ಚಿರತೆ ದಾಳಿ: ಮೃತರ ಕುಟುಂಬಗಳಿಗೆ ತಲಾ 15 ಲಕ್ಷ  ಪರಿಹಾರ
ಚಿರತೆ ಸೆರೆಹಿಡಿಯಲು ವಿಶೇಷ 10 ತಂಡ – ಸಿಎಂ ಬೊಮ್ಮಾಯಿ

ಚಿರತೆ ದಾಳಿ: ಮೃತರ ಕುಟುಂಬಗಳಿಗೆ ತಲಾ 15 ಲಕ್ಷ  ಪರಿಹಾರಚಿರತೆ ಸೆರೆಹಿಡಿಯಲು ವಿಶೇಷ 10 ತಂಡ – ಸಿಎಂ ಬೊಮ್ಮಾಯಿ

ಬೆಂಗಳೂರು: ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಭೀತಿ ಹುಟ್ಟಿಸಿದ ಚಿರತೆಯನ್ನು ಸೆರೆಹಿಡಿದು ಕಾಡಿಗೆ ಬಿಡಲು ಸೂಚನೆ ನೀಡಲಾಗಿದೆ. ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದರು.

ಇದನ್ನೂ ಓದಿ: ಜೆಡಿಎಸ್ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದಲಿತರಿಗೆ ಸಿಎಂ ಪಟ್ಟ- ಕುಮಾರಸ್ವಾಮಿ ಘೋಷಣೆ

ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದೆ. ಇಲ್ಲಿನ ಸುತ್ತಮುತ್ತಲಿನ ಜನರು ಚಿರತೆ ದಾಳಿ ಭೀತಿಯಲ್ಲಿದ್ದಾರೆ. ತುರಹಳ್ಳಿ ಅರಣ್ಯ ಪ್ರದೇಶದಿಂದ ಚಿರತೆಗಳು ಬಂದಿರುವ ಶಂಕೆ ವ್ಯಕ್ತವಾಗಿದೆ. ಮುಖ್ಯರಸ್ತೆಗೆ ನುಗ್ಗಿ ಜಿಂಕೆ ಕೊಂದು ಚಿರತೆ ತಿಂದುಹೋಗಿರುವುದರಿಂದ ಆ ಭಾಗದಲ್ಲಿ ಜನರಲ್ಲಿ ಆತಂಕ ಶುರುವಾಗಿದೆ. 4 ಚಿರತೆಗಳು ಬಂದಿವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.

ಮೈಸೂರು ಜಿಲ್ಲೆಯ ಟಿ ನರಸಿಪುರ ತಾಲೂಕಿನಲ್ಲಿ ಒಂದು ತಿಂಗಳಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ತಾಲೂಕಿನಲ್ಲಿ ಭೀತಿ ಹುಟ್ಟಿಸಿದ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆಯಿಂದ 10 ವಿಶೇಷ ತಂಡಗಳನ್ನು ರಚನೆ ಮಾಡಲಿದೆ. ಮೈಸೂರು ವೃತ್ತ ಸಿಸಿಎಫ್​ ಮಾಲತಿ ಪ್ರಿಯಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಒಂದು ತಂಡದಲ್ಲಿ ಶೂಟರ್​ ಸೇರಿದಂತೆ 7 ಸಿಬ್ಬಂದಿ ಇರಲಿದ್ದಾರೆ. ಚಿರತೆ ಕಂಡಲ್ಲಿ ಶೂಟ್​ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಮೈಸೂರು ವೃತ್ತದಲ್ಲಿರುವ ಅರಣ್ಯ ಸಿಬ್ಬಂದಿಗಳ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಆಗಮಿಸಿ ಹೆಜ್ಜೆ ಗುರುತಿನ ಆಧಾರದ ಮೂಲಕ ಚಿರತೆ ವಯಸ್ಸು ಸೇರಿದಂತೆ ಇತರೆ ಮಾಹಿತಿಗಳನ್ನ ಕಲೆ ಹಾಕಲಾಗುತ್ತಿದೆ.

suddiyaana