2-1 ಗೋಲುಗಳ ಅಂತರದಿಂದ ರೋಚಕ ಜಯ – ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಗೆ ಎಂಟ್ರಿಕೊಟ್ಟ ಸ್ಪೇನ್

ಫಿಫಾ ವಿಶ್ವಕಪ್ ರೋಚಕ ಘಟ್ಟ ತಲುಪಿದ್ದು, ಕ್ವಾಟರ್ ಫೈನಲ್ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿದೆ. ಹೈ-ವೋಲ್ವೇಜ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸ್ಪೇನ್ ತಂಡವು ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸ್ಪೇನ್ ಪ್ರಸಕ್ತ ವಿಶ್ವಕಪ್ನ ಸೆಮಿಫೈನಲ್ಗೆ ಹೆಜ್ಜೆ ಇಟ್ಟಿದ್ದು, ಇನ್ನು ಮಂಗಳವಾರ ಡಲ್ಲಾಸ್ನಲ್ಲಿ ನಡೆಯಲಿರುವ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಫೇವರಿಟ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: ಧಿಮಾಕು ಬಿಡ್ತಾರಾ ಗೌತಮ್ ಗಂಭೀರ್? – FAVORISM ಬಿಟ್ರಷ್ಟೇ ಭವಿಷ್ಯ!
2010ರಲ್ಲಿ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದ ಸ್ಪೇನ್, ಆ ಬಳಿಕ ಇದೇ ಮೊದಲ ಬಾರಿಗೆ ಸೆಮಿಫೈನಲ್ ಹಂತ ತಲುಪಿರುವುದು ವಿಶೇಷ. ಈ ಸೋಲಿನೊಂದಿಗೆ ಬೆಳ್ಳಿಯಂ ತಂಡದ ಸತತ 18 ಪಂದ್ಯಗಳ ಅಜೇಯ ಆಟಕ್ಕೆ ಬ್ರೇಕ್ ಬಿದ್ದಂತಾಗಿದೆ.
ಪಂದ್ಯದ ದ್ವಿತೀಯಾರ್ಧದ ಅಂತ್ಯದವರೆಗೂ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಪಂದ್ಯವು ಹೆಚ್ಚುವರಿ ಸಮಯದತ್ತ ಸಾಗಬಹುದು ಎನ್ನುವಷ್ಟರಲ್ಲಿ, ಸ್ಪೇನ್ ಕೋಚ್ ಲೂಯಿಸ್ ಡಿ ಲಾ ಫುಯೆಂಟೆ ಅವರು ಕೈಗೊಂಡ ತಂತ್ರದ ಬದಲಾವಣೆ ಪಂದ್ಯದ ಚಿತ್ರಣವನ್ನೇ ಬದಲಿಸಿತು. 86ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಮೈಕೆಲ್ ಮೆರಿನೊ, ಕೇವಲ ಎರಡನೇ ಟಚ್ ನಲ್ಲೇ (88ನೇ ನಿಮಿಷ) ಗೋಲು ಬಾರಿಸಿ ಸ್ಪೇನ್ಗೆ ಐತಿಹಾಸಿಕ ಜಯ ತಂದುಕೊಟ್ಟರು. ಸ್ಪೇನ್ ಪೌ ಕ್ಯೂಬಾರ್ಸಿ ಹೊಡೆದ ಲಾಂಗ್ ಶಾಟ್ ಅನ್ನು ತಡೆಯುವಲ್ಲಿ ಬೆಲ್ಸಿಯಂನ ಬ್ಯಾಕಪ್ ಕೀಪರ್ ಸೆನ್ನೆ ಲ್ಯಾಮೆನ್ಸ್ ಎಡವಿದರು. ರಿಬೌಂಡ್ ಆಗಿ ಬಂದ ಚೆಂಡನ್ನು ಮೆರಿನೊ ಅತ್ಯಂತ ಚತುರತೆಯಿಂದ ಗೋಲು ಪೆಟ್ಟಿಗೆಗೆ ತಳ್ಳಿದರು.

ನೋಡಿರಿ

