ಬಾಂಗ್ಲಾ ಬೌಲರ್‌ಗೆ ವಿರಾಟ್ ಕೊಹ್ಲಿಯಿಂದ ಸ್ಪೆಷಲ್ ಗಿಫ್ಟ್
ಸ್ಟಾರ್ ಆಟಗಾರನಿಂದ ವಿಶೇಷ ಉಡುಗೊರೆ ಪಡೆದು ಸಂಭ್ರಮಿಸಿದ ಮೀರಜ್

ಬಾಂಗ್ಲಾ ಬೌಲರ್‌ಗೆ ವಿರಾಟ್ ಕೊಹ್ಲಿಯಿಂದ ಸ್ಪೆಷಲ್ ಗಿಫ್ಟ್ಸ್ಟಾರ್ ಆಟಗಾರನಿಂದ ವಿಶೇಷ ಉಡುಗೊರೆ ಪಡೆದು ಸಂಭ್ರಮಿಸಿದ ಮೀರಜ್

ಟೀಮ್ ಇಂಡಿಯಾ , ಬಾಂಗ್ಲಾದೇಶ ಪ್ರವಾಸವನ್ನು ಟೆಸ್ಟ್ ಸರಣಿ ಗೆಲ್ಲುವ ಮೂಲಕ ಮುಕ್ತಾಯಗೊಳಿಸಿದೆ. ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದರೂ ಕೂಡಾ ಟೀಂ ಇಂಡಿಯಾ, ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎರಡನೇ ಟೆಸ್ಟ್ ಗೆಲ್ಲಲು ಶತಪ್ರಯತ್ನ ಮಾಡಿದ ಬಾಂಗ್ಲಾದೇಶ ತನ್ನ ಆಟದ ಮೂಲಕ ಎಲ್ಲರನ್ನೂ ಆಕರ್ಷಿಸಿತ್ತು. ಅದರಲ್ಲೂ ಇಡೀ ಪ್ರವಾಸದಲ್ಲಿ ಬಾಂಗ್ಲಾ ಪರ ಮಿಂಚಿದ ಮೆಹದಿ ಹಸನ್ ಮಿರಾಜ್, ಬಾಂಗ್ಲಾದೇಶ ಏಕದಿನ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಕ್ಕಾಗಿ ಮೀರಜ್, ವಿರಾಟ್ ಕೊಹ್ಲಿಯಿಂದ ವಿಶೇಷ ಉಡುಗೊರೆಯನ್ನೂ ಸಹ ಪಡೆದಿದ್ದಾರೆ.

ಇದನ್ನೂ ಓದಿ:  ಐಪಿಎಲ್ ಬಿಡ್ಡಿಂಗ್ – ಇತಿಹಾಸ ಬರೆದ ಸ್ಯಾಮ್ ಕರನ್, ದಾಖಲೆಯ 18.50 ಕೋಟಿ ರೂಗೆ ಪಂಜಾಬ್ ಕಿಂಗ್ಸ್ ಪಾಲು

ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮೀರಜ್, ಎರಡನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲೂ ಮಿಂಚಿದ್ದರು. ಟೀಂ ಇಂಡಿಯಾದ ಪ್ರಮುಖ 5 ವಿಕೆಟ್​ಗಳನ್ನು ಉರುಳಿಸಿದ ಮೀರಜ್ ಆಟಕ್ಕೆ ವಿರಾಟ್ ಕೊಹ್ಲಿ ಕೂಡಾ ಭೇಷ್ ಹೇಳಿದ್ದಾರೆ. ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೀರಜ್‌ಗೆ, ವಿರಾಟ್ ಕೊಹ್ಲಿ ಸ್ಪೆಷಲ್ ಗಿಪ್ಟ್ ನೀಡಿದ್ದಾರೆ. ಮೀರ್‌ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಂತರ ವಿರಾಟ್ ತಮ್ಮ ಜೆರ್ಸಿಯನ್ನು ಮೀರಜ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಜೆರ್ಸಿ ಮೇಲೆ ವಿರಾಟ್ ಕೊಹ್ಲಿ ಸಹಿ ಹಾಕಿ ಉಡುಗೊರೆ ನೀಡಿದ್ದಾರೆ. ತನಗೆ ನೀಡಿದ ವಿಶೇಷ ಉಡುಗೊರೆಯಿಂದಾಗಿ ಮೀರಜ್‌ ತುಂಬಾ ಖುಷಿಪಟ್ಟಿದ್ದಾರೆ.

suddiyaana