ಸ್ಪಂದನಾ ಸೋಮಣ್ಣ ಸೈಲೆಂಟ್ – ಕಾಲು ನೋವಿನಿಂದಾಗಿ ಹೊರಗೆ ಹೋಗುತ್ತಾರಾ?

ಸ್ಪಂದನಾ ಸೋಮಣ್ಣ ಸೈಲೆಂಟ್ – ಕಾಲು ನೋವಿನಿಂದಾಗಿ ಹೊರಗೆ ಹೋಗುತ್ತಾರಾ?

ಬಿಗ್‌ಬಾಸ್‌ನಲ್ಲಿ ಈಗ ಸ್ಪರ್ಧಿಗಳು ಪೈಪೋಟಿಗಿಳಿದಂತೆ ಆಟವಾಡುತ್ತಿದ್ದಾರೆ. ಒಬ್ಬರಿಗಿಂತ ಒಬ್ಬರು ನಾವೇನು ಕಡಿಮೆಯಿಲ್ಲ ಎಂಬಂತೆ ಜಿದ್ದಿಗೆ ಬಿದ್ದು ಟಾಸ್ಕ್ ನಲ್ಲಿ ಪಾಲ್ಗೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ನಲ್ಲಿ ಕಾಲಿಗೆ ಏಟಾಗಿ ಸ್ಪಂದನಾ ಸೋಮಣ್ಣ ಸೈಲೆಂಟ್ ಆಗಿದ್ದಾರೆ. ಜೊತೆಗೆ ಈ ವಾರ ಸ್ಪಂದನಾ ಮನೆಯಿಂದ ಹೊರಗೆ ಹೋಗಬಹುದು ಎಂಬ ಲೆಕ್ಕಾಚಾರ ಸಾಗುತ್ತಿದೆ.

ಇದನ್ನೂ ಓದಿ:ಗೆಲ್ಲೋಕೆ ಗಿಲ್ಲಿ ಮೋಸದಾಟ? ರಾಶಿಕಾ ಕಾಲೆಳೆದು ಬೀಳಿಸಿದ ಗಿಲ್ಲಿ!

ಬಿಗ್ ಬಾಸ್ ಟಾಸ್ಕ್‌ನಲ್ಲಿ ಕಾಲು ಮುರಿದುಕೊಂಡು ಸ್ಪಂದನಾ ಸೋಮಣ್ಣ ಮೌನವಾಗಿದ್ದಾರೆ. ಒಂದು ಕಡೆ ಟಾಸ್ಕ್ ಆಡಲು ಆಗುತ್ತಿಲ್ಲ. ಮತ್ತೊಂದು ಕಡೆ ಕಾಲು ಏಟು ಜಾಸ್ತಿಯಾಗಿದೆ. ನಡೆಯಲೂ ಆಗದಷ್ಟು ನೋವು ಅನುಭವಿಸುತ್ತಿದ್ದಾರೆ ಸ್ಪಂದನಾ. ಹೀಗಾಗಿ ಈ ವಾರ ಸ್ಪಂದನಾ ಮನೆಯಲ್ಲಿ ಉಳಿಯುವುದು ಡೌಟ್ ಎಂದು ಹೇಳಲಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಬಾಲ್ ಸಂಗ್ರಹಿಸುವ ಆಟದಲ್ಲಿ ಸಹ ಸ್ಪರ್ಧಿಗಳು ಮೇಲೆ ಬಿದ್ದ ಪರಿಣಾಮ ಸ್ಪಂದನಾ ಕಾಲಿಗೆ ಪೆಟ್ಟಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಸ್ಪಂದನಾ ಮೌನವಾಗಿದ್ದಾರೆ. ಈಗ ಸ್ಪಂದನಾ ಜೋಡಿಯಾಗಿದ್ದ ಅಭಿಷೇಕ್‌ಗೆ ಬಿಗ್ ಬಾಸ್ ಪರ್ಯಾಯ ಜೋಡಿ ನೀಡಿದ್ದಾರೆ. ಅಭಿ ಜೊತೆ ಚೈತ್ರಾ ಆಟವಾಡುತ್ತಿದ್ದಾರೆ. ಹೀಗಾಗಿ ಸ್ಪಂದನಾ ಕಾಲು ನೋವಿನ ಜೊತೆ ಸುಮ್ಮನೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

Sulekha