ಸ್ಪೇನ್ ಓಟಕ್ಕೆ ಬ್ರೇಕ್ ಹಾಕಿದ ಮೊರಾಕ್ಕೋ ಕಿಕ್‌ – ಚೊಚ್ಚಲ ಬಾರಿಗೆ ಕ್ವಾರ್ಟರ್ ಫೈನಲ್‌ ಗೆ ಎಂಟ್ರಿ ಕೊಟ್ಟ ಮೊರಾಕ್ಕೊ

ಸ್ಪೇನ್ ಓಟಕ್ಕೆ ಬ್ರೇಕ್ ಹಾಕಿದ ಮೊರಾಕ್ಕೋ ಕಿಕ್‌ – ಚೊಚ್ಚಲ ಬಾರಿಗೆ ಕ್ವಾರ್ಟರ್ ಫೈನಲ್‌ ಗೆ ಎಂಟ್ರಿ ಕೊಟ್ಟ ಮೊರಾಕ್ಕೊ

ಕತಾರ್ : ಫಿಫಾ ವಿಶ್ವಕಪ್ ನಲ್ಲಿ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿದ್ದ ಸ್ಪೇನ್ ತಂಡದ ಆಟಕ್ಕೆ ಪ್ರಿ ಕ್ವಾರ್ಟರ್ ಫೈನಲ್ ನಲ್ಲೇ ಬ್ರೇಕ್ ಬಿದ್ದಿದೆ. ಮೊದಲ ಪಂದ್ಯದಲ್ಲೇ ಕಾಲ್ಚೆಂಡಿನ ಚಳಕ ತೋರಿಸಿದ್ದ ಸ್ಪೇನ್, 7 ಗೋಲು ಗಳಿಸುವ ಮೂಲಕ ಫೈನಲ್‌ಗೆ ಎಂಟ್ರಿ ನೀಡುವ ಹುಮ್ಮಸ್ಸಲ್ಲಿತ್ತು. ಆದರೆ, ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಮೊರಾಕ್ಕೊ ವಿರುದ್ಧ ಮಂಗಳವಾರ ನಡೆದ ಅಂತಿಮ 16ರ ಸುತ್ತಿನಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ 0-3 ಗೋಲುಗಳ ಹೀನಾಯ ಸೋಲು ಕಂಡಿದೆ.

ಈ ಬಾರಿಯ ವಿಶ್ವಕಪ್ ವಿಶೇಷ ಅಂದರೆ, ಮೊರಾಕ್ಕೊ ಫುಟ್‌ಬಾಲ್ ಟೀಮ್ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಅದು ಕೂಡಾ 22ನೇ ಱಂಕಿಂಗ್‌ನಲ್ಲಿದ್ದ ಮೊರಾಕ್ಕೊ , ವಿಶ್ವದ 7ನೇ ಱಕಿಂಗ್‌ ನಲ್ಲಿದ್ದ ಸ್ಪೇನ್ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ವಿಶೇಷ. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ನಿಗದಿತ 90 ನಿಮಿಷಗಳಲ್ಲಿ ಎರಡೂ ತಂಡಗಳೂ ಗೋಲು ಹೊಡೆಯದ ಕಾರಣ, 30 ನಿಮಿಷಗಳ ಹೆಚ್ಚುವರಿ ಪಂದ್ಯ ನಡೆಸಲಾಗಿತ್ತು. ಎರಡೂ ತಂಡಗಳಿಗೆ ಗೋಲ್ ಹೊಡೆಯುವ ಅವಕಾಶ ಸಿಕ್ಕರೂ ಕೂಡಾ ಒಂದೇ ಒಂದು ಗೋಲು ದಾಖಲಾಗಿರಲಿಲ್ಲ. ನಂತರ ಶೂಟೌಟ್ ಮೊರೆ ಹೋದಾಗ ಮೊರಾಕ್ಕೊ ಗೋಲು ಗಳಿಸವುಲ್ಲಿ ಯಶಸ್ವೀಯಾಯ್ತು. ಸ್ಪೇನ್‌ನ ಮೂರೂ ಯತ್ನಗಳು ವಿಫಲವಾದವು. ಮೊರಾಕ್ಕೊ 3ನೇ ಯತ್ನದಲ್ಲಿ ವೈಫಲ್ಯ ಕಂಡರೂ, 4ನೇ ಯತ್ನದಲ್ಲಿ ಹಕೀಮಿ ಗೋಲು ಬಾರಿಸಿ ತಂಡವನ್ನು ಗೆಲ್ಲಿಸಿದರು. ಇನ್ನೂ ಒಂದು ವಿಶೇಷವೆಂದರೆ, ಮೊರಾಕ್ಕೊ ಪರ 3ನೇ ಪೆನಾಲ್ಟಿ ಕಿಕ್ ಯತ್ನಿಸಿದ ಅಚ್ರಾಫ್ ಹಕೀಮಿ ಹುಟ್ಟಿದ್ದು ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ. ಹಕೀಮಿ, ತನ್ನ  ತಮ್ಮ ವೃತ್ತಿಬದುಕನ್ನು ಸ್ಪೇನ್‌ನ ಪ್ರತಿಷ್ಠಿತ ರಿಯಲ್ ಮ್ಯಾಡ್ರಿಡ್ ತಂಡದೊಂದಿಗೆ ಆರಂಭಿಸಿದ್ದರು ಎನ್ನುವುದು ವಿಶೇಷ. ಆದರೆ ಇದೀಗ ನಿರ್ಣಾಯಕ ಘಟ್ಟದಲ್ಲಿ ಸ್ಪೇನ್‌ ವಿರುದ್ದ ಆಕರ್ಷಕ ಪೆನಾಲ್ಟಿ ಕಿಕ್ ಮೂಲಕ ಮೊರಾಕ್ಕೊ ಪಾಲಿಗೆ ಹೀರೋ ಆಗಿ ಹೊರಹೊಮ್ಮಿದ್ದು ವಿಶೇಷ. ಮುಂದಿನ ಪಂದ್ಯದಲ್ಲಿ ಮೊರಾಕ್ಕೋ ತಂಡ, ಪೋರ್ಚುಗಲ್ ಮತ್ತು ಸ್ವಿಜರ್ಲೆಂಡ್ ನಡುವಿನ ಗೆದ್ದಿರೋ ತಂಡದ ಜೊತೆ ಸೆಣಸಬೇಕಿದೆ.

suddiyaana