ಮಗುವನ್ನ ಏರ್‌ಪೋರ್ಟ್‌ನಲ್ಲೇ ಬಿಟ್ಟು ಫಾರಿನ್ ಟ್ರಿಪ್ ಹೋದ ದಂಪತಿ!

ತಂದೆ ತಾಯಿಗೆ ಮಕ್ಕಳಂದ್ರೆ ಪ್ರಾಣ.. ಅವ್ರು ಯಾವಾಗ್ಲೂ ಚೆನ್ನಾಗಿ ಇರ್ಬೇಕು ಅಂತ ಬಯಸ್ತಾರೆ. ಇನ್ನೂ ಎಲ್ಲಾದ್ರೂ ಹೋದ್ರೆ ಮಕ್ಕಳನ್ನ ಕೂಡ ಒಟ್ಟಿಗೆ ಕರ್ಕೊಂಡು ಹೋಗ್ತಾರೆ. ಹೊಸ ಜಾಗಗಳಿಗೆ ಹೋದ್ರಂತೂ ಮಕ್ಕಳು ಎಲ್ಲಿ ತಪ್ಪಿಸಿಕೊಂಡು ಹೋಗ್ತಾರೆ ಅಂತ ಕೈ ಹಿಡಿದುಕೊಂಡೇ ಇರ್ತಾರೆ. ಆದ್ರೆ ಇಲ್ಲೊಂದು ಕಡೆ ಹೆತ್ತ ತಂದೆ ತಾಯಿಯೇ ಮಗುವನ್ನ ಏರ್‌ಪೋರ್ಟ್‌ನಲ್ಲೇ ಬಿಟ್ಟು ಟ್ರಿಪ್‌ಗೆ ತೆರಳಿದ್ದಾರೆ.
ಇದನ್ನೂ ಓದಿ: ENG ಚೆಂಡಾಡಿದ ಸಿರಾಜ್ & ಪ್ರಸಿದ್ಧ್ – T20I ಬ್ಯಾಟಿಂಗ್ ನಂಬಿ ಕೆಟ್ಟ ಆಂಗ್ಲರು!
ಈ ಘಟನೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದಿದ್ದು, ಪೋಷಕರಿಬ್ಬರು ಹೆತ್ತ ಮಗನನ್ನೇ ಏರ್‌ಪೋರ್ಟ್‌ನಲ್ಲಿ ಬಿಟ್ಟು ಫಾರಿನ್ ಟ್ರಿಪ್‌ಗೆ ಹೋಗಿದ್ದಾರೆ. ಮಗುವಿನ ಪಾಸ್‌ಪೋರ್ಟ್ ಅವಧಿ ಮುಗಿದಿದೆ ಹಾಗೂ ಮಗುವಿನ ಬಳಿ ವೀಸಾ ಕೂಡಾ ಇರಲಿಲ್ಲ ಎಂಬ ಕಾರಣಕ್ಕೆ 10 ವರ್ಷದ ಮಗನನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಟ್ರಿಪ್ ಹೋಗಿದ್ದಾರೆ. ತಂದೆ ತಾಯಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಮಾನ ನಿಲ್ದಾಣದಲ್ಲಿ ಎಕ್ಸಿಟ್ ಪ್ರಕ್ರಿಯೆಯ ಸಮಯದಲ್ಲಿ ಮಗುವಿನ ಪಾಸ್‌ಪೋರ್ಟ್ ಅವಧಿ ಮುಗಿದಿದೆಯೆಂದು ವಿಮಾನ ನಿಲ್ದಾಣದ ಸಿಬ್ಬಂದಿಗಳ ಗಮನಕ್ಕೆ ಬರುತ್ತದೆ. ಅವರು ಮಗುವನ್ನು ವಿಮಾನ ಹತ್ತಿಸಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಯಾಣಕ್ಕಾಗಿ ಮಗುವಿಗೆ ವೀಸಾದ ಅವಶ್ಯಕತೆ ಕೂಡಾ ಇತ್ತು. ಆದ್ರೆ ಮಗುವಿನ ಬಳಿ ವೀಸಾ ಕೂಡಾ ಇರಲಿಲ್ಲ. ಈ ಎರಡು ಕಾರಣದಿಂದ ಮಗುವನ್ನು ವಿಮಾನ ಹತ್ತಲು ಸಿಬ್ಬಂದಿಗಳು ನಿರಾಕರಿಸಿದ್ದಾರೆ.
ಈ ಕಠಿಣ ಸಂದರ್ಭದಲ್ಲಿ ಪ್ರವಾಸವನ್ನು ಮುಂದೂಡುವ ಬದಲು ಮಗುವಿನ ಪೋಷಕರು ಮಗುವನ್ನು ಏರ್‌ಪೋರ್ಟ್‌ನಲ್ಲಿಯೇ ಬಿಟ್ಟು ತಾವಿಬ್ಬರು ಪ್ರವಾಸ ಹೋಗಿದ್ದಾರೆ. ಮಗುವನ್ನು ಕರೆದುಕೊಂಡು ಹೋಗುವಂತೆ ಸಂಬಂಧಿಕರ ಬಳಿ ಪೋಷಕರು ಹೇಳಿದ್ದು, ಆದ್ರೆ ಸಂಬಂಧಿಕರು ಬರುವ ಮೊದಲು ಅಧಿಕಾರಿಗಳು ಮಗು ಒಂಟಿಯಾಗಿ ಏರ್ ಪೋರ್ಟ್‌ನಲ್ಲಿ ಇರುವುದನ್ನು ಗಮನಿಸಿದ್ದಾರೆ. ನಂತರ ಪೊಲೀಸರು ಬಂದು ಮಗುವನ್ನು ಸುರಕ್ಷಿತವಾಗಿ ಠಾಣೆಗೆ ಕರೆದುಕೊಂಡು ಹೋಗಿದ್ದು, ಈ ಎಲ್ಲಾ ಘಟನೆಗಳು ನಡೆದು ಪೋಷಕರನ್ನು ಸಂಪರ್ಕಿಸಿದಾಗ, ಫ್ಲೈಟ್ ಟಿಕೆಟ್‌ಗಳನ್ನು ಕಳೆದುಕೊಳ್ಳಲು ಬಯಸದ ಕಾರಣ ನಾವು ನಮ್ಮ ಮಗುವನ್ನು ಒಂಟಿಯಾಗಿ ವಿಮಾನ ನಿಲ್ದಾಣದಲ್ಲಿ ಬಿಟ್ಟು ಟ್ರಿಪ್ ಹೋಗಬೇಕಾಯಿತು, ಜೊತೆಗೆ ಮಗುವನ್ನು ಮನೆಗೆ ಕರೆದುಕೊಂಡು ಹೋಗುವಂತೆ ನಮ್ಮ ಸಂಬಂಧಿಕರ ಬಳಿ ಹೇಳಿಕೊಂಡಿದ್ದೇವೆ ಎಂದು ಅಧಿಕಾರಿಗಳ ಬಳಿ ಪೋಷಕರು ಹೇಳಿಕೊಂಡಿದ್ದಾರೆ.

ನೋಡಿರಿ

