ಬಾಹ್ಯಾಕಾಶಕ್ಕೆ ಜಿಗಿದ SpaceX ನೌಕೆ – ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರೋದು ಯಾವಾಗ?

ಬಾಹ್ಯಾಕಾಶ ಕಕ್ಷೆಯಲ್ಲಿ ಕಳೆದ 9 ತಿಂಗಳಿನಿಂದ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರಲು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಉಡಾವಣೆ ಮಾಡಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ಮುಂಜಾನೆ ಸುಮಾರು 4:33 ಕ್ಕೆ ರಾಕೆಟ್ ಉಡಾವಣೆಗೊಂಡಿತು. ನಾಲ್ವರು ಹೊಸ ಗಗನಯಾತ್ರಿಗಳಿರುವ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಇರುವ ಫಾಲ್ಕನ್ 9 ರಾಕೆಟ್ ಇದಾಗಿದೆ.
ಇದನ್ನೂ ಓದಿ: ಪಾಕ್ ನ 50 ಪ್ಲೇಯರ್ಸ್ UNSOLD – ಇಂಗ್ಲೆಂಡ್ ನಲ್ಲೂ ಕೇಳೋರೇ ದಿಕ್ಕಿಲ್ವಾ?
ಕ್ರೂ-10 ರ ಭಾಗವಾಗಿರುವ ನಾಲ್ವರು ಗಗನಯಾತ್ರಿಗಳು, ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿದಂತೆ ಕ್ರೂ-9 ಗಗನಯಾತ್ರಿಗಳನ್ನು ಬಿಡುಗಡೆ ಮಾಡಲಿದೆ. ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಸುನಿತಾ ವಿಲಿಯಮ್ಸ್ ಮತ್ತು ಬುಜ್ ಸಿಲುಕಿಕೊಂಡಿದ್ದಾರೆ. ಮುಂದಿನ ಬುಧವಾರಕ್ಕಿಂತ ಮುನ್ನ ವಾಪಸಾಗುವ ನಿರೀಕ್ಷೆ ಇದೆ.
2024 ರಲ್ಲಿ ಜೂನ್‌ಗೆ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ಸಮಸ್ಯೆಗಳಿಂದಾಗಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ISS ನಲ್ಲಿ ಸಿಲುಕಬೇಕಾಯಿತು.