ಸ್ಪಂದನಾ ವಿಧಿವಶ – ಮಲ್ಲೇಶ್ವರಂನ ಬಿ.ಕೆ.ಶಿವರಾಂ ಮನೆ ಬಳಿ ದೇವಸ್ಥಾನಗಳು ಬಂದ್!

ಸ್ಪಂದನಾ ವಿಧಿವಶ – ಮಲ್ಲೇಶ್ವರಂನ ಬಿ.ಕೆ.ಶಿವರಾಂ ಮನೆ ಬಳಿ ದೇವಸ್ಥಾನಗಳು ಬಂದ್!

ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸ್ಪಂದನಾ ಅವರ ನಿಧನ ಸಿನಿಮಾ ನಟ, ನಟಿಯರು, ರಾಜಕಾರಣಿಗಳು ಸಂತಾಪ ಸೂಚಿಸುತ್ತಿದ್ದಾರೆ. ಸ್ಪಂದನಾ ಅವರ ನಿಧನ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಬಿ.ಕೆ.ಶಿವರಾಂ ಮನೆ ಸುತ್ತಮುತ್ತಲಿರುವ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಂಗಳವಾರ ರಾತ್ರಿ ಬೆಂಗಳೂರಿಗೆ ಸ್ಪಂದನಾ ಪಾರ್ಥೀವ ಶರೀರ – ಬುಧವಾರ ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯಕ್ರಿಯೆ

ಸ್ಪಂದನಾ ಅವರ ತಂದೆ ಬಿ.ಕೆ.ಶಿವರಾಂ ಕಾಡುಮಲ್ಲೇಶ್ವರ ದೇಗುಲದ ಅಧ್ಯಕ್ಷರಾಗಿದ್ದಾರೆ. ಸ್ವಂದನ ಹಿನ್ನೆಲೆ ಕಾಡುಮಲ್ಲೇಶ್ವರ, ಲಕ್ಷ್ಮೀನರಸಿಂಹ, ಗಂಗಮ್ಮದೇವಿ ದೇಗುಲ, ದಕ್ಷಿಣಾಭಿಮುಖ ನಂದಿತೀರ್ಥ ದೇಗುಲಗಳು ಬಂದ್ ಆಗಿವೆ. ಬಿ.ಕೆ.ಶಿವರಾಂ ಬೆಂಬಲಿಗರು ದೇವಸ್ಥಾನಗಳ ಮುಖ್ಯ ದ್ವಾರಗಳನ್ನು ಬಂದ್ ಮಾಡಿಸಿದ್ದಾರೆ. ಆದರೆ ಮುಖ್ಯದ್ವಾರ ಮುಚ್ಚಿ ಹಿಂಭಾಗದ ಬಾಗಿಲಿನಿಂದ ದರ್ಶನ ಅವಕಾಶ ಕಲ್ಪಿಸಲಾಗಿದೆ. ದೇಗುಲದ ಬಾಗಿಲು ಮುಚ್ಚಿರುವುದಕ್ಕೆ ಭಕ್ತರಲ್ಲಿ ಗೊಂದಲವುಂಟಾಗಿದ್ದು, “ಯಾಕೆ ಬಾಗಿಲು ಮುಚ್ಚಿದೆ”? ಅಂತ ಭಕ್ತರು ಜನರನ್ನು ವಿಚಾರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಪಂದನಾ ಅವರ ಪೊಸ್ಟ್ ಮಾರ್ಟಂ ಮುಗಿದಿದೆ. ಥೈಲಾಂಟ್​ನಲ್ಲಿ ಒಂದು ಘಂಟೆಗೆ ಪ್ರೊಸಿಜರ್ ಮುಗಿಯಲಿದೆ. ಮಂಗಳವಾರ ಸಂಜೆ ಥೈ ಏರ್​ಲೈನ್ಸ್​ನಲ್ಲಿ ಮೃತದೇಹ ತರಲಾಗ್ತಿದೆ. ರಾತ್ರಿ 11 ರ ವೇಳೆಗೆ ಮೃತದೇಹ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ. ರಾತ್ರಿಯಿಂದ ಬುಧವಾರ ಮಧ್ಯಾಹ್ನದವರೆಗೂ ಮಲ್ಲೇಶ್ವರಂ ರಲ್ಲಿ ಅಂತಿಮನಮನಕ್ಕೆ ಅವಕಾಶ ನೀಡಲಾಗಿದೆ. ನಾಳೆ ಮಧ್ಯಾಹ್ನ ಶ್ರೀರಾಂಪುರ ಹರಿಶ್ಚಂದ್ರ ಘಾಟ್​ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಬಿ.ಕೆ ಹರಿಪ್ರಸಾದ್‌ ಮಾಹಿತಿ ನೀಡಿದ್ದಾರೆ.

suddiyaana