ಟಾಸ್ಕ್‌ ಆಡಿ ಅಂದ್ರೆ ಫೈಟ್‌ ಮಾಡಿಕೊಂಡ ಸ್ಪಂದನಾ, ರಾಶಿಕಾ! – ಬಿಗ್‌ಬಾಸ್‌ ರೂಲ್ಸ್‌ನ ಅಪಾರ್ಥ ಮಾಡಿಕೊಂಡ್ರಾ?

ಟಾಸ್ಕ್‌ ಆಡಿ ಅಂದ್ರೆ ಫೈಟ್‌ ಮಾಡಿಕೊಂಡ ಸ್ಪಂದನಾ, ರಾಶಿಕಾ! – ಬಿಗ್‌ಬಾಸ್‌ ರೂಲ್ಸ್‌ನ ಅಪಾರ್ಥ ಮಾಡಿಕೊಂಡ್ರಾ?

ದೊಡ್ಮನೆಯಲ್ಲಿ ಬಿಗ್‌ಬಾಸ್‌ ಹೇಳೋದೊಂದು.. ಸ್ವರ್ಧಿಗಳು ಮಾಡೋದು ಇನ್ನೊಂದು ಅನ್ನುವಂತಾಗಿದೆ. ಇದೀಗ ದೊಡ್ಮನೆಯಲ್ಲಿ ಟಾಸ್ಕ್‌ ಆಡಿ ಅಂದ್ರೆ ಇಲ್ಲಿಬ್ಬರು ಸ್ಪರ್ಧಿಗಳು ಫೈಟ್‌ ಮಾಡಿಕೊಂಡಿದ್ದಾರೆ. ಸ್ಪಂದನಾ ಹಾಗೂ ರಾಶಿಕಾ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಕುಸ್ತಿ ಮಾಡುತ್ತಿದ್ದಾರೆ.

ಇದನ್ನೂ ಓದಿ:ಹೊಸ ವರ್ಷ ಆಚರಣೆಯಲ್ಲಿ ಮದ್ಯ ಸೇವನೆ ಮಾಡಿದವರಿಗೆ ಡ್ರಾಪ್‌ ವ್ಯವಸ್ಥೆ ವಿವಾದ! – ಯೂಟರ್ನ್‌ ಹೊಡೆದ ಗೃಹಸಚಿವ!  

ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ಸ್ಪಂದನಾ ಸೋಮಣ್ಣ ಮತ್ತು ರಾಶಿಕಾ ಶೆಟ್ಟಿ ನಡುವೆ ತೀವ್ರ ಸ್ಪರ್ಧೆ ನಡೆದಿದೆ. ಬಿಲ್ಲೆಗಳನ್ನು ಜೋಡಿಸುವ ಟಾಸ್ಕ್‌ನ ಬಿಗ್‌ಬಾಸ್‌ ನೀಡಿದ್ರೆ, ರಾಶಿಕಾ ಹಾಗೂ ಸ್ಪಂದನಾ ಕುಸ್ತಿ ಮಾಡಲು ಶುರುಮಾಡಿದ್ದಾರೆ. ಒಬ್ಬರನ್ನೊಬ್ಬರು ಲಾಕ್‌ ಮಾಡಿಕೊಂಡು ಹೊರಳಾಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ ಶುರುವಾಗಿದೆ. ಬಿಗ್‌ಬಾಸ್‌ ಸ್ಪಂದನಾ ಹಾಗೂ ರಾಶಿಕಾಗೆ ಬಿಲ್ಲೆಗಳನ್ನ ಜೋಡಿಸುವ ಟಾಸ್ಕ್‌ ನೀಡಿದ್ದಾರೆ. ಬಿಲ್ಲೆಗಳನ್ನು ಅಧಿಕವಾಗಿ ಬೀಳಿಸುವ ಸ್ಪರ್ಧಿ ಆಟದಲ್ಲಿ ಗೆಲ್ಲುತ್ತಾರೆ. ಬಿಲ್ಲೆಗಳನ್ನು ಸಾಲಿನಲ್ಲಿ ಜೋಡಿಸಿದ ನಂತರ ಅವುಗಳನ್ನು ಕಾಪಾಡಿಕೊಳ್ಳಬೇಕು. ಎದುರಾಳಿ ಸ್ಪರ್ಧಿಯ ಬಿಲ್ಲೆ ಬೀಳಿಸಲು ಪ್ರಯತ್ನಿಸಬೇಕು ಎಂದು ಪ್ರೋಮೋದಲ್ಲಿ ತೋರಿಸಲಾಗಿದ್ದು, ಆಟದ ಬಗ್ಗೆ ಸ್ಪಷ್ಟತೆ ಇಲ್ಲ. ರಾಶಿಕಾ ಅಡುಗೆಮನೆ ಮತ್ತು ಸ್ಪಂದನಾ ಬಾತ್‌ರೂಮ್‌ನಲ್ಲಿ ತಮ್ಮ ಬಿಲ್ಲೆಗಳನ್ನು ಜೋಡಿಸಿದ್ದಾರೆ. ನಂತರ ಬಿಲ್ಲೆಗಳನ್ನು ಕಾಪಾಡಿಕೊಳ್ಳುವ ಸಂದರ್ಭದಲ್ಲಿ ಇಬ್ಬರ ನಡುವೆ ಒಂದು ರೀತಿ ಕುಸ್ತಿಯೇ ನಡೆದಿದೆ. ಇಬ್ಬರು ಸ್ಪರ್ಧಿಗಳು ಒಬ್ಬರೊಬ್ಬರನ್ನು ಲಾಕ್ ಮಾಡಿಕೊಂಡಿದ್ದಾರೆ. ಆಟ ಅಂತ ಬಂದಾಗ ರಾಶಿಕಾ ದೈಹಿಕವಾಗಿ ತುಂಬಾ ಫಿಟ್ ಆಗಿದ್ದು, ಸ್ಪಂದನಾ ಅವರನ್ನು ಲಾಕ್ ಮಾಡಿದ್ದಾರೆ.

ಇವರಿಬ್ಬರ ಆಟ ನೋಡಿದ ಧ್ರುವಂತ್, ಬಿಗ್‌ಬಾಸ್ ನೀವು ಹೇಳಿದ ಟಾಸ್ಕ್ ಯಾವುದು? ಬಿಲ್ಲೆಗಳದ್ದಾ ಅಥವಾ ಕುಸ್ತಿ ಆಡೋದಾ ಎಂದು ಕೇಳುತ್ತಾರೆ. ಸ್ಪಂದನಾ ಇಷ್ಟು ದಿನ ನಿಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಶಕ್ತಿಯನ್ನು ತೋರಿಸಬೇಕು ಎಂದು ಧ್ರುವಂತ್ ಹುರಿದುಂಬಿಸಿದ್ದಾರೆ. ಇತ್ತ ಸ್ಪಂದನಾ ನೀವು ಇಷ್ಟೊಂದು ವೀಕ್‌ ಆಗಿದ್ದೀರಾ ಎಂದು ಅಶ್ವಿನಿ ಗೌಡ ಹೇಳುತ್ತಾರೆ.

ಈ ಪ್ರೋಮೋ ನೋಡಿದ ನೆಟ್ಟಿಗರು, ಸ್ಪಂದನ ಅವರೇ ನೀವು ಆಟ ಆಡೋದೇ ಬೇಡ ಯಾಕಂದ್ರೆ ನೀವು ಕೋಟಾದಡಿ ಸೇವ್ ಆಗ್ತೀರಿ. ರಾಶಿಕ ದೊಡ್ಡ WWF ಪ್ಲೇಯರ್ ಡಬಲ್ ಗೇಮ್ ಆಟ. ಧ್ರುವಂತ್ ಇಬ್ಬರ ಆಟಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದಾನೆ. ಆತನನ್ನು ದೂರ ಕಳುಹಿಸಿ ಎಂದು ಕಮೆಂಟ್ ಮಾಡಿದ್ದಾರೆ.

Shwetha M