ಕೆಆರ್‌ಪಿ ಪಕ್ಷ ಸಂಘಟನೆ ಮಾಡುವವರಿಗೆ ಭರ್ಜರಿ ಗಿಫ್ಟ್ – ಜನಾರ್ದನ ರೆಡ್ಡಿಯಿಂದ ಸ್ಪೋರ್ಟ್ಸ್ ಬೈಕ್ ಉಡುಗೊರೆ

ಕೆಆರ್‌ಪಿ ಪಕ್ಷ ಸಂಘಟನೆ ಮಾಡುವವರಿಗೆ ಭರ್ಜರಿ ಗಿಫ್ಟ್ – ಜನಾರ್ದನ ರೆಡ್ಡಿಯಿಂದ ಸ್ಪೋರ್ಟ್ಸ್ ಬೈಕ್ ಉಡುಗೊರೆ

ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ವಿಧಾನಸಭೆ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ಕೆಆರ್ ಪಿ ಅನ್ನೋ ಹೊಸ ಪಕ್ಷ ಕಟ್ಟಿರುವ ಜನಾರ್ದನ  ರೆಡ್ಡಿ ಈಗಾಗಲೇ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಜೊತೆಗೆ ಹೊಸಪಕ್ಷ ಸಂಘಟನೆಗೆ ಒಂದಲ್ಲಾ ಒಂದು ರೀತಿಯಲ್ಲಿ ಕಸರತ್ತು ಮಾಡುತ್ತಿರುವ ಜನಾರ್ದನ ರೆಡ್ಡಿ ಈಗಾಗಲೇ ತನ್ನ ಪತ್ನಿ ಅರುಣಾ ರೆಡ್ಡಿಯನ್ನು ಕೂಡಾ ಅಖಾಡಕ್ಕೆ ಇಳಿಸುವುದಾಗಿ ಹೇಳಿದ್ದರು. ಇದೀಗ ಮತದಾರರನ್ನ ತನ್ನ ಪಕ್ಷದೆಡೆ ಸೆಳೆಯಲು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ತನ್ನ ಪಕ್ಷದ ಸಂಘಟನೆ ಮಾಡಲು ಶ್ರಮಿಸುವವರಿಗೆ ಬೈಕ್ ನೀಡಲಿದ್ದಾರೆ.

ಇದನ್ನೂ ಓದಿ:  ರಿಯಲ್ ಸ್ಟಾರ್ ಉಪೇಂದ್ರಗೆ ಸಿಕ್ತು ಅಧಿಕೃತ ಚಿಹ್ನೆ – ‘ಆಟೋ’ ಮೂಲಕ ಚುನಾವಣಾ ಕಹಳೆ

ಕಳೆದ ಎರಡು ದಿನಗಳ ಹಿಂದೆ ರೆಡ್ಡಿ ಪುತ್ರಿ ಬ್ರಹ್ಮಿಣಿ ಸೀರೆ ಹಂಚಿಕೆ ಮಾಡಿದ್ದು ಸಖತ್ ಸುದ್ದಿಯಾಗಿತ್ತು. ಇದೀಗ ಜನಾರ್ದನ ರೆಡ್ಡಿ ಅವರು ಪಕ್ಷ ಸಂಘಟನೆ ಮಾಡುವವರಿಗೆ ಬೈಕ್ ನೀಡಲು ಮುಂದಾಗಿದ್ದಾರೆ. ಕೆಆರ್ ಪಿ (KRP Party) ಪಕ್ಷದ ಸಂಘಟನೆಗೆ ಗಂಗಾವತಿ ಮತ್ತು ಬಳ್ಳಾರಿ ನಗರದ ಪ್ರಮುಖ ಮುಖಂಡರು ಓಡಾಡಲು 100 ಟಿವಿಎಸ್ ಸ್ಪೋರ್ಟ್ಸ್ ಬೈಕ್‌ (Sports Bike) ಗಳನ್ನು ಪಕ್ಷದ ಹೆಸರು ಮತ್ತು ಚಿನ್ಹೆಗಳನ್ನು ಬಳಸಿ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಈಗಾಗಲೇ ತಲಾ ಒಂದೊಂದು ಕ್ಷೇತ್ರದಲ್ಲಿ ಐದು ಬೈಕ್ ಗಳು ಬಂದಿವೆ. ಪ್ರಮುಖ ಕಾರ್ಯಕರ್ತರು ಕ್ಷೇತ್ರದೆಲ್ಲೆಡೆ ಪಕ್ಷದ ಪ್ರಮುಖ ಸಭೆ, ಸಮಾರಂಭಗಳನ್ನು ಹಮ್ಮಿಕೊಳ್ಳಲು ಸಂಘಟನಾತ್ಮಕ ಕಾರ್ಯಗಳನ್ನು ಇವುಗಳನ್ನು ಬಳಸಲಿದ್ದಾರೆ. ಗಣಿಧಣಿ ಎಲೆಕ್ಷನ್ ಅಖಾಡಕ್ಕೆ ಇಳಿಯುವುದು ಯಾವಾಗಲು ವಿಶೇಷ ರೀತಿಯಲ್ಲೇ. ಬಿಜೆಪಿಯಲ್ಲಿದ್ದಾಗಲೂ ರೆಡ್ಡಿ ಚುನಾವಣಾ ಹವಾ ಜೋರಾಗಿಯೇ ಇರುತ್ತಿತ್ತು. ಈಗ ತನ್ನದೇ ಸ್ವಂತ ಪಕ್ಷ ಕೆಅರ್ ಪಿ ಸಂಘಟನೆಯಲ್ಲೂ ಕೂಡಾ ವಿಶೇಷ ಪ್ರಯತ್ನ ಮಾಡುವ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾರೆ.

suddiyaana