ಕಾಲು ಕಳೆದುಕೊಂಡರೂ ನಿಲ್ಲದ ಛಲ – ದೊಡ್ಡ ಬಂಡೆಯನ್ನೇ ಹತ್ತಿದ ಯುವಕ

ಕಾಲು ಕಳೆದುಕೊಂಡರೂ ನಿಲ್ಲದ ಛಲ – ದೊಡ್ಡ ಬಂಡೆಯನ್ನೇ ಹತ್ತಿದ ಯುವಕ

ಮನಸಿದ್ದರೆ ಮಾರ್ಗ ಎಂಬ ಮಾತನ್ನು ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ಕನಸು, ಇಚ್ಛಾಶಕ್ತಿಗೆ ಅನುಸಾರವಾಗಿ ಬದುಕು ಸಾಗುತ್ತದೆ. ಮಾಡಲೇಬೇಕು ಅನ್ನುವ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ. ಮನಸ್ಸು ದೃಢವಾಗಿದ್ದಾಗ, ದೇಹದ ನ್ಯೂನ್ಯತೆ ಲೆಕ್ಕಕ್ಕೆ ಬರುವುದಿಲ್ಲ ಎಂಬುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನಾವು ಗಮನಿಸಬಹುದು.

ಇದನ್ನೂ ಓದಿ: Watch – ಬಿಟ್ಟು ಹೋಗದಿರು ನನ್ನ… ಸಂಗಾತಿಗಾಗಿ ರೋದಿಸುತ್ತಿರುವ ಗಿಣಿರಾಮ

ಐಪಿಎಸ್​ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಗೆ ಎರಡೂ ಕಾಲುಗಳಿಲ್ಲ. ಆದರೆ, ಕೃತಕ ಜೋಡಣೆಗಳ ಸಹಾಯದಿಂದ ಕಡಿದಾದ ಕಲ್ಲುಬಂಡೆಯನ್ನು ಏರಲು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಏನಿದೆ ಎನ್ನುವುದನ್ನು ಮರೆತು, ಏನಿಲ್ಲ ಎನ್ನುವುದರತ್ತಲೇ ನಾವು ಹೆಚ್ಚು ಆಲೋಚಿಸುತ್ತೇವೆ. ಈ ಒಣಚಿಂತೆಯೇ ನಮ್ಮನ್ನು ಅಗ್ನಿಯಂತೆ ಸುಡುತ್ತದೆ. ಕ್ರಮೇಣ ದೇಹದ ಮೇಲೆ ಪರಿಣಾಮ ಬೀರಿ ಮಾನಸಿಕವಾಗಿಯೂ ಕುಸಿಯುವಂತೆ ಮಾಡುತ್ತದೆ. ‘ನೀವು ನಿಮ್ಮ ಕನಸುಗಳ ಬೆನ್ನಟ್ಟುವುದನ್ನು ಯಾವುದರಿಂದಲೂ ತಡೆಯಲು ಸಾಧ್ಯವಿಲ್ಲ’ ಎನ್ನುವ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

suddiyaana