ನಿಮ್ಗೆ ಗೊತ್ತಿಲ್ಲ ತುಳಸಿ ಎಲೆಯ ಪ್ರಯೋಜನ ತಿಳಿದುಕೊಳ್ಳಿ – ಹೀಗೆ ಮಾಡಿದ್ರೆ ಮಾಯವಾಗುತ್ತೆ ಮನೆಯಲ್ಲಿರೋ ನಕಾರಾತ್ಮಕ ಶಕ್ತಿ

ತುಳಸಿ ಎಲೆಗಳಷ್ಟೇ ತುಳಸಿ ನೀರು ಕೂಡ ಪವಿತ್ರ ಹಾಗೂ ಶ್ರೇಷ್ಠವಾದುದ್ದಾಗಿದೆ. ತುಳಸಿ ಎಲೆಯ ನೀರು ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯು ಉಳಿಯದಂತೆ ಮಾಡುತ್ತದೆ. ಆ ಮನೆಯ ದೋಷಗಳು ಕೂಡ ಪರಿಹಾರವಾಗುವುದು. ಮನೆಯ ಮೂಲೆ ಮೂಲೆಯಲ್ಲಿ ತುಳಸಿ ಎಲೆಯ ನೀರನ್ನು ಸಿಂಪಡಿಸುವುದರ ಪ್ರಯೋಜನವೇನು.? ತುಳಸಿ ನೀರಿನ ಮಹತ್ವವೇನು ಅನ್ನೋದ್ದನ್ನ ಸುದ್ದಿಯಾನದ ಈ ಲೇಖನದ ಮೂಲಕ ತಿಳಿದುಕೊಳ್ಳಿ.
ತುಳಸಿ ಪ್ರಯೋಜನ ಸಾಕಷ್ಟು ಜನಕ್ಕೆ ತಿಳಿದಿದೆ. ತುಳಸಿಯನ್ನು ದೈವಿಕ ಶಕ್ತಿಯುಳ್ಳ ಸಸ್ಯವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸುವುದರಿಂದ ಅಥವಾ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಅದು ಮನೆಗೆ ಧನಾತ್ಮಕ ಶಕ್ತಿಯನ್ನು, ಸಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಅದು ಮನೆಯ ನಕಾರಾತ್ಮಕತೆಯನ್ನು ಮತ್ತು ವಾಸ್ತು ದೋಷಕ್ಕೆ ಸಂಬಂಧಿಸಿದ ದೋಷಗಳನ್ನು ನಿವಾರಣೆ ಮಾಡುವುದು. ತುಳಸಿ ಕೇವಲ ಔಷಧಿಯ ಗುಣವನ್ನು ಮಾತ್ರವಲ್ಲ, ದೈವಿಕ ಶಕ್ತಿಯನ್ನು ಕೂಡ ಹೊಂದಿದೆ. ತುಳಸಿ ಗಿಡಕ್ಕೆ ಮಾತ್ರವಲ್ಲ, ತುಳಸಿ ಎಲೆಗಳ ನೀರಿನಲ್ಲೂ ದೈವಿಕ ಶಕ್ತಿಯಿದೆ.

ಕೇವಲ ತುಳಸಿ ದಳಗಳು ಮಾತ್ರವಲ್ಲ, ತುಳಸಿ ಎಲೆಗಳಿಂದ ಮಾಡಿದ ನೀರಿಗೂ ಅಗಾಧವಾದ ಶಕ್ತಿಯಿರುತ್ತದೆ. ಹಾಗೂ ಇದನ್ನು ಪವಿತ್ರವೆಂದೂ ಪರಿಗಣಿಸಲಾಗುತ್ತದೆ. ತುಳಸಿ ನೀರನ್ನು ಮನೆಯಲ್ಲಿ ಸಿಂಪಡಿಸುವುದರಿಂದ ಅದು ಮನೆಯಲ್ಲಿನ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ. ಕೌಟುಂಬಿಕ ಸಂತೋಷ ಮತ್ತು ಸಮೃದ್ಧಿಯು ಅಭಿವೃದ್ಧಿಯಾಗುವುದು. ಹಾಗಾಗಿ, ವಾರಕ್ಕೊಮ್ಮೆಯಾದರೂ ಮನೆಯ ಮೂಲೆ ಮೂಲೆಯಲ್ಲೂ ತುಳಸಿ ಎಲೆಯ ನೀರನ್ನು ಸಿಂಪಡಿಸಬೇಕು.
ಪ್ರತಿದಿನವೂ ಮನೆಯಲ್ಲಿ ದೇವರ ಪೂಜೆಯನ್ನು ಮಾಡಿದ ಬಳಿಕ ಸಂಪೂರ್ಣ ಮನೆಯ ಮೂಲೆ ಮೂಲೆಯಲ್ಲೂ ತುಳಸಿ ಎಲೆಯ ನೀರನ್ನು ಸಿಂಪಡಿಸಬೇಕು. ಈ ರೀತಿ ನಾವು ಮನೆಯ ಮೂಲೆ ಮೂಲೆಯಲ್ಲೂ ತುಳಸಿ ಎಲೆಯ ನೀರನ್ನು ಸಿಂಪಡಿಸುವುದರಿಂದ ಅದು ಮನೆಯಲ್ಲಿನ ಎಲ್ಲಾ ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ವಾಸ್ತು ದೊಷದಿಂದ ಎದುರಾಗುವ ಸಮಸ್ಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುವುದು. ಈ ನೀರು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.

ನೋಡಿರಿ

