ಹಿಜಬ್ ಧರಿಸದೇ ಚೆಸ್ ಆಡಿದ ಇರಾನ್‌ ಆಟಗಾರ್ತಿಗೆ ಪೌರತ್ವ ನೀಡಿದ ಸ್ಪೇನ್‌ ದೇಶ!

ಹಿಜಬ್ ಧರಿಸದೇ ಚೆಸ್ ಆಡಿದ ಇರಾನ್‌ ಆಟಗಾರ್ತಿಗೆ ಪೌರತ್ವ ನೀಡಿದ ಸ್ಪೇನ್‌ ದೇಶ!

ಹಿಜಬ್ ಧರಿಸದೇ ಚೆಸ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಇರಾನಿನ ಆಟಗಾರ್ತಿಗೆ ಸ್ಪೇನ್ ತನ್ನ ದೇಶದ ಪೌರತ್ವ ನೀಡಿದೆ. ಪ್ರಸ್ತಕ ವರ್ಷದ ಜನವರಿಯಲ್ಲಿ ಸ್ಪೇನ್​ಗೆ ತೆರಳಿದ್ದ ಸರಸಾದತ್ ಖಡೆಮಲ್ಶರೀಹ್ ಹಿಜಬ್‌ ಧರಿಸದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಬೆಳವಣಿಗೆಯ ನಂತರ ಇರಾನ್‌ ಆಕೆಯ ಬಂಧನಕ್ಕೆ ವಾರಂಟ್‌ ಜಾರಿಗೊಳಿಸಿತ್ತು. ಆ ನಂತರ ಸ್ಪೇನ್‌ ತನ್ನ ದೇಶದ ಪೌರತ್ವ ನೀಡಿರುವುದಾಗಿ ಘೋಷಣೆ ಮಾಡಿದೆ.

ಇದನ್ನೂ ಓದಿ: ಸಾಯಲು ಎರಡು ದಿನ ಡೆಡ್‌ಲೈನ್ ಕೊಟ್ಟ ದೆವ್ವ – ಭೂತ ಹೇಳಿದ ರೀತಿಯಲ್ಲೇ ಜೀವ ಕಳೆದುಕೊಂಡ ಮಹಿಳೆ..!

ಸರಸಾದತ್ ಖಡೆಮಲ್ಶರೀಹ್ 2022ರ ಡಿಸೆಂಬರ್‌ ಅಂತ್ಯದಲ್ಲಿ ಕಜಕಿಸ್ತಾನ್‌ನಲ್ಲಿ ನಡೆದ ಎಫ್‌ಐಡಿಇ ವರ್ಲ್ಡ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ ಶಿಪ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇರಾನ್‌ನ ಇಸ್ಲಾಮಿಕ್‌ ಕಾನೂನಿನ ಅನ್ವಯ ಕಡ್ಡಾಯವಾಗಿ ಹಿಜಬ್‌ ಧರಿಸಬೇಕಿತ್ತು. ಆದ್ರೆ ಹಿಜಬ್‌ ಧರಿಸದೇ ಖಡೆಮಲ್ಶರೀಹ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಸರಸಾದತ್ ಖಡೆಮಲ್ಶರೀಹ್ ಬಂಧನಕ್ಕೆ ವಾರಂಟ್‌ ಜಾರಿಗೊಳಿಸಲಾಗಿತ್ತು. ಇದನ್ನ ವಿಶೇಷ ಸಂದರ್ಭವಾಗಿ ಪರಿಗಣನೆಗೆ ತೆಗೆದುಕೊಂಡ ಸ್ಪೇನ್‌ ಸರ್ಕಾರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಿದ್ದು, ಚೆಸ್‌ ಆಟಗಾರ್ತಿಗೆ ತನ್ನ ದೇಶದ ಪೌರತ್ವ ನೀಡಿರುವುದಾಗಿ ಹೇಳಿದೆ.

suddiyaana