ಕೊರೊನಾ ಹೋಯ್ತು.. ಮತ್ತೊಂದು ಮಹಾಮಾರಿ ಬಂತಾ?
ಯಾವುದು ಈ ಹೊಸ ವೈರಸ್?
ಕೊರೊನಾ ವೈರಸ್ನಿಂದ ದೇಶಕ್ಕೆ ಮುಕ್ತಿ ಸಿಗುತ್ತಲೇ ಈಗ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಕಳೆದ ಎರಡು ತಿಂಗಳಲ್ಲಿ ದೇಶದ ಹಲವೆಡೆ ಜನರಿಗೆ ಇನ್ಫ್ಲುಯೆನ್ಸಾ ಅನ್ನೋ ಸೋಂಕು ಕಾಡೋಕೆ ಶುರುವಾಗಿದೆ.
ಸೋಂಕಿಗೊಳಗಾದವರು ಹಲವು ದಿನಗಳ ಕಾಲ ಶೀತ, ಜ್ವರ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಅನಾರೋಗ್ಯಕ್ಕೊಳಗಾದವರು ಸಂಖ್ಯೆಯೂ ಹೆಚ್ಚಾಗಿದ್ಯಂತೆ. ಇನ್ನು ಇನ್ಫ್ಲುಯೆನ್ಸಾ ಸೋಂಕಿಗೊಳಗಾದ ಬಹುತೇಕರು ಆಸ್ಪತ್ರೆಗೂ ದಾಖಲಾಗಿದ್ದಾರೆ.
ಇದನ್ನೂ ಓದಿ: ಭಾರತೀಯ ಸಿರಪ್ ಕಂಪನಿಗಳಿಗೆ ಬಿಗ್ ಶಾಕ್ – ಮೂವರು ಅರೆಸ್ಟ್!
ಇನ್ಫ್ಲುಯೆನ್ಸಾ ಅನ್ನೋದು ಕೊರೊನಾ ಸೋಂಕಿನಂತೆಯೇ ಅಪಾಯಕಾರಿಯಾಗುವ ಸಾಧ್ಯತೆ ಇದೆ ಅಂತಾ ವೈದ್ಯರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಐಸಿಎಂಆರ್ ಸೋಂಕಿನಿಂದ ಪಾರಾಗಲು ಕೊರೊನಾ ಮಾದರಿಯ ಸಲಹೆಗಳನ್ನ ನೀಡಿದೆ. ಮಾಸ್ಕ್ ಧರಿಸಿ, ಜನದಟ್ಟಣೆ ಪ್ರದೇಶದಿಂದ ದೂರವಿರಿ, ಶೇಕ್ಹ್ಯಾಂಡ್ ಮಾಡಬೇಡಿ ಅಂತಾ ಐಸಿಎಂಆರ್ ಮಾರ್ಗಸೂಚಿ ಹೊರಡಿಸಿದೆ.