ಅಸ್ತಮಾ ನಿವಾರಣೆಗೆ ವಿಶೇಷ ಪ್ರಸಾದ! – ಜೀವಂತ ಮೀನು ನುಂಗಲು ವಿದೇಶಗಳಿಂದಲೂ ಬರುತ್ತಾರೆ ಜನ  

ಅಸ್ತಮಾ ನಿವಾರಣೆಗೆ ವಿಶೇಷ ಪ್ರಸಾದ! – ಜೀವಂತ ಮೀನು ನುಂಗಲು ವಿದೇಶಗಳಿಂದಲೂ ಬರುತ್ತಾರೆ ಜನ  

ಹೈದರಾಬಾದ್​​: ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಸಿಹಿ ತಿನಿಸು, ಅನ್ನಪ್ರಸಾದ, ಹಣ್ಣು ಹಂಪಲುಗಳನ್ನು ಪ್ರಸಾದವಾಗಿ ನೀಡುತ್ತಾರೆ. ಎಂದಾದರೂ ಜೀವಂತ ಮೀನುಗಳನ್ನು ಪ್ರಸಾದವಾಗಿ ನೀಡುವುದನ್ನು ಕೇಳಿದ್ದೀರಾ? ಇಲ್ಲೊಂದು ಕಡೆ ಜೀವಂತ ಮೀನುಗಳನ್ನು ಪ್ರಸಾದವಾಗಿ ನೀಡಲಾಗುತ್ತಿದೆ. ಇದರಿಂದ ಅಸ್ತಮಾ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ದೇಶ ವಿದೇಶಗಳಿಂದ ಆಗಮಿಸಿ ಪ್ರಸಾದವನ್ನು ಸ್ವೀಕರಿಸಲು ಮುಗಿಬೀಳುತ್ತಾರೆ.

ಹೈದರಾಬಾದ್‌ ನ ಬಥಿನಿ ಕುಟುಂಬವೊಂದು ಈ ನಾಟಿ ಮಿಶ್ರಿತ ಮೀನನ್ನು ಪ್ರಸಾದವಾಗಿ ನೀಡುತ್ತಿದೆ. ಇದನ್ನು ಸೇವನೆ ಮಾಡಿದರೆ ಅಸ್ತಮಾ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಪ್ರಸಾದಕ್ಕಾಗಿ ಉತ್ತರದ ರಾಜ್ಯಗಳ ರೋಗಿಗಳು ಕೂಡ ಹೈದರಾಬಾದ್‌ಗೆ ಬಹಳ ನಂಬಿಕೆಯಿಂದ ಬರುತ್ತಾರೆ. ಈ ಪ್ರಸಾದ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಇನ್ನು ಕೆಲವು ಅನುಮಾಗಳು ಈ ಕುರಿತಾಗಿದೆ. ಆದರೂ ಈ ಪ್ರಸಾದಕ್ಕಾಗಿ ಬರುವ ಆಸ್ತಮಾ ರೋಗಿಗಳ ಸಂಖ್ಯೆ ಏರುತ್ತಲೇ ಇದೆ.

ಇದನ್ನೂ ಓದಿ: ಮೀನುಗಾರರ ಬಲೆಗೆ ಬಿದ್ದ 22 ಕೆ.ಜಿ ತೂಕದ ಗೋಳಿ ಮೀನು – ಒಂದು ಮೀನಿಗೆ ಸಿಕ್ಕಿದ್ದು ಲಕ್ಷ.. ಲಕ್ಷ.. ಬೆಲೆ.!

ಪ್ರತಿವರ್ಷ ಮೃಗಶಿರ ಕಾರ್ತಿಕ ಹಬ್ಬದಂದು ಬಥಿನಿ ಕುಟುಂಬ ನೀಡುವ ಮೀನು ಪ್ರಸಾದ ವಿತರಣೆಗೆ ಸಲಕ ಸಿದ್ಧತೆ ಮಾಡಲಾಗುತ್ತದೆ. ಜೂನ್ 9,10 ರಂದು ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷ ಜನರಿಗೆ 5 ಕ್ವಿಂಟಾಲ್​​​ ಪ್ರಸಾದ ವಿತರಣೆ ಆಗಲಿವೆ. ಮೀನುಗಾರಿಕೆ ಇಲಾಖೆ ಈಗಾಗಲೇ 2.5 ಲಕ್ಷ ಕೊರಮೀನು ಸಿದ್ಧಪಡಿಸಿದೆ. ಇಲ್ಲಿ ಸಸ್ಯಹಾರಿಗಳಿಗೂ ಬೆಲ್ಲದ ಮೂಲಕ ಮೀನಿನ ಪ್ರಸಾದ ನೀಡಲಾಗುತ್ತದೆ.

ಜೂನ್‌ 9, 10 ರಂದು ನಡೆಯುತ್ತಿರುವ ಪ್ರಸಾದ ವಿತರಣಾ ಕಾರ್ಯಕ್ರಮ ಸಂಬಂಧ ಹೈದರಾಬಾದ್ ಟ್ರಾಫಿಕ್ ಪೊಲೀಸರು ನಾಂಪಲ್ಲಿಯ ನುಮಾಯಿಶ್ ಮೈದಾನದಲ್ಲಿ ಸಂಚಾರ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಕಾರ್​, ಬಸ್​​, ಬೈಕ್​ನಲ್ಲಿ ಬರುವವರಿಗೆ ಬೇರೆ ಬೇರೆ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರು, ವೃದ್ಧರು ಮತ್ತು ಮಹಿಳೆಯರಿಗೆ ವಿಶೇಷ ಸರತಿ ಸಾಲುಗಳು ಮತ್ತು ಕೌಂಟರ್‌ಗಳಿವೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೂರು ವರ್ಷಗಳ ವಿರಾಮದ ನಂತರ ಪ್ರಸಾದ ವಿತರಣೆ ನಡೆಯುತ್ತಿದೆ.

ಇನ್ನು ಈ ಪ್ರಸಾದ ಔಷಧಿಯೋ.. ಪ್ರಸಾದವೋ? ಎಂಬ ಚರ್ಚೆ ಆರಂಭದಿಂದಲೂ ಇದೆ. ಮೀನು ಪ್ರಸಾದ ವಿತರಣೆ ಬಗ್ಗೆ ಮೊದಲಿನಿಂದಲೂ ಜನ ವಿಜ್ಞಾನ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಯಾವುದೇ ವೈಜ್ಞಾನಿಕ ದೃಢೀಕರಣವಿಲ್ಲದೆ ಅಕ್ರಮವಾಗಿ ಮೀನು ಪ್ರಸಾದ ವಿತರಿಸಲಾಗುತ್ತಿದೆ ಎಂಬುದು ಅವರ ಆರೋಪ. ಹೀಗಾಗಿ 2013ರಲ್ಲಿ ಜನ ವಿಜ್ಞಾನ ವೇದಿಕೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಔಷಧಿಯಿಂದ ಯಾವುದೇ ಹಾನಿಗಳಿವೆಯೇ ಎಂಬ ಬಗ್ಗೆ ಹೈಕೋರ್ಟ್‌ ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಇದರೊಂದಿಗೆ ಇದನ್ನು ‘ಔಷಧ’ ಎಂದು ಕರೆಯಬಾರದು ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ ‘ಪ್ರಸಾದ’ ಹೆಸರಿನಲ್ಲಿ ಬಥಿನಿ ಕುಟುಂಸ್ಥರು ಹಂಚುತ್ತಿದ್ದಾರೆ.

ಕೊರಮೀನು ಮೀನಿನ ಬಾಯಿಗೆ ಅರಿಶಿನದ ಪೇಸ್ಟ್ ಹಾಕಿ ಜನರ ಬಾಯಿಗೆ ಹಾಕಿದರೆ ರೋಗ ವಾಸಿಯಾಗುತ್ತದೆ ಎಂದು ನಂಬುವುದಾದರೂ ಹೇಗೆ? ಜೀವಂತ ಮೀನನ್ನು ಬಾಯಿಗೆ ಹಾಕಿಕೊಳ್ಳುವಾಗ ಏನಾದರೂ ತೊಂದರೆ ಎದುರಾದರೆ?  ಮೀನಿನ ಪ್ರಸಾದ ಸೇವನೆಯಿಂದ ಅಸ್ತಮಾ ವಾಸಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಮೀನಿನ ಪ್ರಸಾದ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂಬುದು ವಿಚಾರವಾದಿಗಳ ವಾದವಾಗಿದೆ. ಆದರೆ ಈ ವಿವಾದಗಳ ನಡುವೆಯೂ ಮೀನಿನ ಪ್ರಸಾದ ವಿತರಣೆ ನಡೆಯುತ್ತಿದೆ.

suddiyaana