ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ನ್ಯೂಸ್ – ಶಬರಿಮಲೆಗೆ ಹೋಗಲು KSRTC ಯಿಂದ ವಿಶೇಷ ವ್ಯವಸ್ಥೆ!
ಕೇರಳದ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪಸ್ವಾಮಿ ಈ ವರ್ಷದ ಅವಧಿ ಶುರುವಾಗಿದೆ. ಇದೀಗ ಶಬರಿಮಲೆ ಯಾತ್ರೆ ಕೈಗೊಳ್ಳುವವರಿಗೆ ಕೆಎಸ್ಆರ್ಟಿಸಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಶಬರಿಮಲೆಗೆ KSRTC ವೋಲ್ವೋ ಬಸ್ ಬಿಡಲಿದೆ.
ಇದನ್ನೂ ಓದಿ: IND Vs SA.. ಯಾರಿಗೆ ಬ್ಯಾಡ್ಲಕ್? – ಭಾರತಕ್ಕೆ ಬ್ಯಾಟಿಂಗ್ ಫೇಲ್ಯೂರ್ ಶಾಪ
ನವೆಂಬರ್ 29 ರಿಂದ ಬೆಂಗಳೂರು ಟು ಶಬರಿಮಲೆಗೆ ಬಸ್ ಸಂಚಾರ ಶುರುವಾಗಲಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ಸೀಸನ್ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲ ಆಗಲಿ ಎಂದು ಈ ವ್ಯವಸ್ಥೆ ಮಾಡಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪ್ರಯಾಣಕ್ಕಾಗಿ ಮೊದಲ ಬಾರಿಗೆ ವೋಲ್ವೋ ಬಸ್ ಸಂಚಾರ ಮಾಡಲಿದೆ.
ಶಾಂತಿನಗರದಿಂದ ಶಬರಿಮಲೆ ನೀಲಕ್ಕಲ್ಗೆ ಬಸ್ ಪ್ರಯಾಣ ಬೆಳಸಲಿದೆ. ಶಾಂತಿನಗರದಿಂದ ನೀಲಕ್ಕಲ್ ಹಾಗೂ ನೀಲಕ್ಕಲ್ನಿಂದ ಶಾಂತಿನಗರಕ್ಕೆ ಪ್ರಯಾಣ ಬೆಳೆಸಲಿದೆ. ಮಧ್ಯಾಹ್ನ 1.50ಕ್ಕೆ ಶಾಂತಿನಗರದಿಂದ ಹೊರಟು ಬೆಳಗ್ಗೆ 6.40ಕ್ಕೆ ನೀಲಕ್ಕಲ್ ತಲುಪಲಿದೆ.