RCB ಕೆಳಗೆ ಬರುತ್ತಾ SRH – GT ರನ್ ರೇಟ್ ಮೀರಲು ಸಾಧ್ಯನಾ?
ಚೇಸಿಂಗ್.. ಡಿಫೆಂಡ್ ಲೆಕ್ಕಾಚಾರ ಹೀಗಿದೆ!

RCB ಕೆಳಗೆ ಬರುತ್ತಾ SRH – GT ರನ್ ರೇಟ್ ಮೀರಲು ಸಾಧ್ಯನಾ?ಚೇಸಿಂಗ್.. ಡಿಫೆಂಡ್ ಲೆಕ್ಕಾಚಾರ ಹೀಗಿದೆ!

ಬೆಂಗಳೂರು ವರ್ಸಸ್ ಹೈದ್ರಾಬಾದ್ ನಡುವಿನ ಹೈವೋಲ್ಟೇಜ್ ಮ್ಯಾಚ್​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಲೀಗ್ ಹಂತದ ಕೊನೇ ಮ್ಯಾಚ್ ಗೆಲ್ಲೋಕೆ ಇಬ್ರೂ ಭರ್ಜರಿಯಾಗೇ ರೆಡಿಯಾಗ್ತಿದ್ದಾರೆ. ಆರ್​ಸಿಬಿಗೆ ಈ ಮ್ಯಾಚ್ ಗೆದ್ರೆ 20 ಅಂಕ. ಹೈಯೆಸ್ಟ್ ಪಾಯಿಂಟ್ಸ್ ಗೇಟರ್ ಆಫ್ ದಿ ಸೀಸನ್ ದಾಖಲೆ. ಸೋತ್ರೂ ಬಿಗ್ ಲಾಸ್ ಅಂತೇನಿಲ್ಲ. ಸ್ಟ್ರೈಟ್ ಅವೇ ಟಾಪ್1ನಲ್ಲೇ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗ್ತಾರೆ. ಬಟ್ ಹೈದ್ರಾಬಾದ್​ಗೆ ಆರ್​ಸಿಬಿ ವಿರುದ್ದ ಗೆಲ್ಲೋದು ಮೋಸ್ಟ್ ಇಂಪಾರ್ಟೆಂಟ್. ಕ್ವಾಲಿಫೈಯರ್ 1 ಆಡ್ಬೇಕು ಅಂದ್ರೆ  ಮ್ಯಾಜಿಕ್​ನೇ ಮಾಡ್ಬೇಕು. ಹಾಗಂತ ಇಂಪಾಸಿಬಲ್ ಅಂತೇನಿಲ್ಲ. ಅದಕ್ಕೇ ಆದ ಒಂದಷ್ಟು ಕ್ವಾಲಿಫೈ ಸ್ಟಾಟ್ಸ್ ಇದೆ.

ಇದನ್ನೂ ಓದಿ : ಆಸಿಸ್‌ ಸರಣಿಗೆ ಪಾಕ್ ತಂಡದಿಂದ ಮೊಹಮ್ಮದ್ ರಿಜ್ವಾನ್ OUT – ಬಾಬರ್ ಅಜಮ್‌ಗೆ ಚಾನ್ಸ್

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಗುಜರಾತ್ ಟೈಟಾನ್ಸ್ 18 ಅಂಕಗಳನ್ನ ಬುಟ್ಟಿಗೆ ಹಾಕಿಕೊಂಡಿದೆ. ಬಟ್ ನೆಟ್​​ರನ್ ರೇಟ್ ವಿಚಾರದಲ್ಲಿ ಆರ್​ಸಿಬಿ ಹತ್ತಿರಕ್ಕೂ ಬರೋಕೆ ಆಗಿಲ್ಲ. ಈಗ ಬೆಂಗಳೂರು ವಿರುದ್ಧದ ಮ್ಯಾಚಲ್ಲಿ ಅಪ್ಪಿತಪ್ಪಿ ಹೈದ್ರಾಬಾದ್ ಗೆದ್ರೆ ಅವ್ರೂ 18 ಆಗ್ತಾರೆ. ಸೋ ಬೆಂಗಳೂರು, ಗುಜರಾತ್ ಹಾಗೇ ಹೈದ್ರಾಬಾದ್ ಸೇಮ್ ಪಾಯಿಂಟ್ಸ್.. ಆಗ ಟಾಪ್-2 ಸ್ಥಾನ ಗಿಟ್ಟಿಸಿಕೊಳ್ಳೋಕೆ ನೆಟ್​ರನ್ ರೇಟ್ ಮ್ಯಾಟ್ರ್ ಆಗುತ್ತೆ. ಆರ್​ಸಿಬಿನಂತೂ ಹಿಂದಿಕ್ಕೋಕೆ ಇವ್ರಿಗೆ ಚಾನ್ಸೇ ಇಲ್ಲ. ಬಟ್ ಆರ್​​ಸಿಬಿ ಜೊತೆ ಕ್ವಾಲಿಫೈಯರ್ 1 ಆಡೋಕೆ ಟ್ರೈ ಮಾಡ್ಬೋದು. ಅಂದ್ರೆ ಗುಜರಾತ್​ ನೆಟ್ ರನ್ ರೇಟ್ ಮೀರಿಸೋ ಥರ ಆಡ್ಬೇಕಾಗುತ್ತೆ ಹೈದ್ರಾಬಾದ್.

ಪ್ಲೇ ಆಫ್ಸ್​ಗೆ ಸದ್ಯ 3 ತಂಡಗಳು ಫೈನಲ್ ಆಗಿವೆ. ಬೆಂಗಳೂರು, ಗುಜರಾತ್ ಹಾಗೇ ಹೈದ್ರಾಬಾದ್ ತಂಡಗಳು. ನಾಲ್ಕನೇ ಸ್ಥಾನಕ್ಕೆ ಇನ್ನೂ ಕೂಡ ಫೈಟ್ ನಡೀತಿದೆ. ಇದೀಗ ಚೆನ್ನೈ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ 89 ರನ್‌ಗಳ ಬೃಹತ್ ಅಂತರದಲ್ಲಿ ಗೆದ್ದಿದೆ. ಈಗ +0.695 ನೆಟ್ ರನ್ ರೇಟ್ ಮೂಲಕ ಪ್ಲೇಆಫ್‌ನಲ್ಲಿ 2ನೇ ಸ್ಥಾನದಲ್ಲಿದೆ. ಪ್ರಸ್ತುತ ಆರ್‌ಸಿಬಿ ತಂಡ 18 ಅಂಕಗಳು ಮತ್ತು +1.065 ನೆಟ್ ರನ್ ರೇಟ್‌ನೊಂದಿಗೆ ನಂಬರ್ 1 ಸ್ಥಾನದಲ್ಲೇ ಉಳಿಯೋದು ಪಕ್ಕಾ ಆಗಿದೆ. ಮೂರನೇ ಸ್ಥಾನದಲ್ಲಿರುವ ಹೈದ್ರಾಬಾದ್ 16 ಅಂಕ ಹೊಂದಿದೆ. ಒಂದು ವೇಳೆ ಆರ್​ಸಿಬಿ ವಿರುದ್ಧ ಗೆದ್ದು ಗುಜರಾತ್ ನೆಟ್ ರನ್​ ರೇಟ್ ದಾಟುತ್ತೇವೆ ಅನ್ಕೊಂಡ್ರೆ ಹೈದ್ರಾಬಾದ್​ಗೆ ಬರೀ ಗೆಲುವು ಸಾಕಾಗಲ್ಲ. ದಾಖಲೆಯ ಗೆಲುವು ಬೇಕು.

ಹೇಗಿದೆ ಲೆಕ್ಕಾಚಾರ?

ಬೆಂಗಳೂರು ವಿರುದ್ಧ ಕನಿಷ್ಠ 87 ರಿಂದ 90 ರನ್‌ ಗಳ ಭರ್ಜರಿ ಗೆಲುವು

ಹೈದ್ರಾಬಾದ್ 250 ರನ್ ಗಳಿಸಿದ್ರೆ 160 ಅಥವಾ ಅದಕ್ಕಿಂತ ಕಡಿಮೆ ರನ್ಸ್

ಚೇಸಿಂಗ್ ಮಾಡಿದ್ರೆ 11 ರಿಂದ 11.3 ಓವರ್‌ಗಳ ಒಳಗಾಗಿ ಗೆಲುವು

200+ ರನ್‌ ಗಳ ಗುರಿ ಇದ್ರೆ 11.2 ಓವರ್‌ (68 ಎಸೆತಗಳಲ್ಲಿ) ಕಂಪ್ಲೀಟ್

ಈ ಗೆಲುವಿನ ಸಮೀಕರಣವನ್ನ ಮಾಡಿದ್ರೆ ಆಗ ಗುಜರಾತ್ ತಂಡದ ನೆಟ್ ರನ್ ರೇಟ್ ಮೀರಿಸಬಹುದು. ಬೃಹತ್ ಅಂತರದ ಸೋಲಿನಿಂದ ಬೆಂಗಳೂರು ರನ್ ರೇಟ್ ಕಡಿಮೆ ಆಗ್ಬೋದು. ಕ್ವಾಲಿಫೈಯರ್ 1 ಆಡೋಕೆ ಅವಕಾಶ ಸಿಗುತ್ತೆ. ಆದ್ರೆ ಹೈದ್ರಾಬಾದ್ ತಂಡ ಬೆಂಗಳೂರು ವಿರುದ್ಧ ಗೆಲ್ಲೋದೇ ದೊಡ್ಡ ವಿಚಾರ. ಇನ್ನು ಇಷ್ಟೆಲ್ಲಾ ಅಂತರದಲ್ಲಿ ಗೆಲುವು ಅಸಾಧ್ಯ. ಹೀಗಾಗಿ ಕ್ವಾಲಿಫೈಯರ್ 1ನಲ್ಲಿ ಬೆಂಗಳೂರು ಹಾಗೇ ಗುಜರಾತ್ ತಂಡಗಳು ಮುಖಾಮುಖಿ ಆಗೋದು ಆಲ್ಮೋಸ್ಟ್ ಕನ್ಫರ್ಮ್. ಸೋ ಕ್ವಾಲಿಫೈಯರ್ 2 ಆಡೋಕೆ ನಮ್ಮ ಜೊತೆ ಯಾರು ಬರ್ತಾರೆ ಅಂತಾ ಹೈದ್ರಾಬಾದ್ ಕಾಯ್ಬೇಕು ಅಷ್ಟೇ.

Shantha Kumari

Leave a Reply

Your email address will not be published. Required fields are marked *