ಕ್ರೀಡಾ ಸ್ಪೂರ್ತಿ ಮೆರೆದ ನೀರಜ್ ಚೋಪ್ರಾ – ಪಾಕ್ ಆಟಗಾರನ ಜೊತೆ ಪೋಸ್!

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನ ಯಾವಾಗಲೂ ಯುದ್ಧದ ರೀತಿ ಬಿಂಬಿಸಲಾಗುತ್ತೆ. ಬದ್ಧ ವೈರಿಗಳ ನಡುವಿನ ಸಮರ. ಕ್ರಿಕೆಟ್ ಮಹಾಯುದ್ಧ ಅಂತೆಲ್ಲಾ ಮ್ಯಾಚ್ಗೂ ಮುನ್ನವೇ ಎರಡೂ ದೇಶಗಳ ವೈರತ್ವಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಕೊಡಲಾಗುತ್ತೆ. ನ್ಯೂಸ್ ಚಾನೆಲ್ಗಳಂತೂ ಆಟಗಾರರ ಫೋಟೋಗೆ ಸೈನಿಕರ ಸಮವಸ್ತ್ರ ಹಾಕಿ, ಮಸಾಲೆ ಹಚ್ಚಿ ಪ್ಲೇಯರ್ಸ್ಗಳನ್ನ ಯುದ್ಧ ಭೂಮಿಗೆ ಇಳಿಸಿ ಬಿಡ್ತಾವೆ. ಆದ್ರೆ, ಆಟಗಾರರು ಮಾತ್ರ ಎರಡೂ ದೇಶಗಳ ನಡುವಿನ ದ್ವೇಷ ಮರೆತು ಕ್ರೀಡಾಸ್ಫೂರ್ತಿಯಿಂದ ಆಡ್ತಾರೆ. ಅದಕ್ಕೆ ಮತ್ತೊಂದು ಸಾಕ್ಷಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಗೋಲ್ಡ್ ಮೆಡಲ್ ಗೆದ್ದುಕೊಟ್ಟ ಜ್ಯಾವೆಲಿನ್ ಥ್ರೋ ನೀರಜ್ ಚೋಪ್ರಾ ಅವರ ನಡೆ.
ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ರೆ, ಪಾಕಿಸ್ತಾನದ ಅರ್ಶದ್ ನದೀಮ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಫೋಟೋ ಸೆಷನ್ ವೇಳೆ ನೀರಜ್ ಪಾಕಿಸ್ತಾನದ ಅರ್ಶದ್ರನ್ನ ಕೂಡ ಹತ್ತಿರಕ್ಕೆ ಕರೆದುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಹೇಗೆ ಭಾರತ-ಪಾಕ್ ನಡುವಿನ ಕ್ರಿಕೆಟ್ ಮ್ಯಾಚ್ ಹೈವೋಲ್ಟೇಜ್ ಆಗಿರುತ್ತೋ, ಈಗ ನೀರಜ್ ಚೋಪ್ರಾ ಮತ್ತು ಅರ್ಶದ್ ನಡುವಿನ ಜ್ಯಾವೆಲಿನ್ ಥ್ರೋ ಕೂಡ ಅಷ್ಟೇ ಫೈಟ್ನಿಂದ ಕೂಡಿರುತ್ತೆ. ಆದ್ರೆ, ನೀರಜ್ ಮತ್ತು ಅರ್ಶದ್ ಈಗ ಒಳ್ಳೆಯ ಸ್ನೇಹಿತಾಗಿದ್ದು, ಅದ್ರಲ್ಲೂ ಫೋಟೋ ಸೆಷನ್ ವೇಳೆ ನೀರಜ್ ಚೋಪ್ರಾರ ನಡೆಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗುತ್ತಿದೆ.