‘ಪುಷ್ಪ 2’ ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕಲಿದ್ದಾರೆ ಕನ್ನಡದ ಖ್ಯಾತ ನಟಿ!

ಟಾಲಿವುಡ್‌ನ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಟನೆಯ ʼಪುಷ್ಪಾ: ದಿ ರೈಸ್ʼ ಸಿನಿಮಾ ಭಾರತದಾದ್ಯಂತ ಹಿಟ್ ಆಗಿತ್ತು. ಸಮಂತಾ ರುತ್ ಪ್ರಭು ಅವರು ಡ್ಯಾನ್ಸ್ ಮಾಡಿದ್ದ ‘ಉ ಅಂಟಾವಾ ಮಾವ, ಉಊ ಅಂಟಾವಾ ಮಾವ..’ ಹಾಡು ಸೂಪರ್ ಹಿಟ್ ಆಗಿತ್ತು. ಈಗ ಎರಡನೇ ಪಾರ್ಟ್ನಲ್ಲಿ ಯಾರು ಹೆಜ್ಜೆ ಹಾಕಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಇದೀಗ ಕನ್ನಡದ ಖ್ಯಾತ ನಟಿಯೊಬ್ರು ಡ್ಯಾನ್ಸ್‌ಗೆ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಆಸಿಸ್ ಮಣಿಸಿದ್ರೆ ಭಾರತಕ್ಕೆ ಚಾಂಪಿಯನ್ ಶಿಪ್? -5 ಮ್ಯಾಚ್.. ಹಗಲು ರಾತ್ರಿ ಸೂತ್ರವೇನು?
ಪುಷ್ಪ ಸಿನಿಮಾದ ‘ಉ ಅಂಟಾವಾ ಮಾವ, ಉಊ ಅಂಟಾವಾ ಮಾವ..’ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ನಟಿ ಸಮಂತಾ ರುತ್ ಪ್ರಭು ಅವರು ಈ ಚಿತ್ರದಲ್ಲಿ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ಹಾಡಿನಿಂದ ಸಮಂತಾ ಖ್ಯಾತಿ ಮತ್ತು ಜನಪ್ರಿಯತೆ ಅಪಾರವಾಗಿ ಹೆಚ್ಚಾಯಿತು. ಇದೀಗ ಈಗ ಚಿತ್ರದ ಎರಡನೇ ಭಾಗದ ಶೂಟಿಂಗ್ ನಡೆಯುತ್ತಿದೆ. ಅಭಿಮಾನಿಗಳು ಕೂಡ ‘ಪುಷ್ಪ 2′ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಈ ವರ್ಷ ಸಮಂತಾ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಚಿತ್ರದಲ್ಲಿ ಐಟಂ ಸಾಂಗ್‌ಗೆ ಸಮಂತಾ ಬದಲಿಗೆ ಯಾವ ನಟಿ ಬರಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾನ್ಹವಿ ಕಪೂರ್ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಜಾನ್ವಿ ಜೊತೆಗೆ ಕನ್ನಡದ ನಟಿ ಶ್ರೀಲೀಲಾ ಹೆಸರು ಕೂಡ ಚರ್ಚೆಗೆ ಬಂದಿದೆ. ಆದರೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಸದ್ಯ ‘ಪುಷ್ಪ 2′ ಸಿನಿಮಾದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸ್ಕ್ರಿಪ್ಟ್ ಮೊಟಕುಗೊಳಿಸಬೇಕಾದರೆ ಐಟಂ ಹಾಡುಗಳನ್ನು ತೆಗೆದುಹಾಕಬಹುದು ಎಂಬ ಮಾತು ಕೂಡ ಇದೆ. ಹೀಗಾಗಿ ‘ಪುಷ್ಪ 2’ ಸಿನಿಮಾದಲ್ಲಿ ಏನೆಲ್ಲಾ ಡಿಫರೆಂಟ್ ಆಗಲಿದೆ ಎಂದು ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ. ಅಭಿಮಾನಿಗಳ ಮನದಲ್ಲಿ ಸಿನಿಮಾದ ಕುತೂಹಲ ಮುಗಿಲು ಮುಟ್ಟಿದೆ.