SRH ಗೆಲ್ಲಲು ಮಾಲ್ಡೀವ್ಸ್​ ಟ್ರಿಪ್.. ಹೈದರಾಬಾದ್ ಹುಡುಗರಿಗೆ ಕಾವ್ಯ ಜೋಶ್‌! – ಇನ್ನಾದ್ರೂ ಗೆಲುವಿನ ಲಯಕ್ಕೆ ಬರುತ್ತಾ?

SRH ಗೆಲ್ಲಲು ಮಾಲ್ಡೀವ್ಸ್​ ಟ್ರಿಪ್.. ಹೈದರಾಬಾದ್ ಹುಡುಗರಿಗೆ ಕಾವ್ಯ ಜೋಶ್‌! – ಇನ್ನಾದ್ರೂ ಗೆಲುವಿನ ಲಯಕ್ಕೆ ಬರುತ್ತಾ?

ಸನ್‌ರೈಸರ್ಸ್‌ ಹೈದರಾಬಾದ್.. ಈ ಸೀಸನ್‌ನ  ಆರಂಭದ ಪಂದ್ಯದಲ್ಲಿ ಅಬ್ಬರಿಸಿ ಉಳಿದೆಲ್ಲಾ ಟೀಂಗಳಿಗೆ ನಡುಕ ಹುಟ್ಟಿಸಿತ್ತು. ಇವರ ಬ್ಯಾಟಿಂಗ್‌ ನೋಡಿ ಈ ಸಲ 300ಕ್ಕೂ ಹೆಚ್ಚು ಹೊಡ್ಡೆ ಹೊಡೆಯುತ್ತಾರೆ ಅಂತ ಎಲ್ಲಾ ಅಂದ್ಕೊಂಡಿದ್ರು.. ಆದ್ರೆ ಎಲ್ಲರ ಲೆಕ್ಕಚಾರ ಉಲ್ಟಾ ಆಗಿದೆ. ಎಸ್ಆರ್‌ಹೆಚ್‌ ಮಕಾಡೆ ಮಲಗಿದೆ.  ಈ ಟೀಮ್‌ ಈಗ ಕಳಪೆ ಫಾರ್ಮ್​ನಲ್ಲಿದ್ದು, ಫ್ರಾಂಚೈಸಿ ಕಂಗೆಟ್ಟು ಹೋಗಿದೆ.. ಎಸ್‌ಹೆಚ್‌ಆರ್‌ ಟೀಮ್‌ ಬ್ಯಾಕ್‌ ಟು ಬ್ಯಾಕ್‌ ಸೋಲು ಕಾಣ್ತಿದೆ.. ತಂಡವನ್ನ ಹೇಗೆ ಮೇಲೆತ್ತಬೇಕು ಅಂತಾ ಪ್ಲ್ಯಾನ್‌ ಮಾಡ್ಬೇಕಿದ್ದ ಫ್ರಾಂಚೈಸಿಯೇ ಈಗ ಆಟಗಾರನ್ನ ಟ್ರಿಪ್‌ ಗೆ ಕಳ್ಸಿದೆ. ಅದೂ ಕೂಡ ಮಾಲ್ಡೀವ್ಸ್ ಗೆ!

ಇದನ್ನೂ ಓದಿ: 2008 ರಲ್ಲಿ ಡೆಲ್ಲಿ ಮಿಸ್ಟೇಕ್ ಮಾಡಿದ್ದೆಲ್ಲಿ? ಕೊಹ್ಲಿ ಕೈ ಬಿಟ್ಟಿದ್ದಕ್ಕೆ DC ಪಶ್ಚಾತ್ತಾಪ!!

ಐಪಿಎಲ್‌ ದಿನದಿಂದ ದಿನಕ್ಕೆ ಸಖತ್ ಕಿಕ್ ನೀಡ್ತಿದೆ.. ಸೋಲೋರು ಗೆಲ್ತಿದ್ದಾರೆ, ಗೆಲ್ಲೋರು ಸೋಲ್ತಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಫ್ರಾಂಚೈಸಿ​ಗಳ ಲೆಕ್ಕಾಚಾರಗಳೆಲ್ಲಾ ಉಲ್ಪಾಪಲ್ಟಾ ಆಗಿವೆ. ಸ್ಟ್ರಾಂಗ್ ಅನ್ಕೊಂಡವ್ರು ಕಳಪೆ ಫಾರ್ಮ್​ನಲ್ಲಿದ್ದಾರೆ. ಅಂಡರ್ ಎಸ್ಟಿಮೇಟ್ ಆಗಿದ್ದವ್ರೇ ಬೆಸ್ಟ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಇದೀಗ ಲೀಗ್‌ ಹಂತದ ಪಂದ್ಯ ಮುಗಿತಾ ಬಂದಿದ್ದು, ಎಲ್ಲ ತಂಡಗಳು ಪ್ಲೇ ಆಫ್‌ ಗೆ ಪೈಪೋಟಿ ನಡೆಸ್ತಿವೆ. ಅದ್ರಲ್ಲೂ ಸನ್‌ರೈಸರ್ಸ್‌ ಹೈದ್ರಾಬಾದ್‌ ತಂಡ ತಿಣುಕಾಡುತ್ತಿದೆ. ಕಳೆದ ವರ್ಷ ರನ್ನರ್‌ರಪ್ ಪಟ್ಟ ಅಲಂಕರಿಸಿದ್ದ ತಂಡ ಈಗ ಕಳಪೆ ಫಾರ್ಮ್‌ನಲ್ಲಿದೆ. ಪಾಯಿಂಟ್ಸ್‌ ಟೇಬಲ್‌ ನಲ್ಲಿ 9ನೇ ಪ್ಲೇಸ್‌ನಲ್ಲಿದೆ. ಆಟಗಾರರಿಗೆ ಕೋಟಿ ಕೋಟಿ ದುಡ್ಡು ಸುರಿದ ಕಾವ್ಯ ಮಾರನ್‌ ನ ಕೋಪ ತಾಪಗಳ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಈ ನಡುವೆ  ಕಳಪೆ ಫಾರ್ಮ್‌ ನಲ್ಲಿರೋ ಟೀಮ್‌ ನ ಹೇಗಾದ್ರೂ ಲಯಕ್ಕೆ ತರ್ಬೇಕು.. ಮುಂದಿನ ಪಂದ್ಯದಲ್ಲಿ ಮ್ಯಾಚ್‌ ಗೆಲ್ಲಲು ರಣತಂತ್ರ ಹೂಡ್ಬೇಕಿದ್ದ ಟೀಮ್‌ ಜಾಲಿ ಟ್ರಿಪ್‌ ಗೆ ಹೋಗಿದೆ. ಅದೂ ಕೂಡ ಆಟಗಾರರನ್ನ ಪ್ರಾಂಚೈಸಿಯೇ ಕಳ್ಸಿರೋದು..

ಸನ್‌ ತಂಡ ಈ ವರ್ಷದ ಆರಂಭದಲ್ಲಿ ಆಡಿದ್ದ ಆಟವನ್ನು ನೋಡಿದ್ರೆ ಈ ಬಾರಿ ಐಪಿಎಲ್‌ನಲ್ಲಿ ಮುನ್ನೂರು ರನ್‌ಗಳನ್ನು ಸುಲಭವಾಗಿ ಕಲೆ ಹಾಕಬಹುದು ಅಂತಾ ಫ್ಯಾನ್ಸ್ ಅಂದ್ಕೊಂಡಿದ್ರು. ಆದರೆ ಮೊದಲ ಪಂದ್ಯದಲ್ಲಿ ಸನ್‌ ರಾಜಸ್ಥಾನ ವಿರುದ್ಧದ ಸೋತ ಬಳಿಕ ಗೆಲುವಿನ ಟ್ರ್ಯಾಕ್‌ಗೆ ಮರಳಲು ಹರಸಾಹದ ಪಟ್ಟಿತು. ಸ್ಫೋಟಕ ಬ್ಯಾಟರ್‌ಗಳು ಅಬ್ಬರಿಸುವುದನ್ನು ನಿಲ್ಲಿಸಿದ ಪರಿಣಾಮ ತಂಡ ಸಂಕಷ್ಟಕ್ಕೆ ಸಿಲುಕಿದೆ. ಈ ಸೀಸನ್‌ನಲ್ಲಿ ಎಸ್‌ಆರ್‌ ಹೆಚ್‌ ತಂಡ  ಈವೆರೆಗೂ 9 ಪಂದ್ಯಗಳನ್ನ ಆಡಿದೆ. ಆಡಿರುವ ಇಷ್ಟೂ ಪಂದ್ಯಗಳಲ್ಲಿ ಎಸ್‌ಆರ್‌ಹೆಚ್‌ ಗೆದ್ದಿದ್ದು 3 ಪಂದ್ಯಗಳಲ್ಲಿ ಮಾತ್ರ.. ಏಪ್ರಿಲ್‌ 25 ರಂದು ನಡೆದ ಸಿಎಸ್‌ಕೆ ವಿರುದ್ಧದ ಮ್ಯಾಚ್‌ ನಲ್ಲಿ ಗೆಲ್ತಿದ್ದಂತೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಹೀಗಾಗಿ ಆಟಗಾರರಿಗೆ ಬೂಸ್ಟ್ ಕೊಡೋಕೆ ಇಡೀ ತಂಡವನ್ನು ಮಾಲೀಮ್ಸ್‌ಗೆ ಕಳುಹಿಸಲಾಗಿದೆ.. ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಎಸ್‌ಆರ್‌ಎಚ್ ಮ್ಯಾನೇಜ್‌ಮೆಂಟ್ ಮಾಲ್ಮೀಮ್ಸ್‌ಗೆ ಕಳುಹಿಸಿದೆ.

ಹೈದರಾಬಾದ್ ತಂಡವು ತಮ್ಮ ಮುಂದಿನ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಈ ಪಂದ್ಯವು ಮೇ 2ರ ಶುಕ್ರವಾರ ಗುಜರಾತಿನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೀಗ ಎಸ್‌ಆರ್‌ ಹೆಚ್‌ ಫ್ರಾಂಚೈಸಿ ಆಟಗಾರರನ್ನ ಮಾಲ್ಡೀವ್ಸ್‌ ಗೆ  ಕಳುಹಿಸಿರುವುದರ ಹಿಂದೆ ಒಂದು ಕಾರಣವಿದೆ ಎಂದು ಹೇಳಲಾಗುತ್ತಿದೆ. ಈ ಟ್ರಿಪ್‌ ಆಟಗಾರರಿಗೆ ವಿಶ್ರಾಂತಿ ನೀಡುವುದಲ್ಲದೆ, ಹೊಸ ಉತ್ಸಾಹವನ್ನು ತರುತ್ತದೆ.. ಇದ್ರಿಂದ ಮೆಂಟಲೀ ಸ್ಟ್ರಾಂಗ್‌ ಆಗ್ತಾರೆ..  ಎಂದು ಸನ್‌ ರೈಸರ್ಸ್ ಆಡಳಿತ ಮಂಡಳಿ ನಂಬಿದೆ. ಈ ಟ್ರಿಪ್‌ ನ ನಂತರ ಪ್ರಮುಖ ಪಂದ್ಯಗಳು ನಡೆಯುವುದರಿಂದ, ಆಟಗಾರರು ಈ ಪಂದ್ಯಗಳಲ್ಲಿ ಹೊಸ ಉತ್ಸಾಹದಿಂದ ಮೈದಾನಕ್ಕೆ ಇಳಿದು ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಾರೆ ಎಂದು ಕ್ಯಾವ್ಯ ಮಾರನ್‌ ಟೀಮ್ ನಂಬಿದೆ. ಹೀಗಾಗೇ ಆಟಗಾರರನ್ನ ತಮ್ಮ ಪ್ಯಾಮಿಲಿ ಜೊತೆ ಮಾಲ್ಡಿವ್ಸ್‌ ಟ್ರಿಪ್‌ಗೆ ಕಳ್ಸಿರೋದು.

ಇನ್ನು ಸನ್‌ರೈಸರ್ಸ್ ಹೈದರಾಬಾದ್ ಇನ್ನೂ 5 ಪಂದ್ಯಗಳನ್ನು ಆಡಲಿದೆ. ಸನ್‌ರೈಸರ್ಸ್ ಎಲ್ಲ ಐದು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇಆಫ್‌ಗೆ ಪ್ರವೇಶಿಸುವ ಅವಕಾಶವಿದೆ. ತಂಡವು ಪ್ರಸ್ತುತ ಮೈನಸ್ ನೆಟ್ ರನ್ ರೇಟ್‌ನಲ್ಲಿರುವ ಕಾರಣ, ಸನ್‌ ರೈಸರ್ಸ್ ಎಲ್ಲ ಐದು ಪಂದ್ಯಗಳನ್ನು ಭಾರಿ ಅಂತರದಿಂದ ಗೆದ್ದು ತಮ್ಮ ನೆಟ್ ರನ್ ರೇಟ್ ಅನ್ನು ಸಾಧ್ಯವಾದಷ್ಟು ಸುಧಾರಿಸಿಕೊಳ್ಳಬೇಕಿದೆ. ಹೀಗಿದ್ದಲ್ಲಿ ಮಾತ್ರ ಪ್ಲೇ ಆಫ್‌ಗೆ ಹೋಗುವ ಸಾಧ್ಯತೆ ಇದೆ.  ಇದೀಗ ಎಸ್‌ಆರ್‌ಹೆಚ್‌ ತಂಡ ರಜೆಯ ಮಜೆಯನ್ನು ಮುಗಿಸಿಕೊಂಡು ಬಂದು ಹೇಗೆ ಪ್ರದರ್ಶನ ನೀಡುತ್ತೆ? ಮತ್ತೆ ಫಾರ್ಮ್‌ಗೆ ಬರುತ್ತಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ.

Shwetha M

Leave a Reply

Your email address will not be published. Required fields are marked *