ಮದುಮಗಳಿಗೆಂದೇ ವಿನ್ಯಾಸಗೊಳಿಸಿದ ವಿಶೇಷ ಗೌನ್‌ – ವಿಶ್ವದಾಖಲೆ ಬರೆದಿದ್ದು ಯಾಕೆ ಗೊತ್ತಾ?

ಮದುಮಗಳಿಗೆಂದೇ ವಿನ್ಯಾಸಗೊಳಿಸಿದ ವಿಶೇಷ ಗೌನ್‌ – ವಿಶ್ವದಾಖಲೆ ಬರೆದಿದ್ದು ಯಾಕೆ ಗೊತ್ತಾ?

ಮಹಿಳೆಯರು ಉಡುಪು ಖರೀದಿಸುವಾಗ ವಿಶೇಷ ಕಾಳಜಿ ವಹಿಸುತ್ತಾರೆ. ವಸ್ತ್ರ ವಿನ್ಯಾಸ ಹೇಗಿದೆ, ಬೆಲೆ ಎಷ್ಟು, ಉಡುಪು ಉತ್ತಮ ಗುಣಮಟ್ಟದ್ದೇ ಎಂದು ಪರಿಶೀಲಿಸುತ್ತಾರೆ. ಇನ್ನು ಮದುವೆಯಂದು ತೊಡುವ ಉಡುಪುಗಳು ಹೀಗೇ ಇರಬೇಕು, ಹೀಗೇ ಕಾಣಬೇಕೆಂದು ಅನೇಕರು ಕನಸು ಕಾಣುತ್ತಾರೆ. ಇದೀಗ ಇಲ್ಲೊಂದು ಗೌನ್‌ ಮದುವೆ ಹೆಣ್ಣಿಗೆಂದು ಸಿದ್ದಪಡಿಸಲಾಗಿದೆ. ಇದು ವಿಶ್ವದಾಖಲೆ ಬರೆದಿದ್ದು, ಇದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಬೊಮ್ಮನ್ ಮತ್ತು ಬೆಳ್ಳಿಗೆ ಮರೆಯಲಾರದ ಉಡುಗೊರೆ – ಧೋನಿಯಿಂದ ಜೆರ್ಸಿ ಗಿಫ್ಟ್

ಇಲ್ಲೊಂದು ಗೌನ್‌ ಅನ್ನು ಮದುವೆ ಹೆಣ್ಣಿಗೆಂದು ಸಿದ್ಧಪಡಿಸಲಾಗಿದೆ. ಇದರ ವಿಶೇಷತೆ ಏನೆಂದರೆ, ಈ ವಸ್ತ್ರವನ್ನು ನೂರು, ಸಾವಿರ ಅಲ್ಲ, ಬರೋಬ್ಬರಿ 50,890 ಬಳಸಿ, ಬಿಳಿ ಬಣ್ಣದ ಮದುವೆ ಗೌನ್‌ ಅನ್ನು ಬಳಸಿ ಸಿದ್ದಗೊಳಿಸಲಾಗಿದೆ. ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇಟಾಲಿಯನ್​​​ ಬ್ರೈಡಲ್ ಫ್ಯಾಶನ್ ಬ್ರ್ಯಾಂಡ್ ಈ ಉಡುಪನ್ನು ವಿನ್ಯಾಸಗೊಳಿಸಿದ್ದು, ಈ ಉಡುಪನ್ನು ಮೈಕೆಲಾ ಫೆರೆರೊ ಫ್ಯಾಶನ್ ಶೋನಲ್ಲಿ ಪ್ರದರ್ಶಿಸಲಾಗಿದೆ. ಈ ಬಟ್ಟೆಯನ್ನು ವಿಶ್ವದಾಖಲೆಯನ್ನು ಪಡೆದುಕೊಂಡಿದೆ. ಈ ಗೌನ್‌ ನ ವಿಶೇಷತೆಯ ಬಗ್ಗೆ ಗಿನ್ನೆಸ್​ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್​​ ಪೇಜ್​​ನಲ್ಲಿ ಶೇರ್​ ಮಾಡಲಾಗಿದೆ.

ಈ ಉಡುಪನ್ನು ತಯಾರಿಸಲು ಸುಮಾರು ನಾಲ್ಕು ತಿಂಗಳು ತೆಗೆದುಕೊಳ್ಳಲಾಗಿದೆ. ಮಾಡೆಲ್​​ ಮಾರ್ಚೆ ಗೆಲಾನಿ ಕ್ಯಾವ್​​ ಈ ವೆಡ್ಡಿಂಗ್​​ ಗೌನ್​​ ಧರಿಸಿ ರಾಂಪ್​​ ವಾಕ್​​ ಮಾಡಿದ್ದಾರೆ. ಗಿನ್ನೆಸ್​​​ ದಾಖಲೆಯ ವರದಿಯ ಪ್ರಕಾರ 2011ರಲ್ಲಿ 45,024 ಹರಳುಗಳ ಉಡುಗೆಯ ದಾಖಲೆಯನ್ನು ಮುರಿದು , ಇದೀಗ ಈ ಉಡುಪು 50,890 ಹರಳುಗಳ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

suddiyaana