ಅಬ್ಬಬ್ಬಾ.. ಇದೆಂಥಾ ವಿಸ್ಮಯ..! – ಮಾನವನ ಮುಖ ಹೋಲುವ ಜೇಡ ಪತ್ತೆ!

ಅಬ್ಬಬ್ಬಾ.. ಇದೆಂಥಾ ವಿಸ್ಮಯ..! – ಮಾನವನ ಮುಖ ಹೋಲುವ ಜೇಡ ಪತ್ತೆ!

ಪ್ರಕೃತಿ ವಿಸ್ಮಯಗಳ ಆಗರ.. ನಮ್ಮ ಕಣ್ಣುಗಳೇ ನಂಬಲಾರದಂತಹ ಘಟನೆಗಳು ನಡೆಯುತ್ತಿರುತ್ತವೆ. ವಿಚಿತ್ರ ಕೈ ಕಾಲುಗಳನ್ನು ಹೊಂದಿರುವ ಶಿಶುವಿನ ಜನನ. ಮನುಷ್ಯರಂತೆ ಮುಖ ಇರುವ ಪ್ರಾಣಿಗಳು ಜನಿಸಿರುವ ಬಗ್ಗೆ ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಮನುಷ್ಯನ ಮುಖವನ್ನು ಹೋಲುವ ಜೇಡ ಪತ್ತೆಯಾಗಿದೆ. ಇದರ ಫೋಟೋ, ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಜೆಡಿಎಸ್‌ ಭದ್ರಕೋಟೆಯಲ್ಲಿ ರಾಹುಲ್‌ ಗಾಂಧಿ ಮತಶಿಕಾರಿ – ಸ್ಟಾರ್‌ ಚಂದ್ರು ಪರ ಅಬ್ಬರದ ಪ್ರಚಾರ

ಬಿಹಾರದ ಜೆಹಾನಾಬಾದ್‌ನ ಮನೆಯೊಂದರ ಗೋಡೆಯಲ್ಲಿ ಈ ವಿಚಿತ್ರ ಜೇಡ ಪತ್ತೆಯಾಗಿದೆ. ಈ ಜೇಡ ತಲೆಯ ಭಾಗ ಮನುಷ್ಯನ ಮುಖದಂತೆ ಇದೆ. ಮನೆಯ ಗೋಡೆಯ ಮೇಲೆ ಅಂಟಿಕೊಂಡಿದ್ದ ಈ ಜೇಡವನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ. ಆದರೆ ಈ ಜೇಡ ಎಷ್ಟು ವಿಷಕಾರಿಯಾಗಿದೆ ಎಂಬುದು ಇನ್ನು ತಿಳಿದುಬಂದಿಲ್ಲ. ಸದ್ಯ ಈ ವಿಭಿನ್ನವಾದ ಜೇಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

@jbd.meme ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಮಾನವನ ಮುಖವನ್ನು ಹೋಳುವ ಜೇಡದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ಸೋಶಿಯಲ್‌ ಮೀಡಿಯಾ ಬಳಕೆದಾರರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ. ಒಬ್ಬರು “ನಿಜವಾದ ಸ್ಪೈಡರ್ ಮ್ಯಾನ್” ಎಂದು ಬರೆದರೆ ಮತ್ತೊಬ್ಬರು “ಇದು ನಿಜವಲ್ಲ, ಎಡಿಟ್​ ಮಾಡಿರುವ ವಿಡಿಯೋ” ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇಂತಹ ಜೇಡ ಇರುವುದು ನಿಜನಾ ಅಥವಾ ಎಡಿಟ್‌ ಮಾಡಿರುವುದಾ ಎಂಬುವುದು ತಿಳಿದುಬಂದಿಲ್ಲ.

Shwetha M

Leave a Reply

Your email address will not be published. Required fields are marked *