300+ ರನ್ಸ್ ಬಿಲ್ಡಪ್.. ಹ್ಯಾಟ್ರಿಕ್ ಸೋಲು – SRH ಪವರ್ ಹಿಟ್ಟರ್ಸ್ ಫ್ಲ್ಯಾಪ್
ಹೆಡ್, ಅಭಿ, ಕಿಶನ್ ಆಟ ಮರೆತ್ರಾ?

2024ರಲ್ಲಿ ಫೈನಲಿಸ್ಟ್ ಆಗಿದ್ದ ಸನ್ ರೈಸರ್ಸ್ ಹೈದ್ರಾಬಾದ್ ಟೀಂ ಈ ಸಲ ಮೆಗಾ ಹರಾಜಿನಲ್ಲಿ ಘಟಾನುಘಟಿ ಆಟಗಾರರನ್ನೇ ಪಿಕ್ ಮಾಡಿತ್ತು. ಅಲ್ದೇ ಟಾಪ್ ಐದು ಪ್ಲೇಯರ್ಸ್ನ ಹರಾಜಿಗೂ ಮುನ್ನ ರಿಟೇನ್ ಮಾಡ್ಕೊಂಡಿದ್ರು. ಹೀಗಾಗಿ 18ನೇ ಸೀಸನ್ನಲ್ಲಿ ಹೈದ್ರಾಬಾದ್ನ ತಡೆಯೋರು ಯಾರು ಇರೋದೇ ಇಲ್ಲ. ಕಪ್ ಗೆಲ್ಲೋ ಫೇವರೆಟ್ ಟೀಂ ಅಂತಾ ಕ್ರಿಕೆಟ್ ಎಕ್ಸ್ಪರ್ಟ್ಸ್ ಕೂಡ ಪ್ರೆಡಿಕ್ಟ್ ಮಾಡಿದ್ರು. ಬಟ್ ಎಸ್ಆರ್ಹೆಚ್ನ ಸೋ ಕಾಲ್ಡ್ ಪವರ್ ಹಿಟ್ಟರ್ಸ್ ಪರ್ಫಾಮೆನ್ಸ್ ನೋಡ್ತಿದ್ರೆ ಫೈನಲ್ ಇರ್ಲಿ ಪ್ಲೇಆಫ್ಸ್ ಗೆ ಬರೋದೇ ಕಷ್ಟ ಅನ್ನಿಸ್ತಿದೆ. ಹ್ಯಾಟ್ರಿಕ್ ಸೋಲು ಕಂಡು ತೀವ್ರ ಮುಖಭಂಗ ಅನುಭವಿಸ್ತಿದ್ದಾರೆ. ಅದ್ರಲ್ಲೂ ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಅತ್ಯಂತ ಹೀನಾಯವಾಗಿ ಸೋಲು ಕಂಡಿದ್ದಾರೆ.
ಇದನ್ನೂ ಓದಿ : ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ಗೆ ಸೋಲು – ಕೆಕೆಆರ್ಗೆ 80 ರನ್ಗಳ ಭರ್ಜರಿ ಗೆಲುವು
ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡಗಳು 2024ರ ಫೈನಲಿಸ್ಟ್ ಟೀಮ್ಗಳು. ಚಾಂಪಿಯನ್ ಪಟ್ಟಕ್ಕಾಗಿ ನಡೆದಿದ್ದ ಫೈಟ್ನಲ್ಲಿ ಹೈದ್ರಾಬಾದ್ನ ಸೋಲಿಸಿ ಕೊಲ್ಕತ್ತಾ ಟ್ರೋಫಿಗೆ ಮುತ್ತಿಕ್ತಿತ್ತು. ರನ್ನರ್ ಅಪ್ ಆಗಿದ್ದ ಹೈದ್ರಾಬಾದ್ ಈ ಸಲ ಆ ಸೇಡನ್ನ ತೀರಿಸಿಕೊಳ್ತಾರೆ ಅನ್ಕೊಂಡ್ರೆ ಮತ್ತೊಮ್ಮೆ ಕೆಕೆಆರ್ ವಿರುದ್ಧ ಶರಣಾಗಿದ್ದಾರೆ. ಹೋಮ್ಗ್ರೌಂಡ್ ಈಡನ್ ಗಾರ್ಡನ್ನಲ್ಲಿ ಮೊದಲು ಬ್ಯಾಟಿಂಗ್ಗಿಳಿದ ಕೊಲ್ಕತ್ತಾ ನೈಟ್ ರೈಡರ್ಸ್ ಮೇಲೆ ಸನ್‌ರೈಸರ್ಸ್ ಹೈದ್ರಾಬಾದ್ ಬೌಲರ್ಸ್ ದಾಳಿ ಮಾಡಿದ್ರು. ಕೆಕೆಆರ್ ಓಪನರ್ಸ್ಗೆ ಸೆಟಲ್ ಆಗೋಕೆ ಬಿಡಲಿಲ್ಲ. ಕ್ವಿಂಟನ್ ಡಿಕಾಕ್, ಸುನೀಲ್ ನರೇನ್ ಸೈಲೆಂಟಾಗಿ ಪೆವಿಲಿಯನ್ ಸೇರಿದ್ರು. ಬಟ್ ಆ ನಂತ್ರ ಬಂದ ಕ್ಯಾಪ್ಟನ್ ಅಂಜಿಕ್ಯಾ ರಹಾನೆ-ಅಂಗ್ಕ್ರಿಶ್ ರಘುವಂಶಿ ಎಚ್ಚರಿಕೆಯ ಆಟವಾಡಿದ್ರು. 81 ರನ್ ಗಳ ಜೊತೆಯಾಟವಾಡಿದ್ರು. ರಹಾನೆ 38 ರನ್ಗಳಿಸಿ ಔಟಾದ್ರೆ ಅಂಗ್ಕ್ರಿಶ್ ಅರ್ಧಶತಕ ಪೂರೈಸಿ ಪೆವಿಲಿಯನ್ ಸೇರಿದ್ರು, ಆ ಬಳಿಕ ಕ್ರಿಸ್ನಲ್ಲಿ ಜೊತೆಯಾದ ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಸ್ಪೋಟಕ ಆಟವಾಡಿದ್ರು. ಬೌಂಡರಿ-ಸಿಕ್ಸರ್ಗಳಲ್ಲೇ ರನ್ ಡೀಲ್ ಮಾಡಿದ್ರು. ಇಷ್ಟು ದಿನ ಸೈಲೆಂಟ್ ಆಗಿದ್ದ ವೆಂಕಟೇಶ್ ಅಯ್ಯರ್ 25 ಎಸೆತಗಳಲ್ಲೇ ಹಾಫ್ ಸೆಂಚುರಿ ಸಿಡಿಸಿದರು. 7 ಬೌಂಡರಿ, 3 ಸಿಕ್ಸರ್ ಸಹಿತ 60 ರನ್ಗಳಿಸಿ ವೆಂಕಟೇಶ್ ಅಯ್ಯರ್ ಔಟಾದ್ರು. 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ನೆರವಿನಿಂದ 32 ರನ್ಗಳಿಸಿದ ರಿಂಕು ಸಿಂಗ್ ಅಜೇಯರಾಗುಳಿದ್ರು. ಅಂತಿಮ ಹಂತದಲ್ಲಿ ಇವರಿಬ್ಬರು ಆಡಿದ ಸ್ಫೋಟಕ ಆಟದ ನೆರವಿನಿಂದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 200 ರನ್ಗಳ ಬಿಗ್ಸ್ಕೋರ್ ಕಲೆ ಹಾಕಿತು.
ಕೆಕೆಆರ್ ನೀಡಿದ್ದ 201 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಹೈದ್ರಾಬಾದ್ ಪಡೆ ಕೆಕೆಆರ್ ಬೌಲಿಂಗ್ಗೆ ಅಕ್ಷರಶಃ ಥಂಡಾ ಹೊಡೆದು ಹೋಯ್ತು. ವೈಭವ್ ಅರೋರಾ, ಹರ್ಷಿತ್ ರಾಣಾ ಪವರ್ಫುಲ್ ಸ್ಪೆಲ್ ಹಾಕಿದ್ರು. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಸಿಂಗಲ್ ಡಿಜಿಟ್ಗೆ ಪೆವಿಲಿಯನ್ ಸೇರ್ಕೊಂಡ್ರು. ಸ್ವಲ್ಪ ಜವಾಬ್ದಾರಿಯುತವಾಗಿ ಆಡ್ತಿದ್ದ ನಿತೀಶ್ ಕುಮಾರ್ ರೆಡ್ಡಿ, ಕಮಿಂಡು ಮೆಂಡೀಸ್ ಆಟಕ್ಕೆ ಕೆರಬಿಯನ್ ಕಲಿಗಳು ಬ್ರೇಕ್ ಹಾಕಿದ್ರು. ರಸೆಲ್ ನಿತೀಶ್ ರೆಡ್ಡಿ ವಿಕೆಟ್ ಕಬಳಿಸಿದ್ರೆ, ಮೆಂಡೀಸ್ ನರೇನ್ ಬೌಲಿಂಗ್ಗೆ ಬಲಿಯಾದ್ರು. ಅನಿಕೇತ್ ವರ್ಮಾ ಹೀಗೆ ಬಂದು ಹಾಗೆ ಹೋದ್ರು. ಕ್ರಿಸ್ ಕಚ್ಚಿ ನಿಂತು ಹೋರಾಟ ನಡೆಸಿದ ಹೆನ್ರಿಚ್ ಕ್ಲಾಸೆನ್ ಆಟವೂ 33 ರನ್ಗಳಿಗೆ ಅಂತ್ಯವಾಯ್ತು. ನಾಯಕ ಪ್ಯಾಟ್ ಕಮಿನ್ಸ್, ಸಿಮರ್ಜೀತ್ ಸಿಂಗ್ ವರುಣ್ ಚಕ್ರವರ್ತಿಯ ಸ್ಪಿನ್ ಖೆಡ್ಡಾಗೆ ಬಿದ್ರು. ಹರ್ಷಲ್ ಪಟೇಲ್ ಆ್ಯಂಡ್ರೆ ರಸೆಲ್ಗೆ ಬಲಿಯಾದ್ರು. ಇದ್ರೊಂದಿಗೆ ಹೈದ್ರಾಬಾದ್ ಆಲೌಟ್ ಆಯ್ತು. ಕೇವಲ 120 ರನ್ಗಳಿಗೆ ಆಲೌಟ್ ಆದ ಸನ್‌ರೈಸರ್ಸ್ ಹೈದ್ರಾಬಾದ್ ಹೀನಾಯ ಸೋಲಿಗೆ ಶರಣಾಯ್ತು. 80 ರನ್ಗಳ ಅಂತರದ ಭರ್ಜರಿ ಜಯ ಸಾಧಿಸಿದ ಕೆಕೆಆರ್ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನಕ್ಕೇರಿದ್ರೆ, ಸನ್‌ರೈಸರ್ಸ್ ಕೊನೇ ಸ್ಥಾನಕ್ಕೆ ಕುಸಿದಿದೆ.
ಹೈದ್ರಾಬಾದ್ ವಿರುದ್ಧ ಕೆಕೆಆರ್ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡ್ರಲ್ಲೂ ಹಿಡಿತ ಸಾಧಿಸಿತ್ತು. ಅದ್ರಲ್ಲೂ ಬದಲಿ ಆಟಗಾರನಾಗಿ ಬಂದ 27 ವರ್ಷದ ವೈಭವ್ ಅರೋರ ಆರಂಭದಲ್ಲೇ ಬ್ರೇಕ್ ಥ್ರ್ಯೂ ತಂದುಕೊಟ್ರು. ತಮ್ಮ ಮೊದಲ ಓವರ್‌ನ 2ನೇ ಎಸೆತದಲ್ಲೇ ಸ್ಫೋಟಕ ಆರಂಭಿಕಕಾರ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡಿದರು. ಹಾಗೇ ತಮ್ಮ ಕೋಟಾದ ಎರಡನೇ ಓವರ್‌ನಲ್ಲಿ ಬಿಗ್ ಹಿಟ್ಟರ್ ಹಾಗೂ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಇಶಾನ್ ಕಿಶನ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಆ ಮೂಲಕ ಹೈರಾಬಾದ್‌ಗೆ ಆರಂಭದಲ್ಲೇ ಶಾಕ್ ನೀಡಿದರು. ಅಷ್ಟೇ ಅಲ್ಲ ಕೊನೆಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡ್ತಾ ಇದ್ದ ಸ್ಫೋಟಕ ದಾಂಡಿಗ ಹೆನ್ರಿಕ್ ಕ್ಲಾಸನ್ ಅವರನ್ನು ಔಟ್ ಮಾಡುವ ಮೂಲಕ ಕೆಕೆಆರ್ ಗೆಲುವನ್ನು ಈಸಿ ಮಾಡಿದ್ರು.
ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಎದುರಾದ ಅತಿ ದೊಡ್ಡ ಸೋಲು ಇದು. ಇದಕ್ಕೂ ಮೊದಲು ಹೈದರಾಬಾದ್ ತಂಡ ಸಿಎಸ್‌ಕೆ ವಿರುದ್ಧ ಅತಿದೊಡ್ಡ ಸೋಲು ಅನುಭವಿಸಿತ್ತು. 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್ ತಂಡವನ್ನು 78 ರನ್‌ಗಳಿಂದ ಸೋಲಿಸಿತ್ತು. 2013 ರಲ್ಲಿ ಚೆನ್ನೈ, 77 ರನ್‌ಗಳಿಂದ ಸೋಲಿಸಿತ್ತು. ಬಟ್ ಈಗ ಹೈಯೆಸ್ಟ್ ಸ್ಕೋರ್ಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಹೆಡ್ ನಾಲ್ಕು ರನ್, ಅಭಿಷೇಕ್ 2 ರನ್ ಮತ್ತು ಇಶಾನ್ ಕಿಶನ್ 2 ರನ್ಗೆ ಔಟಾಗಿದ್ದೇ ದೊಡ್ಡ ಹೊಡೆತ ಕೊಡ್ತು. 32.5 ಕೋಟಿ ರೂ. ಬೆಲೆಯ ಹೈದರಾಬಾದ್ ತಂಡದ ಟಾರ್ಪ್ ಆರ್ಡರ್ ಕಂಪ್ಲೀಟ್ ಅಟ್ಟರ್ ಫ್ಲ್ಯಾಪ್ ಪ್ರದರ್ಶನ ನೀಡಿದ್ದೇ ಸೋಲಿಗೆ ಪ್ರಮುಖ ಕಾರಣವಾಯ್ತು.