ನೋಡಲು ಹೂವಿನಂತಿದ್ರೂ ಇದು ಹೂವಲ್ಲ – ಕೀಟಗಳ ಲೋಕವೇ ಅದ್ಬುತ

ನೋಡಲು ಹೂವಿನಂತಿದ್ರೂ ಇದು ಹೂವಲ್ಲ – ಕೀಟಗಳ ಲೋಕವೇ ಅದ್ಬುತ

ಪ್ರಕೃತಿಯ ವೈವಿಧ್ಯತೆಯನ್ನು ತಾಣ.  ಅದರಲ್ಲೂ ಕೀಟಗಳ ಲೋಕ ಒಂದು ಅದ್ಭುತವಾದ ಕುತೂಹಲಕಾರಿ ಪ್ರಪಂಚ. ಮರದಂತೆ ಕಾಣುತ್ತೆ ಆದರೆ ಮರವಲ್ಲ. ಎಲೆಯಂತೆ ಕಾಣುತ್ತೆ ಆದರೆ ಎಲೆಯಲ್ಲ. ಕೋಲಿನಂತೆ ಕಾಣುತ್ತೆ ಕೋಲಲ್ಲ. ಹೂವಿನಂತೆ ಕಾಣುತ್ತೆ ಆದರೆ ಹೂವಲ್ಲ. ಇಂತಹ ಪ್ರಕೃತಿಯೊಂದಿಗೆ ಮಿಳಿತವಾದ ಕೀಟಗಳನ್ನು ಸಾಕಷ್ಟು ಬಾರಿ ನೋಡಿರುತ್ತೇವೆ. ಅದೇ ರೀತಿಯ ಇಲ್ಲೊಂದು ಕೀಟದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಬೈಕ್ ನಲ್ಲೇ ಬೆಟ್ಟ ಹತ್ತಿದ ಯುವಕ – ಉಸಿರು ಬಿಗಿ ಹಿಡಿದು ನೋಡುವಂತಿದೆ ದೃಶ್ಯ

ಮಹಿಳೆಯೊಬ್ಬರು ಕೀಟವೊಂದರ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. Waterfall Retreat & Environmental Centre ಎಂಬ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಸುಂದರವಾದ ಹೂ ಬಿಟ್ಟ ಗಿಡ ಕಾಣುತ್ತದೆ. ಆ ಹೂವಿನ ಸೌಂದರ್ಯವನ್ನು ಗಮನಿಸುತ್ತಿದ್ದಂತೆ ಗಿಡದಲ್ಲಿರುವ ಹೂ ನಿಧಾನಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಬಳಿಕ ಅದು ಹೂವಲ್ಲ ಕೀಟ ಎಂದು ನಮಗೆ ಭಾಸವಾಗುತ್ತದೆ. ಹೂವುಗಳನ್ನೇ ಹೋಲುವ ಈ ಕೀಟ ನಮ್ಮ ಕಣ್ಣುಗಳನ್ನು ನಂಬಲಾಗದ ರೀತಿಯಲ್ಲಿ ಮೋಸಗೊಳಿಸುತ್ತವೆ. ಈ ಅಪರೂಪದ ಕೀಟದ ವಿಡಿಯೋವನ್ನು ದಕ್ಷಿಣ ಆಫ್ರಿಕಾದಲ್ಲಿ ಸೆರೆ ಹಿಡಿಯಲಾಗಿದೆ. ಲ್ಯಾವೆಂಡರ್ ಮತ್ತು ಬಿಳಿ ಮಿಶ್ರಿತ ಬಣ್ಣದ ಆರ್ಕಿಡ್ ನಂತೆ ಕಾಣುವ ಈ ಕೀಟವನ್ನು ಸಮೀಪ ಹೋದರಷ್ಟೇ ಕೀಟ ಎಂದು ತಿಳಿಯಲು ಸಾಧ್ಯ.

ಫಾರ್ಮ್ ಒಂದರ ಒಡತಿ ಮಾರ್ಗರೆಟ್ ನೆವಿಲ್ಲೆ ಎಂಬುವವರು ಈ ಅಪರೂಪದ ಕೀಟದ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ತಮ್ಮ ತೋಟದಲ್ಲಿ ಅಡ್ಡಾಡುತ್ತಿದ್ದ ವೇಳೆ ಅವರಿಗೆ  ಲ್ಯಾವೆಂಡರ್ ಪೊದೆಯ ಮೇಲೆ ಹೂವೊಂದು ಚಲಿಸುತ್ತಿರುವಂತೆ ಕಾಣಿಸಿದೆ. ಕೂಡಲೇ ಮತ್ತಷ್ಟು ಸಮೀಪ ಹೋದಾಗ ಅದೂ ಹಿಂದೆಂದೂ ತಾನು ಕಂಡಿರದಂತಹ ಆಕರ್ಷಕ ಕೀಟ ಎಂಬುದು ಆಕೆಗೆ ತಿಳಿದಿದೆ. ಈ ತುಂಬಾ ಸೂಕ್ಷ್ಮವೆನಿಸುವ ಈ ಜೀವಿಯನ್ನು ಸ್ಪೈನಿ ಫ್ಲವರ್ ಮ್ಯಾಂಟಿಸ್ ಅಥವಾ ಸ್ಯೂಡೋಕ್ರೆಬೊಟ್ರಾ ವಾಲ್ಬರ್ಗಿ ಎಂದು ಕರೆಯಲಾಗುತ್ತದೆ.

ಈ ಕೀಟ ಸಾಮಾನ್ಯವಾಗಿ ಸಹರನ್ ಅಫ್ರಿಕಾದಲ್ಲಿ ಕಂಡು ಬರುವ ಮಂಟೀಸ್ ಎಂಬ ಜಾತಿಯ ಜೀವಿಯಾಗಿದೆ. ಇದು ನೋಡುಗರ ಕಣ್ಣಿಗೆ ಚಲಿಸುವ ಹೂವಿನಂತೆ ಕಾಣುತ್ತದೆ. ಈ ಕೀಟದ ಬಿಳಿ ಮತ್ತು ಹಸಿರು ಬಣ್ಣದ ರೆಕ್ಕೆಗಳು ಮೇಲಿರುವ ಕಣ್ಣಿನಂತೆ ಕಾಣುವ ಸುಳಿಯಾಕಾರದ ಕಲಾಕೃತಿ ಎದ್ದು ಕಾಣುತ್ತಿದ್ದು, ಅವುಗಳ ದೇಹದ ಉಳಿದ ಭಾಗವು ಸಣ್ಣ ನೇರಳೆ ಬಣ್ಣದ ಹೂವಿನಂತೆ ಕಾಣಿಸುತ್ತದೆ. ಈ ವಿಡಿಯೋ ನೋಡಿದ ಅನೇಕರು ಹೀಗೂ ಒಂದು ಕೀಟ ಇದೆ ಎಂಬುದನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಇತ್ತ ಲ್ಯಾವೆಂಡರ್ ಪೊದೆಯಲ್ಲಿದ್ದ ಈ ಕೀಟಕ್ಕೆ ಮಹಿಳೆ ಮಿಸ್ ಫ್ರಿಲ್ಲಿ ಪ್ಯಾಂಟ್ಸ್ ಎಂದು ಹೆಸರಿಟ್ಟಿದ್ದಾರೆ.

suddiyaana