ಮದುವೆಗೆ ಮೊದಲೇ ತಂದೆಯಾದ ಹೆಡ್! – ಟ್ರಾವಿಸ್ – ಜೆಸ್ಸಿಕಾ ಜೋಡಿಯಾಗಿದ್ದೆಲ್ಲಿ?

ಮದುವೆಗೆ ಮೊದಲೇ ತಂದೆಯಾದ ಹೆಡ್! – ಟ್ರಾವಿಸ್ – ಜೆಸ್ಸಿಕಾ ಜೋಡಿಯಾಗಿದ್ದೆಲ್ಲಿ?

ಟ್ರಾವಿಸ್ ಹೆಡ್.. ಈ ಹೆಸರು‌ ಕೇಳಿದ್ರೆ ಕ್ರಿಕೆಟ್ ಅಭಿಮಾನಿಗಳ‌ ತಲೆ‌ ತಿರುಗುತ್ತೆ. ಸಿಡಿಲಬ್ಬರದ ಬ್ಯಾಟಿಂಗ್ ಅಂದ್ರೆ ಏನು ಎಂಬುದನ್ನು ಈ ಹೆಡ್ ಹೊಸ ರೀತಿಯಲ್ಲಿ ತೋರಿಸುತ್ತಿದ್ದಾರೆ..   ಎಸ್ ಆರ್ ಹೆಚ್ ಟೀಂ ಗೆಲ್ಲಲು ಇವರೇ ಪ್ರಮುಖ ಕಾರಣ.. ಟ್ರಾವಿಸ್ ಮೈದಾನದಲ್ಲಿ  ಅಬ್ಬರಿಸ್ತಾ ಇದ್ರೆ. ಇತ್ತ ಅಭಿಮಾನಿಗಳು ಅವರ ವೈಯಕ್ತಿಕ ಜೀವನದ ಬಗ್ಗೆ ಗೂಗಲ್ ಮಾಡ್ತಾ ಇದ್ದಾರೆ.. ಅವರಿಗೆ ಮದುವೆ ಆಗಿದ್ಯಾ? ಅವ್ರ ಮಡದಿ ಯಾರು ಅಂತಾ ಸರ್ಚ್ ಮಾಡ್ತಾ ಇದ್ದಾರೆ..

ಇದನ್ನೂ ಓದಿ: ಈ ಸಲ ಕಪ್ ನಮ್ದೇ – 1 ಗೆಲುವು.. TOP 5 ಗೆ RCB

2016 ಹಾಗೂ 2017ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಟ್ರಾವಿಸ್ ಹೆಡ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆರ್‌ಸಿಬಿ ಪರ ಆಡಿದ್ದ 10 ಪಂದ್ಯಗಳಿಂದ ಅವರು, 29.28ರ ಸರಾಸರಿಯಲ್ಲಿ 205 ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ 2024ರ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಟ್ರಾವಿಸ್ ಹೆಡ್ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 24 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 62 ರನ್ ಸಿಡಿಸಿದ್ದರು.

ಇತ್ತೀಚಿಗೆ ಬೆಂಗಳೂರಿನಲ್ಲಿ ಆರ್‌ಸಿಬಿ ಹಾಗೂ ಎಸ್ಆರ್‌ಹೆಚ್ ಪಂದ್ಯಗಳು ಕಾದಾಟ ನಡೆಸಿದ್ದವು. ಆ ಪಂದ್ಯದಲ್ಲಿ ಎಸ್ಆರ್‌ಹೆಚ್ ತಂಡದ ಪರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕೆ ಇಳಿದ ಸ್ಟಾರ್ ಪ್ಲೇಯರ್ ಟ್ರಾವಿಸ್ ಹೆಡ್ ಶತಕ ಬಾರಿಸಿ ಸಂಭ್ರಮಿಸಿದ್ದರು.  ಮೈದಾನದಲ್ಲಿ ಹೆಡ್ ಅಬ್ಬರಿಸುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ಅಭಿಮಾನಿಗಳು ಇವರ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಸಾಮಾಜಿಕ ತಾಣದಲ್ಲಿ ಟ್ರಾವಿಸ್ ಹೆಡ್ ಅವರನ್ನು ಹುಡುಕುವಾಗ ಇವರ ಪ್ರೇಯಸಿ, ಮನದರಸಿಯ ಸೌಂದರ್ಯ ಕಂಡು ಪಡ್ಡೆ ಹುಡುಗರ ತಲೆಕೆಟ್ಟೋಗಿದೆ.  ಅಂದಹಾಗೆ ಟ್ರಾವಿಸ್ ಮಡದಿಯ ಹೆಸ್ರು ಜೆಸ್ಸಿಕಾ ಡೇವಿಸ್.. ಈಕೆ ಮಾಡೆಲ್ ಕ್ಷೇತ್ರದಲ್ಲಿ ಸದ್ಯ ಮಿಂಚುತ್ತಿದ್ದಾರೆ.. ಜೆಸ್ಸಿಕಾ ಒಬ್ಬ ವೃತ್ತಿಪರ ರೂಪದರ್ಶಿಯಾಗಿದ್ದು, ಅವರು ಹಲವಾರು ಮಾಡೆಲಿಂಗ್ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಾರೆ.

ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಜೆಸ್ಸಿಕಾ ಡೇವಿಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಕುಟುಂಬದ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತನ್ನ ಫಾಲೋವರ್ಸ್ಗೆ ವೈಯಕ್ತಿಕ ಕ್ಷಣಗಳನ್ನು ಹಂಚಿಕೊಳ್ಳುವ ಅವರು, ಟ್ರಾವಿಸ್ ಹೆಡ್ ಜೊತೆಗಿನ ಮುದ್ದಾದ ಫೋಟೋಗಳನ್ನು ಶೇರ್ ಮಾಡುತ್ತಾರೆ.

ಟ್ರಾವಿಸ್ ಹೆಡ್ ಮತ್ತು ಜೆಸ್ಸಿಕಾ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲ್ಯದ ಸ್ನೇಹಿತರಾಗಿದ್ದ ಅವರಿಬ್ಬರು ನಂತರ ಜೀವನ ಸಂಗಾತಿಗಳಾದರು. ಇನ್ನು, ಜೆಸ್ಸಿಕಾ ಡೇವಿಸ್ ಮದುವೆಗೆ ಮೊದಲು ತಾಯಿಯಾದರು. ಸೆಪ್ಟೆಂಬರ್ 2022 ರಲ್ಲಿ ಮಗುವಿಗೆ ಜನ್ಮ ನೀಡಿದ್ದರು, ಮಗುವಿಗೆ ಮೀಲಾ ಎಂದು ಹೆಸರಿಡಲಾಗಿದೆ. ಮದುವೆಯಾದ ನಂತರ ಜೆಸ್ಸಿಕಾ ತಮ್ಮದೆ ಸ್ವಂತ ಬ್ಯುಸಿನೆಸ್ ನೋಡಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋಗಳು ಸಖತ್ ವೈರಲ್ ಆಗುತ್ತವೆ. ಇದು‌ ಟ್ರಾವಿಸ್ ಹೆಡ್ ಅವರ ಕ್ಯೂಟ್ ಫ್ಯಾಮಿಲಿಯ ಸ್ಟೋರಿ.

Shwetha M