ಗಾಲೆಯಲ್ಲಿ ಗೆದ್ದ ಸ್ಪಿನ್ನರ್ಸ್ – ಸುತಾರ್ Vs ಪ್ರಭಾತ್ ಚಕ್ರವ್ಯೂಹ
ಮುತ್ತಯ್ಯನ ಶಿಖರ ಮುಟ್ಟೋಕಾಗುತ್ತಾ?

ಗಾಲೆಯಲ್ಲಿ ಗೆದ್ದ ಸ್ಪಿನ್ನರ್ಸ್ – ಸುತಾರ್ Vs ಪ್ರಭಾತ್ ಚಕ್ರವ್ಯೂಹಮುತ್ತಯ್ಯನ ಶಿಖರ ಮುಟ್ಟೋಕಾಗುತ್ತಾ?

ಕಳೆದ ಎರಡು ವರ್ಷಗಳಿಂದ ಭಾರತ ಟೆಸ್ಟ್ ಕ್ರಿಕೆಟ್​ನಲ್ಲಿ ಗೆದ್ದಿದ್ದಕ್ಕಿಂತ ಬಿದ್ದಿದ್ದೇ ಜಾಸ್ತಿ. ದಶಕಗಳಿಂದ ಕಟ್ಟಿದ್ದ ಅಜೇಯ ವಿಜಯದ ದಾಖಲೆಗಳೆಲ್ಲಾ ಪುಡಿಪುಡಿಯಾಗಿವೆ. ಭಾರತದ ಈ ಸತತ ಸೋಲುಗಳಿಗೆ ಸ್ಪಿನ್ ಬೌಲರ್​ಗಳ ಎದುರಿನ ಫೇಲ್ಯೂರ್ ಕೂಡ ಕಾರಣವಾಗಿತ್ತು. ಬಟ್ ಈಗ ಲಂಕಾ ವಿರುದ್ಧ ಅದೇ ಸ್ಪಿನ್ ಜಾಲ ಭೇದಿಸಿ ಗೆದ್ದು ಬೀಗಿದ್ದಾರೆ.

ಇದನ್ನೂ ಓದಿ : ಮೊದಲ ಟೆಸ್ಟ್‌ನಲ್ಲಿ ಲಂಕಾ ಬೇಟೆಯಾಡಿದ ಟೀಮ್ ಇಂಡಿಯಾ – 10 ವಿಕೆಟ್ ಕಬಳಿಸಿದ ಮಾನವ್ ಸುತಾರ್

ಶ್ರೀಲಂಕಾದ ಐತಿಹಾಸಿಕ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಪಿನ್ ಬೌಲರ್‌ಗಳ ಸ್ವರ್ಗವೇ ಆಗಿದೆ. ಈ ಪಿಚ್ ಮತ್ತು ಇಲ್ಲಿನ ಅಟ್ಮಾಸ್ಪಿಯರ್​ನಲ್ಲಿ ಸ್ಪಿನ್ನರ್‌ಗಳಿಗೆ ಸಿಕ್ಕಷ್ಟು ಸಕ್ಸಸ್ ಬೇರೆಲ್ಲೂ ಸಿಕ್ಕಿದ್ದು ಕಡಿಮೆಯೇ. ಆರಂಭದ ಎರಡು ದಿನಗಳಲ್ಲಿ ಬ್ಯಾಟರ್​ಗಳಿಗೆ ಸ್ವಲ್ಪ ಸಹಾಯ ಮಾಡಿದ್ರೂ 3, 4, 5ನೇ ದಿನಗಳಲ್ಲಿ ಸ್ಪಿನ್ನರ್​ಗಳೇ ಹೀರೋಗಳು. ಪ್ರಸ್ತುತ ನಡೆಯುತ್ತಿರೋ ಟೆಸ್ಟ್ ಮ್ಯಾಚಲ್ಲೂ ಅದೇ ಆಗಿದೆ. ಗಾಲೆ ಪಿಚ್​ನಲ್ಲಿ ಬಿದ್ದಿರೋ ವಿಕೆಟ್​ಗಳ ಪೈಕಿ ಶೇಕಡಾ 80ಕ್ಕಿಂತ ಹೆಚ್ಚಿನ ವಿಕೆಟ್​ಗಳನ್ನ ಸ್ಪಿನ್ನರ್​ಗಳೇ ತೆಗೆದಿದ್ದಾರೆ. ಈಗ ಭಾರತ-ಲಂಕಾ ಪಂದ್ಯದಲ್ಲೂ ಸ್ಪಿನ್ನರ್​ಗಳೇ ಮಿಂಚಿದ್ದಾರೆ.

ಎರಡೂ ತಂಡಗಳ ಪರವೂ ಸ್ಪಿನ್ನರ್ ಗಳೇ ಗೇಮ್ ಚೇಂಜರ್ಸ್​!

ಗಾಲೆ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದಿದೆ. ಈ ಪಿಚ್ ಸ್ಪಿನ್ ಫ್ರೆಂಡ್ಲಿ ಅನ್ನೋದು ಗೊತ್ತಿದ್ದೇ ಭಾರತ ಈ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಅಂದ್ರೆ ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್ ಜೊತೆ ಕಣಕ್ಕಿಳಿದಿತ್ತು. ಭಾರತಕ್ಕೆ ಈ ಕಾಂಬಿನೇಷನ್ ವರ್ಕೌಟ್ ಆಗಿದೆ. ಹಾಗೇ ಎರಡೂ ತಂಡಗಳಲ್ಲೂ ಸ್ಪಿನ್ ಬೌಲರ್​ಗಳೇ ಮೇಲುಗೈ ಸಾಧಿಸಿದ್ದಾರೆ. ಭಾರತ ಫಸ್ಟ್ ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್ ನಲ್ಲಿ ದೇವದತ್ ಪಡಿಕ್ಕಲ್ ಅವರ ಅದ್ಭುತ ಶತಕದ ನೆರವಿನಿಂದ ಬಿಗ್ ಸ್ಕೋರ್ ಕಲೆ ಹಾಕಿದ್ರೂ ಶ್ರೀಲಂಕಾದ ಸ್ಪಿನ್ನರ್‌ಗಳಾದ ಪ್ರಭಾತ್ ಜಯಸೂರ್ಯ ಮತ್ತು ನುವಾಂತ ಭಾರತದ 7 ವಿಕೆಟ್‌ಗಳನ್ನು ಕಬಳಿಸಿ ಸ್ಪಿನ್ ಜಾದೂ ಪ್ರದರ್ಶಿಸಿದರು. ಅಷ್ಟೇ ಅಲ್ಲ ಲಂಕಾದ ಇನ್ನಿಂಗ್ಸ್ ವೇಳೆ ಭಾರತದ ಸ್ಪಿನ್ ಜೋಡಿಯಾದ ರವೀಂದ್ರ ಜಡೇಜಾ ಮತ್ತು ಯುವ ಸ್ಪಿನ್ನರ್ ಮಾನವ್ ಸುತಾರ್, ಕುಲ್ದೀಪ್ ಸೇರಿ 8 ವಿಕೆಟ್ ತೆಗೆದು ಲಂಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದ್ರು. ಹೀಗಾಗಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 284 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್​ನಲ್ಲೂ ಲಂಕಾ ಪರ ಜಯಸೂರ್ಯ 3 ವಿಕೆಟ್ಸ್ ತೆಗೆದ್ರೆ ನುವಾಂತ ಒಂದು ವಿಕೆಟ್ ತೆಗೆದಿದ್ರು. ಇತ್ತ ಭಾರತದ ಪರವೂ ಮಾನವ್ ಸುತಾರ್ ಎರಡನೇ ಇನ್ನಿಂಗ್ಸ್​ನಲ್ಲಿ ಫೈವ್ ಫರ್ ವಿಕೆಟ್ಸ್ ತೆಗೆದು ಲಂಕಾ ಬ್ಯಾಟರ್​ಗಳನ್ನ ಕಾಡಿದ್ರು. ಫಸ್ಟ್ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ತೆಗೆದಿದ್ದ ಸುತಾರ್ ಎರಡನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ಸ್ ಬೇಟೆಯಾಡಿ ಬಿಗ್ ಇಂಪ್ಯಾಕ್ಟ್ ಮಾಡಿದ್ರು. ಎರಡೂ ಇನ್ನಿಂಗ್ಸ್​ನಿಂದ 10 ವಿಕೆಟ್ಸ್ ತೆಗೆದ್ರು. ಹೀಗಾಗಿ ಭಾರತ ಈ ಪಂದ್ಯವನ್ನ 165 ರನ್​ಗಳಿಂದ ಗೆದ್ದುಕೊಳ್ತು.

2 ಇನ್ನಿಂಗ್ಸ್.. 20 ವಿಕೆಟ್.. ಸ್ಪಿನ್ನರ್ ಗಳದ್ದೇ 15 ವಿಕೆಟ್!

ಇನ್ನು ಭಾರತದ ಈ ಗೆಲುವಿನಲ್ಲಿ ಸ್ಪಿನ್ನರ್​ಗಳೇ ಶೈನ್ ಆಗಿದ್ದು. 2 ಇನ್ನಿಂಗ್ಸ್​ಗಳಲ್ಲಿ ಭಾರತ ಟೋಟಲ್ ಆಗಿ 20 ವಿಕೆಟ್​ಗಳನ್ನ ಬೇಟೆಯಾಡಿದ್ದು ಈ ಪೈಕಿ 15 ವಿಕೆಟ್​ಗಳು ಬರೀ ಸ್ಪಿನ್ ಬೌಲರ್​ಗಳಿಂದಲೇ ಬಂದಿದೆ. ಯುವ ಸ್ಪಿನ್ನರ್ ಮಾನವ್ ಸುತಾರ್ 10 ವಿಕೆಟ್, ಸ್ಪಿನ್ ದಿಗ್ಗಜ ರವೀಂದ್ರ ಜಡೇಜಾ 4 ವಿಕೆಟ್, ಹಾಗೇ ಕುಲ್ದೀಪ್ ಯಾದವ್ 1 ವಿಕೆಟ್ ತೆಗೆದು ಮಿಂಚಿದ್ರು. ಉಳಿದಂತೆ ಫಾಸ್ಟ್ ಬೌಲರ್​ಗಳಾದ ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ 5 ವಿಕೆಟ್ಸ್ ತಗೊಂದ್ರು. ಇನ್ನು ಲಂಕಾ ಪರ ಸ್ಪಿನ್ ಬೌಲಿಂಗ್​ನಲ್ಲಿ ಸಿಕ್ಕಿದ್ದು 8 ವಿಕೆಟ್. ಅದ್ರಲ್ಲಿ ಪ್ರಭಾತ್ ಜಯಸೂರ್ಯ ಒಬ್ರೇ 7 ವಿಕೆಟ್ಸ್ ಬೇಟೆಯಾಡಿದ್ರು. ಆದ್ರೆ ಭಾರತದ ಪರ ಸ್ಪಿನ್ನರ್​ಗಳೇ ಹೀರೋ ಆದ್ರು. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಗಾಲೆ ಮೈದಾನದಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕರು ತಮ್ಮ ಅಜೇಯ ಕೋಟೆಯನ್ನಾಗಿ ಮಾಡಿಕೊಂಡಿದ್ದಾರೆ.

ಸ್ಪಿನ್ನರ್ ಗಳ ಸ್ವರ್ಗ ಗಾಲೆ!

ಮುತ್ತಯ್ಯ ಮುರಳೀಧರನ್ ಗಾಲೆಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ

15 ಪಂದ್ಯಗಳಲ್ಲಿ ಬರೋಬ್ಬರಿ 111 ವಿಕೆಟ್ ಕಲೆಹಾಕಿದ್ದು ಅತೀ ಹೆಚ್ಚು ವಿಕೆಟ್

1,347 ಅಂತಾರಾಷ್ಟ್ರೀಯ ವಿಕೆಟ್‌ ತೆಗೆದು ಸಾರ್ವಕಾಲಿಕ ಅಗ್ರಸ್ಥಾನದಲ್ಲಿ ಸ್ಥಾನ

2010ರಲ್ಲಿ ತಮ್ಮ ವೃತ್ತಿ ಜೀವನದ ಕೊನೇ ಬಾಲಲ್ಲಿ ಪ್ರಗ್ಯಾನ್ ಓಜಾ ವಿಕೆಟ್

ಟೆಸ್ಟ್ ಇತಿಹಾಸದಲ್ಲಿ ಬರೋಬ್ಬರಿ 67 ಬಾರಿ ಇನ್ನಿಂಗ್ಸ್‌ ವೊಂದರಲ್ಲಿ 5 ವಿಕೆಟ್

22 ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಜಗತ್ತಿನ ಏಕೈಕ ಬೌಲರ್

ಹೆರಾತ್, 102 ವಿಕೆಟ್‌ಗಳನ್ನು ಕಬಳಿಸಿ ಸಾರ್ವಕಾಲಿಕ ಎರಡನೇ ಸ್ಥಾನದಲ್ಲಿ

ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಕೂಡ ಗಾಲೆಯಲ್ಲಿ ಕಿಂಗ್ ಆಫ್ ಗಾಲೆ

ಕೇವಲ 11 ಟೆಸ್ಟ್‌ಗಳಲ್ಲಿ 80ಕ್ಕೂ ಅಧಿಕ ವಿಕೆಟ್ ಪಡೆದು ಜಗತ್ತನ್ನು ಬೆರಗು

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಬೌಲರ್‌ಗಳಿಗೆ ಪರ್ತ್ ಅಥವಾ ಲಾರ್ಡ್ಸ್ ಮೈದಾನಗಳು ಎಷ್ಟು ಸವಾಲೋ, ಅದೇ ರೀತಿ ವಿಶ್ವದ ಯಾವುದೇ ಶ್ರೇಷ್ಠ ಬ್ಯಾಟರ್‌ಗಾದರೂ ಗಾಲೆಯಲ್ಲಿ ಸ್ಪಿನ್ನರ್‌ಗಳನ್ನು ಎದುರಿಸಿ 4ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಕಠಿಣ ಸವಾಲೇ ಸರಿ. ಹೀಗಿದ್ರೂ ಭಾರತ ಲಂಕಾದಲ್ಲಿ ಸ್ಪಿನ್ ವ್ಯೂಹವನ್ನ ಯಶಸ್ವಿಯಾಗಿ ಬೇಧಿಸಿದೆ. ಕಳೆದ ಎರಡು ವರ್ಷಗಳಿಂದ ಭಾರತ ಟೆಸ್ಟ್ ತಂಡ ಸ್ಪಿನ್ನರ್​ಗಳ ವಿರುದ್ಧದ ಪರ್ಫಾಮೆನ್ಸ್ ಕುಸಿತ ಕಂಡಿತ್ತು. ಬಟ್ ಈಗ ಸ್ಪಿನ್ನರ್​ಗಳ ಸ್ವರ್ಗದಲ್ಲೇ ಗೆದ್ದಿರೋದ್ರಿಂದ ಸ್ವಲ್ಪ ರಿಲ್ಯಾಕ್ಸ್ ಆಗಿರ್ತಾರೆ.

Shantha Kumari

Leave a Reply

Your email address will not be published. Required fields are marked *