ಶ್ರೀ ಲೀಲಾ ಬ್ಯೂಟಿ ಸೀಕ್ರೆಟ್ ಏನ್ ಗೊತ್ತಾ? – ಈ ಚೆಲುವೆ ಎಷ್ಟು ರೈಸ್ ತಿಂತಾರೆ!
ಶ್ರೀಲೀಲಾ.. ಮುದ್ದು ಮುಖದ ಚೆಂದುಳ್ಳಿ ಚೆಲುವೆ.. ಮುದ್ದು ಮುದ್ದಾಗಿರುವ ಶ್ರೀಲೀಲಾ ಲುಕ್, ಡ್ಯಾನ್ಸ್, ಆಕ್ಟಿಂಗ್ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದ್ರೆ ಸ್ಲಿಮ್ ಆಂಡ್ ಬ್ಯೂಟಿಫುಲ್ ಆಗಿರೋ ಶ್ರೀಲೀಲಾ ಹೇಗೆ ಫಿಗರ್ ಮೈಂಟೇನ್ ಮಾಡ್ತಾರೆ? ಅವ್ರ ಬ್ಯೂಟಿ ಸೀಕ್ರೆಟ್ ಏನು ಅನ್ನೋ ಮಾಹಿತಿ ಇಲ್ಲಿದೆ.
ಟಾಲಿವುಡ್ನ ಹಾಟ್ ಬೆಡಗಿಯರಲ್ಲಿ ಶ್ರೀಲೀಲಾ ಕೂಡ ಒಬ್ರು. ಮುದ್ದು ಮುದ್ದಾಗಿರುವ ಶ್ರೀಲೀಲಾ ಲುಕ್, ಡ್ಯಾನ್ಸ್, ಆಕ್ಟಿಂಗ್ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಅದರಲ್ಲೂ ಶ್ರೀಲೀಲಾ ಫಿಗರ್ ಮೈಂಟೇನ್ ಮಾಡಿರುವ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತೆಲುಗಿನಲ್ಲಿ ಮೊದಲ ಚಿತ್ರದಲ್ಲಿ ಅಭಿನಯಿಸಿದಾಗ ಶ್ರೀಲೀಲಾ ಸ್ಪಲ್ಪ ದಪ್ಪಗಿದ್ದರು. ಈಗ ಸ್ಲಿಮ್ ಆಗಿ ಚಿಕ್ಕ ಹುಡುಗಿಯಂತೆ ಕಾಣುತ್ತಿದ್ದಾರೆ.
ಇದನ್ನೂ ಓದಿ: ಜಾಕಿಶ್ರಾಫ್ ಜೀವನ ಗ್ರಾಫ್ ಬದಲಾಗಿದ್ದೆಲ್ಲಿ? – ಅಪ್ಪ ಜ್ಯೋತಿಷಿ.. ಮಗ ಏನೇನ್ ಕೆಲಸ ಮಾಡಿದ್ದ?
ಶ್ರೀಲೀಲಾ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಸಮತೋಲನಗೊಳಿಸುವುದರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಪ್ರತಿದಿನ 45 ನಿಮಿಷಗಳನ್ನು ಯೋಗಕ್ಕೆ ಮೀಸಲಿಡುತ್ತಾರೆ. ಜೊತೆಗೆ ಕಾರ್ಡಿಯೋ, ಹಗ್ಗ ಎಳೆಯುವುದು, ವೇಟ್ ಲಿಫ್ಟಿಂಗ್, ಥ್ರೆಡ್ ಮಿಲ್ ಓಟವನ್ನು ಒಂದು ದಿನವೂ ಬಿಡದೆ ಮಾಡುತ್ತಾರೆ.. ಇನ್ನು ಆಹಾರದ ವಿಷಯದಲ್ಲೂ ಶ್ರೀಲೀಲಾ ಅಷ್ಟೇ ಕಾಳಜಿ ವಹಿಸುತ್ತಾರೆ. ಬೆಳಗ್ಗೆ ಎಳನೀರು, ನಂತರ ಕಡಿಮೆ ಕೊಬ್ಬಿನ ಪಾನೀಯಗಳ ರಸ, ತರಕಾರಿ ಸ್ಯಾಂಡ್ವಿಚ್ ತಿನ್ನುತ್ತಾರೆ. ಒಂದು ಹಣ್ಣು, ಸಲಾಡ್ ಬೌಲ್ ಉಪಾಹಾರದಲ್ಲಿ ತೆಗೆದುಕೊಳ್ಳುತ್ತಾರೆ. ಸಲಾಡ್, ತರಕಾರಿಗಳು, ಬ್ರೌನ್ ರೈಸ್ ಮತ್ತು ಕಾಳುಗಳನ್ನು ಊಟಕ್ಕೆ ಸೇವಿಸುತ್ತಾರೆ.
ಇನ್ನು ರಾತ್ರಿಯ ಊಟದಲ್ಲಿ ಬಹಳ ಕಡಿಮೆ ಆಹಾರವನ್ನು ತೆಗೆದುಕೊಳ್ಳುತ್ತಾರೆ. ತರಕಾರಿ ಸೂಪ್ ಅಥವಾ ಯಾವುದಾದ್ರೂ ಸಲಾಡ್ ತಿನ್ನುತ್ತಾರೆ. ಸಿಹಿ ತಿನ್ನಬೇಕೆಂದು ಅನಿಸಿದಾಗ ಸಕ್ಕರೆ ಕಡಿಮೆ ಇರುವ ಸ್ವೀಟ್ ತೆಗೆದುಕೊಳ್ಳುತ್ತಾರೆ. ಇದಿಷ್ಟನ್ನು ಶ್ರೀಲೀಲಾ ಚಾಚು ತಪ್ಪದೇ ಪಾಲಿಸಿಕೊಂಡು ಬರ್ತಾರೆ.. ಹೀಗಾಗಿಯೇ ಶ್ರೀಲೀಲಾ ಫಿಟ್ ಆಂಡ್ ಫೈನ್ ಆಗಿದ್ದಾರೆ.