಬೌಲಿಂಗ್ ಜೊತೆಗೆ ಅನುಭವದಲ್ಲೂ ಸಮತೋಲದಲ್ಲಿದೆ. ಸೋ 2025ರ ಐಪಿಎಲ್​ಗೆ ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಅನ್ನೋದನ್ನ ನೋಡೋದಾದ್ರೆ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅಭಿನವ್ ಮನೋಹರ್, ಹರ್ಷಲ್ ಪಟೇಲ್, ಪ್ಯಾಟ್ ಕಮಿನ್ಸ್, ರಾಹುಲ್ ಚಾಹರ್, ಆಡಮ್ ಝಂಪಾ, ಮೊಹಮ್ಮದ್ ಶಮಿ ಚಾನ್ಸ್ ಪಡೆಯಬಹುದು. ಅದ್ರಲ್ಲೂ ಕೂಡ ಅಭಿಷೇಕ್ ಶರ್ಮಾ ಈ ಸಲವೂ ಸೆಂಟರ್ ಆಫ್ ಅಟ್ರ್ಯಾಕ್ಷನ್  ಆಗಿದ್ದಾರೆ.

ಇನ್ನು ಅಭಿಷೇಕ್ ಶರ್ಮಾ ಐಪಿಎಲ್ ಜರ್ನಿ ನೋಡೋದಾದ್ರೆ 2018 ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಅಂದ್ರೆ ಈಗಿನ  ಡೆಲ್ಲಿ ಕ್ಯಾಪಿಟಲ್ಸ್ ನೊಂದಿಗೆ IPL ಅಖಾಡಕ್ಕೆ ಧುಮುಕಿದ್ರು. ಆರಂಭದಲ್ಲಿ 55 ಲಕ್ಷ ರೂಪಾಯಿ ಸಂಭಾವನೆ ಸಿಗ್ತಿತ್ತು. 2019 ರಲ್ಲಿ, ಸನ್‌ರೈಜರ್ಸ್ ಹೈದರಾಬಾದ್ ತಂಡವನ್ನು ಸೇರಿಕೊಂಡರು, 2019 ರಿಂದ 2021 ರವರೆಗೆ 55 ಲಕ್ಷ ರೂಪಾಯಿಗೆ ಎಸ್​ಆರ್ ಹೆಚ್ ಪರ ಆಡಿದ್ರು. 2022 ರಲ್ಲಿ SRH 6.50 ಕೋಟಿಗೆ ಅಭಿಷೇಕ್​ರನ್ನ ಉಳಿಸಿಕೊಳ್ತು. ಇದೀಗ ಐಪಿಎಲ್ 2025 ರಲ್ಲಿ SRH ಅಭಿಷೇಕ್ ಶರ್ಮಾ ಅವರನ್ನು 14 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. ಕಳೆದ ಸೀಸನ್​ನಲ್ಲೇ ಅಬ್ಬರಿಸಿದ್ದ ಅಭಿ ಈ ವರ್ಷವೂ ಧೂಳೆಬ್ಬಿಸೋ ಹಿಂಟ್ ಕೊಟ್ಟಿದ್ದಾರೆ. ಕೊನೇ ಪಂದ್ಯದಲ್ಲಿ ದಾಖಲೆಯ ಶತಕ ಹಾಗೂ ಎರಡು ವಿಕೆಟ್ ಕಬಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ರು.

ಇನ್ನು ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಕಳೆದ ವರ್ಷ ಇತಿಹಾಸ ಸೃಷ್ಟಿಸಿತ್ತು. ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ಆರ್ ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಬರೋಬ್ಬರಿ 287 ರನ್ ಗಳನ್ನ ಕಲೆ ಹಾಕಿತ್ತು. ಅದೂ ಕೂಡ ಜಸ್ಟ್ 3 ವಿಕೆಟ್ ಕಳ್ಕೊಂಡು. ಐಪಿಎಲ್ 17 ಸೀಸನ್​ಗಳಲ್ಲಿ ಇದೇ ಹೈಯೆಸ್ಟ್ ಸ್ಕೋರ್. ಹಾಗೇ ಮಾರ್ಚ್ 27ರಂದು  ಹೈದ್ರಾಬಾದ್​ನಲ್ಲಿ ಮುಂಬೈ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಸ್ಕೋರ್ ಮಾಡಿತ್ತು. ಹಾಗೇ ಏಪ್ರಿಲ್ 20ರಂದು ಡೆಲ್ಲಿ ವಿರುದ್ಧ ನಡೆದ ಫೈಟ್​ನಲ್ಲಿ 7 ವಿಕೆಟ್ ನಷ್ಟಕ್ಕೆ 266 ರನ್ ಕಲೆ ಹಾಕತ್ತು. ಈ ಮೂಲಕ ಹೈದ್ರಾಬಾದ್ ತಂಡ ಹಲವು ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿತ್ತು. ಹೀಗೆ ಬೆಂಕಿ ಪರ್ಫಾಮೆನ್ಸ್​ನಿಂದಲೇ ಫೈನಲ್​ಗೆ ಲಗ್ಗೆ ಇಟ್ಟಿದ್ದ ಹೈದ್ರಾಬಾದ್ ತಂಡ 2025ರ ಐಪಿಎಲ್​ಗೆ ಮತ್ತಷ್ಟು ಬಲಿಷ್ಠವಾಗಿದೆ. ಟ್ರೋಫಿ ಗೆಲ್ಲೋ ಫೆವರೆಟ್ ಟೀಮ್ ಎನಿಸಿಕೊಂಡಿದೆ. ಟ್ರಾವಿಸ್ ಹೆಡ್, ಕ್ಲಾಸೆನ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಪರ್ಫಾಮೆನ್ಸ್ ನೋಡಿದ್ರೆ ಚಾಂಪಿಯನ್ ಪಟ್ಟಕ್ಕೇರಿದ್ರೂ ಅಚ್ಚರಿ ಇಲ್ಲ.

Shantha Kumari