SRHಗೆ ಅಭಿ & ಹೆಡ್ ಬ್ರಹ್ಮಾಸ್ತ್ರ – 300+ ರನ್ಸ್ ಇದ್ರೂ ಬೌಲಿಂಗ್ ವೀಕ್?
ಶಮಿ ಇಲ್ಲ.. ಆಕ್ಷನ್ ನಲ್ಲಿ ಕಾವ್ಯ ಫೇಲ್!

ಐಪಿಎಲ್ನಲ್ಲಿ ಬೆಂಕಿ ಬ್ಯಾಟಿಂಗ್ ಅಂತಾ ಬಂದ್ರೆ ಥಟ್ ಅಂತಾ ನೆನಪಾಗೋದೇ ಸನ್ ರೈಸರ್ಸ್ ಹೈದ್ರಾಬಾದ್. ಐಪಿಎಲ್ ಇತಿಹಾಸದಲ್ಲೇ ಹೈಯೆಸ್ಟ್ ರನ್ ಚಚ್ಚಿರೋ ದಾಖಲೆಗಳಲ್ಲಿ ಅವ್ರದ್ದೇ ಪಾರುಪತ್ಯ. ಈಗ ನೆಕ್ಸ್ಟ್ ಸೀಸನ್ಗೂ ಅದೇ ಫೈರ್ ಮೋಡ್ನಲ್ಲೇ ರೆಡಿಯಾಗಿದ್ದಾರೆ. ಮಿನಿ ಆಕ್ಷನ್ ಆದ್ಮೇಲೆ ಹೈದ್ರಾಬಾದ್ ಕಂಪ್ಲೀಟ್ ಪ್ಯಾಕೇಜ್ ಥರ ಕಾಣ್ತಿದ್ದು ಟಾಪ್ ಟು ಬಾಟಮ್ ಸೂಪರ್ ಸ್ಟ್ರಾಂಗ್ ಆಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಹೊಡಿಬಡಿ ಬ್ಯಾಟರ್ಗಳೇ ಇರೋದ್ರಿಂದ ರನ್ ಮಳೆ ಹರಿಯೋದಂತೂ ಗ್ಯಾರಂಟಿ.
ಇದನ್ನೂ ಓದಿ : KKRಗೆ ಕಾಸ್ಟ್ಲಿ ಸ್ಟಾರ್ಸ್ ವರನಾ.. ಶಾಪನಾ – ಪತಿ, ರಾಣಾ, ವರುಣ್ ಆಡಿದ್ರೆ ಸಾಕಾ?
ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ಟಿ-20 ಸ್ಪೆಷಲಿಸ್ಟ್ ಬ್ಯಾಟರ್ಗಳ ದಂಡೇ ಇದೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್ ಮತ್ತು ನಿತೀಶ್ ಕುಮಾರ್ ರೆಡ್ಡಿಯಂಥದ ವರ್ಲ್ಡ್ ಕ್ಲಾಸ್ ಬ್ಯಾಟರ್ಸ್ ಇದ್ದಾರೆ. ಌಂಡ್ ಇವ್ರೆಲ್ಲರೂ ಕೂಡ ಅದ್ಭುತ ಫಾರ್ಮ್ನಲ್ಲಿದ್ದಾರೆ. ಪ್ಯಾಟ್ ಕಮಿನ್ಸ್ ನಾಯಕತ್ವದ ಆರೆಂಜ್ ಆರ್ಮಿ 2026ರ ಐಪಿಎಲ್ನಲ್ಲಿ ಡೇಂಜರಸ್ ಟೀಂ ಅನ್ನೋದ್ರಲ್ಲಿ ಡೌಟೇ ಇಲ್ಲ. ಮಿನಿ ಹರಾಜಿನಲ್ಲಿ 10 ಆಟಗಾರರನ್ನ ಖರೀದಿ ಮಾಡಿದ್ರೂ ಕಾಸ್ಟ್ಲಿಯೆಸ್ಟ್ ಅನ್ಸಿದ್ದು ಲಿಯಾಮ್ ಲಿವಿಂಗ್ ಸ್ಟೋನ್. ಲಿಯಾಮ್ಗಾಗಿ 13 ಕೋಟಿ ಕೊಟ್ಟಿದ್ದಾರೆ. ಉಳಿದಂತೆ ಸಲೀಲ್ ಅರೋರಾ, ಜ್ಯಾಕ್ ಎಡ್ವಾರ್ಡ್ ಕೋಟಿ ಮೇಲೆ ಬಿಡ್ ಆಗಿದ್ದು ಬಿಟ್ರೆ ಉಳಿದವ್ರೆಲ್ಲಾ ಬೇಸ್ ಪ್ರೈಸ್ಗೇ ಬಂದಿದ್ದಾರೆ. ಬಟ್ ಅಚ್ಚರಿಯ ವಿಚಾರ ಅಂದ್ರೆ ಎಸ್ಆರ್ಹೆಚ್ ಪರ್ಸ್ನಲ್ಲಿ 5.45 ಕೋಟಿ. ಅದ್ಯಾವ ಕಾರಣಕ್ಕೆ ಹಣ ಉಳಿಸಿಕೊಂಡ್ರೋ ಗೊತ್ತಿಲ್ಲ.
ಹೈದ್ರಾಬಾದ್ ತಂಡದಲ್ಲಿ ಪವರ್ ಹಿಟ್ಟರ್ ಬ್ಯಾಟರ್ಸ್!
ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಮೇನ್ ಸ್ಟ್ರೆಂಥೇ ಬ್ಯಾಟಿಂಗ್. ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಇಬ್ರೂ ಇನ್ನಿಂಗ್ಸ್ ಆರಂಭಿಸ್ತಾರೆ. ಇವ್ರಿಬ್ಬರು ಕ್ರೀಸ್ ಕಚ್ಚಿ ನಿಂತ್ರೆ ಎದುರಾಳಿ ಬೌಲರ್ಸ್ ಬೆಂಡೆತ್ತೋದು ಪಕ್ಕಾ. ಸಿಕ್ಸ್, ಫೋರ್ಗಳಲ್ಲೇ ಡೀಲ್ ಮಾಡೋ ಈ ಪವರ್ ಹಿಟ್ಟರ್ಸ್ ಪವರ್ ಪ್ಲೇನಲ್ಲೇ ಇಡೀ ಪಂದ್ಯದ ದಿಕ್ಕನ್ನ ಬದಲಿಸಿ ಬಿಡ್ತಾರೆ. 3ನೇ ಕ್ರಮಾಂಕದಲ್ಲಿ ಬರೋ ಇಶಾನ್ ಕಿಶನ್ ಕೂಡ ಬಿರುಗಾಳಿ ಬ್ಯಾಟರ್. ಮೊನ್ನೆಯಷ್ಟೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಶತಕ ಬಾರಿಸಿ ತಂಡವನ್ನ ಚಾಂಪಿಯನ್ ಮಾಡಿದ್ದಾರೆ. ಇದಾದ ಬಳಿಕ ಹೆನ್ರಿಕ್ ಕ್ಲಾಸೆನ್ ಚಾರ್ಜ್ ತಗೊಳ್ತಾರೆ. ಌಂಡ್ ಈ ಸಲ ಹೈದ್ರಾಬಾದ್ ಸ್ಪೆಷಾಲಿಟಿ ಅಂದ್ರೆ ಆರ್ ಸಿಬಿ ಮಾಜಿ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್ಗೆ 13 ಕೋಟಿ ಕೊಟ್ಟು ತಗೊಂಡಿದ್ದಾರೆ. ಸೋ ಲಿಯಾಮ್ ಮಿಡಲ್ ಆರ್ಡರ್ ನಲ್ಲಿ ಕಾಣಿಸಿಕೊಳ್ಬೋದು. ಇನ್ನು ಹರಾಜಿಗೂ ಮುನ್ನ ಮೊಹಮ್ಮದ್ ಶಮಿಯನ್ನ ಟ್ರೇಡ್ ಮಾಡಿಕೊಟ್ರೂ ಕೂಡ ಬೌಲಿಂಗ್ ಸ್ಟ್ರಾಂಗ್ ಆಗೇ ಕಾಣ್ತಿದೆ. ನಾಯಕ ಪ್ಯಾಟ್ ಕಮಿನ್ಸ್ , ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್ ವೇಗದ ಬೌಲಿಂಗ್ ಲೀಡ್ ಮಾಡ್ತಾರೆ. ಹರ್ಷ್ ದುಬೆ ಸ್ಪಿನ್ನರ್ ಆಗಿದ್ದು, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೂಡ ಬೌಲಿಂಗ್ ಮಾಡಬಹುದು. ಬಟ್ ಆರೆಂಜ್ ಆರ್ಮಿ ಮಿನಿ ಆಕ್ಷನ್ನಲ್ಲಿ ಕೆಲ ಮಿಸ್ಟೇಕ್ಸ್ ಮಾಡ್ಕೊಂಡಿದೆ.
ಹೈದ್ರಾಬಾದ್ ವೀಕ್ ನೆಸ್!
ಆರಂಭದಲ್ಲಿ ಆಟಗಾರರ ಖರೀದಿಗೆ ಮುಂದಾಗಲೇ ಇಲ್ಲ
ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್ ಸಿಎಸ್ ಕೆ ಪಾಲು
ಲಿವಿಂಗ್ ಸ್ಟೋನ್ ಮೇಲೆ ಅಷ್ಟೊಂದು ಹಣ ದುಬಾರಿ ಸಾಧ್ಯತೆ
ಕಳೆದ ವರ್ಷಕ್ಕಿಂತ ಈ ಬಾರಿ ಬೌಲಿಂಗ್ ವೀಕ್ ಆಗಬಹುದು
ಶಮಿ ಬಿಟ್ಟ ಮೇಲೆ ನ್ಯೂಬಾಲ್ ಅಟ್ಯಾಕರ್ಸ್ ಯಾರೂ ಇಲ್ಲ
ರಿಸ್ಟ್ ಸ್ಪಿನ್ನರ್ ಕೊರತೆ, ಮಿಡಲ್ ಆರ್ಡರ್ ಫಿನಿಶರ್ ಕೊರತೆ
ಇನ್ನು ಹೈದ್ರಾಬಾದ್ ತಂಡಕ್ಕೆ ಇರೋ ಮೇನ್ ಥ್ರೆಟ್ ಅಂದ್ರೆ ಬ್ಯಾಟರ್ಸ್ ಕೈಕೊಡೋ ಸಾಧ್ಯತೆ. ಕಳೆದ ವರ್ಷವೇ ನಾವು 300 ಪ್ಲಸ್ ಹೊಡಿತಿವಿ ಅಂದಿದ್ರು. ಆದ್ರೆ ಸೆಕೆಂಡ್ ಆಫ್ ನಲ್ಲಿ ಬ್ಯಾಟರ್ಸ್ ಫೇಲ್ಯೂರ್ ಆದ್ರು. ಬಿಗ್ ಹಿಟ್ಸ್ ಬರಲಿಲ್ಲ. ಹೀಗಾಗಿ ಹೈದ್ರಾಬಾದ್ ಆಕ್ಷನ್ನಲ್ಲಿ ಇನ್ನೊಂದು ಸ್ವಲ್ಪ ಗ್ರೌಂಡ್ ವರ್ಕ್ ಮಾಡಿ ಆಟಗಾರರನ್ನ ಚೂಸ್ ಮಾಡಿಕೊಳ್ಳಬಹುದಿತ್ತೋ ಏನೋ.

ನೋಡಿರಿ

