ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ – ಇದ್ದಕ್ಕಿದ್ದಂತೆ ಹಿರಿಯ ನಟಿ ಮೈ ಮೇಲೆ ಬಂದ ದೇವರು!

ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ – ಇದ್ದಕ್ಕಿದ್ದಂತೆ ಹಿರಿಯ ನಟಿ ಮೈ ಮೇಲೆ ಬಂದ ದೇವರು!

ಸ್ಯಾಂಡಲ್‌ವುಡ್ ಏಳಿಗೆಗಾಗಿ ಬುಧವಾರ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆಸಲಾಗಿದೆ ಕಲಾವಿದರ ಒಳಿತಿಗಾಗಿ ಗಣ ಹೋಮ, ಆಶ್ಲೇಷಾ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ, ನಾಗದೇವರ ವಿಶೇಷ ಪೂಜೆ ನಡೆಸಲಾಗಿದೆ. ನಾಗಾರಾಧನೆ ವೇಳೆ ಹಿರಿಯ ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಗ್ಯಾರಂಟಿ ಪರಿಷ್ಕರಣೆಗೆ ಮುಂದಾದ ರಾಜ್ಯ ಸರ್ಕಾರ! – ಮಹತ್ವದ ನಿರ್ಧಾರಕ್ಕೆ ಹೈಕಮಾಂಡ್‌ ಅಸ್ತು?

ಈ ನಾಗದರ್ಶನದ ವೇಳೆ ಹಿರಿಯ ನಟಿ ಜ್ಯೋತಿ ಅವರ ಮೈ ಮೇಲೆ ದೇವರು ಬಂದಿದೆ. ಕೂಡಲೇ ಇತರೆ ಕಲಾವಿದರು ನಟಿ ಜ್ಯೋತಿ ಅವರನ್ನು ಹಿಡಿದುಕೊಂಡಿದ್ದಾರೆ. ಬಳಿಕ ನೀರು ಕುಡಿಸಿ ಜ್ಯೋತಿ ಅವರನ್ನ ಸಮಾಧಾನ ಪಡಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ನಟಿ, ದೇವರು ಮೈಮೇಲೆ ಬಂದಾಗ ಸ್ವಲ್ಪ ನಿಮಿಷಗಳ ಕಾಲ ನನಗೇನು ಗೊತ್ತಾಗಲ್ಲ. ಸಡನ್ ಆಗಿ ನನ್ನ ಮೈಮೇಲೆ ಶಕ್ತಿ ಹೆಚ್ಚಾಗುತ್ತೆ. ನಾಲ್ಕೈದು ಜನ ಹಿಡಿದುಕೊಳ್ಳೋದು ಕಷ್ಟವಾಗುತ್ತೆ. ಆಗ ನನಗೆ ಏನಾಗುತ್ತೆ ಅನ್ನೋದು ಗೊತ್ತಾಗಲ್ಲ. ದೇವರ ಅನುಗ್ರಹ ಇರೋದ್ರಿಂದ ಮೈಮೇಲೆ ಬರುತ್ತೆ ಅಂತ ಹೇಳಿದ್ದಾರೆ. ಹೀಗಾಗಿ ನಾನು ಅದನ್ನ ನಂಬಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಈ ಹಿಂದೆಯೂ ನಾಗದೇವರು ಮೈಮೇಲೆ ಬಂದ ಅನುಭವ ಆಗಿತ್ತು. ದೊಡ್ಡ, ದೊಡ್ಡ ಪೂಜೆ, ಪುನಸ್ಕಾರ ಮಾಡೋ ಸಂದರ್ಭದಲ್ಲಿ ದೇವಿ ಆರಾಧನೆ ಮಾಡೋವಾಗ ನನ್ನ ಮೈಯಲ್ಲಿ ವೈಬ್ರೇಷನ್ ಆಗುತ್ತೆ. ನನ್ನ ಮೇಲೆ ದೇವಿಯ ಅನುಗ್ರಹ ಇದೆ ಅನ್ನೋದನ್ನ ತೋರಿಸಿಕೊಳ್ಳಲು ಈ ರೀತಿಯಾದ ಘಟನೆ ನಡೆಯುತ್ತೆ. ನಾಗಾರಾಧನೆಯ ಸಮಯದಲ್ಲೂ ನನಗೆ ದೇವರು ಸ್ವಲ್ಪ ಮೈಮೇಲೆ ಬರುತ್ತೆ. ಇವತ್ತೂ ಸಹ ಕಲಾವಿದರ ಸಂಘದಲ್ಲಿ ನಾನಿದ್ದೀನಿ ಅಂತ ತೋರಿಸಿಕೊಳ್ಳಲು ದೇವರು ನನ್ನ ಮೈಮೇಲೆ ಬಂತು. ದೇವರು ಇಲ್ಲಿದ್ದಾರೆ. ಈ ಪೂಜೆಯನ್ನು ಸ್ವೀಕರಿಸಿದ್ದಾರೆ. ನಮ್ಮ ಇಂಡಸ್ಟ್ರಿಗೆ ಒಳ್ಳೆಯದುಗುತ್ತೆ. ಮುಂದೆ ಯಶಸ್ಸು ಸಿಗಲಿದೆ ಎಂದು ಜ್ಯೋತಿ ಹೇಳಿದ್ದಾರೆ.

Shwetha M