ಕೊನೆ ಕ್ಷಣದಲ್ಲಿ ರಾಕೆಟ್ ಉಡಾವಣೆ ಮುಂದೂಡಿಕೆ! – ಸಾಕಷ್ಟು ಕಲಿತೆವು ಎಂದಿದ್ದೇಕೆ ಮಸ್ಕ್?

ಕೊನೆ ಕ್ಷಣದಲ್ಲಿ ರಾಕೆಟ್ ಉಡಾವಣೆ ಮುಂದೂಡಿಕೆ! – ಸಾಕಷ್ಟು ಕಲಿತೆವು ಎಂದಿದ್ದೇಕೆ ಮಸ್ಕ್?

ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯಿಂದ ನಿರ್ಮಿಸಲಾದ ಬೃಹತ್ ಸ್ಟಾರ್ ಶಿಪ್ ರಾಕೆಟ್ ತನ್ನ ಮೊದಲ ಪರೀಕ್ಷಾರ್ಥದ ಉಡಾವಣೆಯ ಕೊನೆ ಕ್ಷಣದಲ್ಲಿ ಸ್ಥಗಿತಗೊಂಡಿದೆ. ಉಡಾವಣೆ ವೇಳೆ ರಾಕೆಟ್ ನಲ್ಲಿ  ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ ಅಂತಾ ವರದಿಯಾಗಿದೆ.

ಸ್ಪೇಸ್ ಎಕ್ಸ್ ಕಂಪನಿ ನಿರ್ಮಿಸಲಾದ ಈ ಬೃಹತ್ ಹಾಗೂ ಶಕ್ತಿಶಾಲಿ ರಾಕೆಟ್ ಅನ್ನು ಸೋಮವಾರ ಪರೀಕ್ಷಾರ್ಥವಾಗಿ ಟೆಕ್ಸಾಸ್‌ನ ಗಲ್ಫ್ ಕೋಸ್ಟ್ ನಿಂದ ಉಡಾವಣೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಉಡಾವಣೆಗೆ ಕೌಂಟ್ ಡೌನ್ ಆರಂಭಗೊಂಡು, 40 ಸೆಕೆಂಡುಗಳು ಬಾಕಿ ಇರುವಾಗ ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಉಡಾವಣೆಯನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಏರುತ್ತಿರುವ ಸಮುದ್ರ ಮಟ್ಟ – ಮುಂಬೈನಿಂದ ನ್ಯೂಯಾರ್ಕ್‌ವರೆಗೂ ಅಪಾಯ!

ಈ ಬಗ್ಗೆ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದು, ಬುಧವಾರದವರೆಗೆ ರಾಕೆಟ್ ಉಡಾವಣೆಗೆ ಮತ್ತೊಂದು ಪ್ರಯತ್ನ ನಡೆಯುವುದಿಲ್ಲ. ‘ಇಂದು ಸಾಕಷ್ಟು ಕಲಿತೆವು. ರಾಕೆಟ್ ಉಡಾವಣೆಯನ್ನು ಮುಂದೂಡಲಾಗಿದೆ ಅಂತಾ ಹೇಳಿದ್ದಾರೆ.

ಸ್ಟಾರ್ ಶಿಪ್ ರಾಕೆಟ್ ಸುಮಾರು 390 ಮಿಟರ್ ಎತ್ತರವಿದ್ದು, 30 ಮೀಟರ್ ಸುತ್ತಳತೆ ಹೊಂದಿದೆ. ಇದು ಅಮೆರಿಕದ ಲಿಬರ್ಟಿ ಆಫ್ ಸ್ಟ್ಯಾಚುಗಿಂತ ಎತ್ತರವಾಗಿದೆ. ಈ ರಾಕೆಟ್ ವ್ಯವಸ್ಥೆಯು ಭೂಮಿಯಿಂದ ಸುಮಾರು 65 ಕಿ.ಮೀ. ಮೇಲೆ ಹೋಗಿ ಬಳಿಕ ಸ್ಟಾರ್‌ಶಿಪ್‌ನಿಂದ ಪ್ರತ್ಯೇಕಗೊಂಡು ಭೂಮಿಗೆ ಹಿಂತಿರುಗಲಿದೆ. ಈ ಮೂಲಕ ಭವಿಷ್ಯದಲ್ಲಿ ಚಂದ್ರ ಹಾಗೂ ಮಂಗಳನಲ್ಲಿ ಮಾನವರನ್ನು ಕಳಿಸಲು ಈ ರಾಕೆಟ್ ಬಳಸಲು ಸ್ಪೇಸ್ ಎಕ್ಸ್ ಬೃಹತ್ ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.

ಸ್ಟಾರ್ ಶಿಪ್ ರಾಕೆಟ್ ಸಿಬ್ಬಂದಿಯಿಲ್ಲದೇ ಹಾರಾಟ ನಡೆಸಲಿದ್ದು,  ಸಾಗರ ಪ್ರದೇಶದಲ್ಲಿ ಇದನ್ನು ಯಶಸ್ವಿಯಾಗಿ ಇಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲದೇ ಈ ರಾಕೆಟ್ ಅನ್ನು ಸಂಪೂರ್ಣವಾಗಿ ಮರುಬಳಕೆ ಮಾಡಲು ಉದ್ದೇಶಿಸಲಾಗಿದ್ದು ಬಾಹ್ಯಾಕಾಶ ವಿಜ್ಞಾನಿಗಳು ಈ ಪ್ರಕ್ರಿಯೆ ಮೇಲೆ ತೀವ್ರ ಕಣ್ಣಿಟ್ಟಿದ್ದಾರೆ.

suddiyaana