RCB Vs SRH ಪಂದ್ಯಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಪೂಜೆ!

RCB Vs SRH ಪಂದ್ಯಕ್ಕೂ ಮುನ್ನ ದುರ್ಘಟನೆ ನಡೆಯದಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಶೇಷ ಪೂಜೆ!

ಜೂನ್‌ 4 RCB ಪಾಲಿಗೆ ಕರಾಳ ದಿನ. RCB ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತ ಸಂಭವಿಸಿ, 11 ಅಭಿಮಾನಿಗಳು ಮೃತಪಟ್ಟಿದ್ದರು. ಇದೀಗ ಈ ದುರ್ಘಟನೆ ಸಂಭವಿಸಿದ ಬಳಿಕ ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೂರ್ನಿ ಶುರುವಾಗುತ್ತಿದೆ. ಮಾ. 28ರಂದು IPL ಟೂರ್ನಿ ಆರಂಭಗೊಳ್ಳಲಿದ್ದು, ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಗೇಟ್‌ಗಳಿಗೆ ವಿಶೇಷ ಪೂಜೆ ನಡೆಸಲಾಗಿದೆ.

ಇದನ್ನೂ ಓದಿ: ಇರಾನ್‌ ನಮಗೆ ದೊಡ್ಡ ಗಿಫ್ಟ್‌ ಕೊಟ್ಟಿದೆ.. ಕದನ ವಿರಾಮದ ಬೆನ್ನಲ್ಲೇ ಹಾರ್ಮುಜ್‌ ಓಪನ್‌ ಬಗ್ಗೆ ಟ್ರಂಪ್‌ ಮಹತ್ವದ ಹೇಳಿಕೆ!

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಬಳಿಕ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಬಿಸಿಸಿಐ ಕಪ್ಪು ಪಟ್ಟಿಗೆ ಸೇರಿತ್ತು. ಬೆಂಗಳೂರಿನಲ್ಲಿ ಆಯೋಜನೆಗೊಳ್ಳಬೇಕಿದ್ದ ಪಂದ್ಯಗಳು ಕೈತಪ್ಪಿಹೋಗಿತ್ತು. ಈ ದುರ್ಘಟನೆ ಬಳಿಕ ವೆಂಕಟೇಶ್ ಪ್ರಸಾದ್ ನೇತೃತ್ವದ ಹೊಸ ಆಡಳಿತ ಮಂಡಳಿ ಮತ್ತೆ ಕ್ರಿಕೆಟ್ ತರುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ವಿಶೇಷ ಪೂಜೆ ಮೂಲಕ ಚಿನ್ನಸ್ವಾಮಿಯ ಯಶಸ್ಸಿಗೆ ಪ್ರಾರ್ಥಿಸಲಾಗಿದೆ.

ಐಪಿಎಲ್‌ ಸೀಸನ್‌ 19ರ ಉದ್ಘಾಟನಾ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆಯಲಿದೆ. ಮೊದಲ ಪಂದದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡೆಯಲಿದೆ. ಇದೀಗ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗಣಹೋಮ ಸೇರಿದಂತೆ ವಿಶೇಷ ಪೂಜೆ ಮಾಡಲಾಗಿದೆ. ಕ್ರೀಡಾಂಗಣದ ಒಳಗಡೆ ಹಾಗೂ ಕ್ರೀಡಾಂಗಣ ಪ್ರಮುಖ ಗೇಟ್‌ಗಳಿಗೆ ಪೂಜೆ ಮಾಡಲಾಗಿದೆ. ಪಂಚ ಅರ್ಚಕರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಶನಿವಾರದಿಂದ ಪಂದ್ಯಗಳು ಆರಂಭಗೊಳ್ಳುತ್ತಿರುವ ಕಾರಣ ಇಂದು (ಮಾ.25) ಪೂಜೆ ನಡೆದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿ ಪಂದ್ಯಗಳು ಆರಂಭಗೊಳ್ಳುವ ಹಿನ್ನಲೆಯಲ್ಲಿ ಭಾರಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಒಂದಡೆ ಅಭಿಮಾನಿಗಳ ನಿಯಂತ್ರಿಸುವುದರ ಜೊತೆ ಹಲವು ಹಂತದ ಭದ್ರತೆಯನ್ನು ಕೈಗೊಳ್ಳಲಾಗಿದೆ. ಇನ್ನು ಪಂದ್ಯದ ದಿನ ಸಂಚಾರ ಮಾರ್ಗದಲ್ಲೂ ಕೆಲ ಬದಲಾವಣೆ ಮಾಡಲಾಗುತ್ತದೆ.

Shwetha M