ಭಾರತದಲ್ಲಿ ಧೂಳೆಬ್ಬಿಸಿದ ಸ್ಪೈಡರ್ ಮ್ಯಾನ್ – 500 ಕೋಟಿ ರೂಪಾಯಿ ಕ್ಲಬ್ ಸೇರಿದ ಹಾಲಿವುಡ್ ಸಿನಿಮಾ

ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಹಾಲಿವಡ್ ಸಿನಿಮಾ ಹವಾ ಜೋರಾಗಿದೆ. ಇದೀಗ ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಸಿನಿಮಾ 500 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ.
ಇದನ್ನೂ ಓದಿ:ಸೀತೆ ಸಾಯಿ ಪಲ್ಲವಿಗೆ ಅಗ್ನಿ ಪರೀಕ್ಷೆ! | ಕೂದಲಿಗೂ ಕೊಂಕು.. ಪಾತ್ರಕ್ಕೆ ಉರಿನಾ?
ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿಗಿನ ಸಿನಿಮಾಗಳು 100 ಕೋಟಿ ಕ್ಲಬ್ ಸೇರಲು ಕಷ್ಟಪಡುತ್ತಿರುವಾಗಲೇ ಹಾಲಿವುಡ್ ಚಿತ್ರ ಭಾರತದಲ್ಲಿ ದಾಖಲೆ ಬರೆದಿದೆ. ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಸಿನಿಮಾ ಭಾರತೀಯ ಗಲ್ಲಾಪೆಟ್ಟಿಗೆಯನ್ನ ದೋಚಿದೆ. ಈ ಸಿನಿಮಾ 11 ದಿನ ಪೂರೈಸಿದ್ದು, ವೀಕೆಂಡ್ ಗಳಿಕೆ ಸೇರಿ 500 ಕೋಟಿ ರೂಪಾಯಿ ಗಡಿ ದಾಟಿದೆ. ಈ ಮೂಲಕ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಅಧಿಕೃತವಾಗಿ 500 ಕೋಟಿ ರೂಪಾಯಿ ಕ್ಲಬ್ ಸೇರಿದ ಸಾಧನೆ ಮಾಡಿದೆ.
ಸ್ಪೈಡರ್ ಮ್ಯಾನ್ ಸಿನಿಮಾ ರಿಲೀಸ್ ಆದ ಮೊದಲ ವಾರ ಒಟ್ಟು 334.75 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಎರಡನೇ ವಾರದಲ್ಲೂ ಸಿನಿಮಾದ ಗಳಿಕೆ ಮುಂದುವರೆದಿತ್ತು. ಇಲ್ಲಿಯವರೆಗೆ ಭಾರತದಲ್ಲಿ ಚಿತ್ರದ ಒಟ್ಟು ಗ್ರೋಸ್ ಕಲೆಕ್ಷನ್ 496.93 ಕೋಟಿ ರೂಪಾಯಿಯಾಗಿದ್ದು, ನೆಟ್ ಕಲೆಕ್ಷನ್ 415.51 ಕೋಟಿ ರೂಪಾಯಿ ಅಷ್ಟಾಗಿದೆ. ವೀಕೆಂಡ್ ಗಳಿಕೆ ಸೇರಿ ಭಾರತದಲ್ಲಿ 500 ಕೋಟಿಯ ಬೃಹತ್ ಮೈಲಿಗಲ್ಲನ್ನು ದಾಟಿ ಹೊಸ ಇತಿಹಾಸ ಬರೆದಿದೆ.
ಟಾಮ್ ಹಾಲೆಂಡ್ ಅಭಿನಯದ ಈ ಸಿನಿಮಾ ಜುಲೈ 30ರಂದು ತೆರೆಕಂಡಿತ್ತು. ಇದೀಗ ಈ ಸ್ಪೈಡರ್ ಮ್ಯಾನ್ ಸಿನಿಮಾ ಆಲ್ಟೈಮ್ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರಿದೆ. ಯಾಕೆಂದರೆ, ಈಗಾಗಲೇ 13 ಸಾವಿರದ 945 ಕೋಟಿ ರೂಪಾಯಿ ಜಾಗತಿಕ ಗಳಿಕೆ ಕಂಡಿದೆ. ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ ಜಾಗತಿಕವಾಗಿ 1.67 ಬಿಲಿಯನ್ ಡಾಲರ್ ಗಳಿಸಿದೆ. ಇದರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಬಂದ 1 ಬಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ಮೊತ್ತವೂ ಸೇರಿದೆ. ಅಮೆರಿಕದಲ್ಲಿ ಬಿಡುಗಡೆಯಾದ ಎರಡನೇ ವಾರಾಂತ್ಯದಲ್ಲಿ ಈ ಚಿತ್ರವು ಸುಮಾರು 145 ಮಿಲಿಯನ್ ಡಾಲರ್ ಗಳಿಸಿದ್ದು, ಅಮೆರಿಕದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಮೂರನೇ ಅತಿ ದೊಡ್ಡ ಎರಡನೇ ವಾರಾಂತ್ಯದ ಗಳಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡನೇ ವಾರಾಂತ್ಯದಲ್ಲೇ 100 ಮಿಲಿಯನ್ ಡಾಲರ್ ಗಳಿಕೆಯ ಗಡಿಯನ್ನು ದಾಟಿದ ಸೋನಿ ಸಂಸ್ಥೆಯ ಮೊದಲ ಚಿತ್ರ ಇದಾಗಿದೆ.

ನೋಡಿರಿ

