SRH ಆರಂಭ ಶೂರತ್ವ ಏನಾಯ್ತು? ಟಾಪ್ ಬ್ಯಾಟರ್ಸ್ ಅಟ್ಟರ್ ಫ್ಲಾಪ್
ಕಾವ್ಯ ಸಿಟ್ಟು,. ಒತ್ತಡ ಹೆಚ್ಚಾಯ್ತು?

ಈ ಬಾರಿಯ ಐಪಿಎಲ್ ನಲ್ಲಿ ಎಸ್‌ಆರ್‌ಹೆಚ್ ಮಕಾಡೆ ಮಲಗಿದೆ. ತಾನು ಅಂದ್ಕೊಂಡಿದ್ದೇ ಒಂದು ಆಗಿದ್ದೇ ಒಂದು.. ಒಟ್ಟು ಈಗಾಗಲೇ 5 ಪಂದ್ಯವನ್ನ ಎಸ್‌ಆರ್‌ಹೆಚ್ ಎದುರಿಸಿದೆ. ಇದ್ರಲ್ಲಿ ಗೆದಿದ್ದು ಕೇವಲ ಒಂದೇ ಒಂದು ಪಂದ್ಯ ಮಾತ್ರ. ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಐಪಿಎಲ್ 2025ರ ಅಭಿಯಾನಕ್ಕೆ ಅಮೋಘ ಆರಂಭವನ್ನು ನೀಡಿತು. ಇಶಾನ್ ಕಿಶನ್ ಅವರ ಅಬ್ಬರದ ಶತಕ ಮತ್ತು ಟ್ರಾವಿಸ್ ಹೆಡ್ ಅವರ ಆಕ್ರಮಣಕಾರಿ ಪ್ರದರ್ಶನದಿಂದಾಗಿ SRH ತಂಡವು 286/6 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ತಂಡವು 300 ರನ್‌ಗಳ ಗುರಿಯನ್ನು ತಲುಪುವ ನಿರೀಕ್ಷೆಯಲ್ಲಿದ್ದರೂ, ತಡವಾಗಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಅವರು ಈ ಅವಕಾಶವನ್ನು ಕಳೆದುಕೊಂಡರು. ಆದಾಗ್ಯೂ, ದಕ್ಷಿಣ ಆಫ್ರಿಕಾದ ದಂತಕಥೆ ವೇಗಿ ಡೇಲ್ ಸ್ಟೇನ್ , ಏಪ್ರಿಲ್ 17 ರಂದು SRH ತಂಡವು IPLನಲ್ಲಿ 300 ರನ್‌ಗಳ ಮೊತ್ತವನ್ನು ಗಳಿಸಿದ ಮೊದಲ ತಂಡವಾಗಲಿದೆ ಎಂದು ಭವಿಷ್ಯ ನುಡಿದರು.. ಆದ್ರೆ ಅವತ್ತೆ ಎಸ್‌ಆರ್‌ಹೆಚ್ ಕಣ್ಣಿಗೆ ಬಂತು ನೋಡಿ ಆಮೇಲೆ ಒಂದೇ ಒಂದು ಮ್ಯಾಚ್ ಕೂಡ ಎಸ್‌ಆರ್‌ಹೆಚ್ ಗೆದ್ದಿಲ್ಲ.
ಸ್ಟಾರ್ ಬ್ಯಾಟರ್‍ಗಳು ಇದ್ದರೂ ಸಹ ತಂಡ ಸಾಲು ಸಾಲು ಸೋಲುಗಳನ್ನು ಎಸ್‌ಆರ್‌ಹೆಚ್ ಕಾಣುತ್ತಿದೆ. ಡದ ಸ್ಪೋಟಕ ಬ್ಯಾಟರ್‍ಗಳ ಫಾರ್ಮ್ ನಿಜಕ್ಕೂ ತಂಡದ ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಈ ಐಪಿಎಲ್‌ನಲ್ಲಿ ಮೂರ ನೂರು ರನ್‌ಗಳ ಟಾರ್ಗೆಟ್‌ನ್ನು ಮುಟ್ಟು ಮಾಡುವ ತಂಡಗಳಲ್ಲಿ ಈ ತಂಡ ಒಂದು ಎಂದು ಪರಿಗಣಿಸಲಾಗಿತ್ತು. ಆದರೆ ಆಟಗಾರರ ಫಾರ್ಮ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. . ಸ್ಫೋಟಕ ಬ್ಯಾಟರ್‌ಗಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡಿರುವ ಸನ್ ತಂಡದ, ಬ್ಯಾಟರ್‌ಗಳು ಫ್ಲಾಫ್ ಶೋ ನೀಡುತ್ತಿದ್ದಾರೆ.
ಕಳೆದ ಬಾರಿಯ ಐಪಿಎಲ್‌ನಲ್ಲಿ ರನ್ನರ್ ಅಪ್ ಆಗಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ನಿರಾಸೆ ಅನುಭವಿಸಿದೆ. ಅಲ್ಲದೆ ಬ್ಯಾಟರ್‌ಗಳು ಪವರ್ ಪ್ಲೇನ ಸಂಪೂರ್ಣ ಲಾಭವನ್ನು ಪಡೆದು ಬ್ಯಾಟ್ ಮಾಡುವಲ್ಲಿ ವಿಫಲರಾಗಿದ್ದಾರೆ. ಇದು ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಪರಿಣಮ ಬೀರುತ್ತಿದೆ. ಸನ್ ತಂಡದಲ್ಲಿರುವ ಟಾಪ್ ಆರ್ಡರ್ ಬ್ಯಾಟರ್‌ಗಳು ಈ ಬಾರಿ ನಿರಾಸೆಯ ಕಡಲಿನಲ್ಲಿ ತಮ್ಮ ಪಯಣ ನಡೆಸಿದ್ದಾರೆ. ಸ್ಟಾರ್ ಬ್ಯಾಟರ್‌ಗಳ ಮೌನ ಮಾತು ಸನ್ ತಂಡದ ಟಾಪ್ ಆರ್ಡರ್ ಕಲೆ ಹಾಕಿದ ರನ್ ನೋಡಿದರೆ, ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸುತ್ತದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಅಭಿಷೇಕ್ ಶರ್ಮಾ ಈ ಬಾರಿ ರನ್ ಕಲೆ ಹಾಕುವುದನ್ನೇ ಮರೆತಂತೆ ಕಾಣುತ್ತಿದೆ. ಇವರು ಆಡಿದ 6 ಪಂದ್ಯಗಳಲ್ಲಿ 10.20ರ ಸರಾಸರಿಯಲ್ಲಿ 51 ರನ್ ಕಲೆ ಹಾಕಿದ್ದಾರೆ. ಇವರ ಬ್ಯಾಟ್ ಮೌನಕ್ಕೆ ಶರಣಾಗಿರುವುದು ಸನ್ ತಂಡದ ಚಿಂತೆಯನ್ನು ದ್ವಿಗುಣಗೊಳಿಸಿದೆ.
ಇನ್ನು ಇಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಹಾಗು ಎಸ್‌ಆರ್‌ಹೆಚ್ ನಡುವೆ ರೋಚಕ ಪಂದ್ಯ ನಡೆಯಲಿದ್ದು ಈ ಪಂದ್ಯವನ್ನ ಯಾರು ಗೆಲ್ತಾರೆ ಅನ್ನೋ ಕುತೂಹಲ ಮೂಡಿಸಿದೆ. ಒಟ್ನಲ್ಲಿ ಎಸ್‌ಆರ್‌ಹೆಚ್ ರನ್ ಗಳಿಸೋಕೆ ಪರದಾಡುತಿದ್ದು, ಇಂದಿನ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವ್ನ ಕಮೆಂಟ್ ಮೂಲಕ ತಿಳಿಸಿ. ನಮಸ್ಕಾರ..