ಇಂದು ಟೀಂ IND VS ದಕ್ಷಿಣ ಆಫ್ರಿಕಾ ಫೈಟ್ – ಗೆಲ್ಲೋದ್ಯಾರು?, ಹಿಂದಿನ ರೆಕಾರ್ಡ್‌ ಏನ್ ಹೇಳುತ್ತೆ?

ಇಂದು ಟೀಂ IND VS ದಕ್ಷಿಣ ಆಫ್ರಿಕಾ ಫೈಟ್ – ಗೆಲ್ಲೋದ್ಯಾರು?, ಹಿಂದಿನ ರೆಕಾರ್ಡ್‌ ಏನ್ ಹೇಳುತ್ತೆ?

ಭಾರತ ಮತ್ತು ದಕ್ಷಿಣ ಆಫ್ರಿಕಾ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ನ ಮೂರನೇ ಸೂಪರ್ 8 ಪಂದ್ಯಾವಳಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಎರಡೂ ತಂಡಗಳು ತಮ್ಮ ತಮ್ಮ ಗುಂಪುಗಳಲ್ಲಿ ಅಜೇಯ ನಾಲ್ಕು ಗೆಲುವಿನೊಂದಿಗೆ ಅಗ್ರಸ್ಥಾನ ಪಡೆದಿತ್ತು. ಹೀಗಾಗಿ ಇಂದಿನ ಮುಖಾಮುಖಿ ಭಾರೀ ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ.

ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಒಟ್ಟು 35 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 21 ಪಂದ್ಯಗಳಲ್ಲಿ ಜಯಗಳಿಸಿದೆ, ದಕ್ಷಿಣ ಆಫ್ರಿಕಾ 13 ಬಾರಿ ಜಯಗಳಿಸಿದೆ ಮತ್ತು ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.ಟಿ20 ವಿಶ್ವಕಪ್ ವಿಷಯಕ್ಕೆ ಬಂದರೆ, ಎರಡೂ ತಂಡಗಳು ಇದುವರೆಗೆ ಏಳು ಬಾರಿ ಮುಖಾಮುಖಿಯಾಗಿದ್ದು, ಆ ಪಂದ್ಯಗಳಲ್ಲಿ ಭಾರತ ಐದು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಕೊನೆಯ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದು ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ರನ್‌ಗಳಿಂದ ಗೆದ್ದು ಟ್ರೋಫಿಯನ್ನು ಎತ್ತಿ ಹಿಡಿದಿತ್ತು.

ಇದೇ ಪಂದ್ಯದಲ್ಲಿ ಭಾರತ ಬಂಡವಾಳ ಬಯಲು ಮಾಡುತ್ತೇವೆ ಎಂದು ಸೌತ್ ಆಫ್ರಿಕಾ ತಂಡದ ಕೋಚ್ ಶುಕ್ರಿ ಕಾನ್ರಾಡ್ ಹೇಳಿದ್ದಾರೆ. ಭಾರತ ತಂಡವು ಮೊದಲ ಸುತ್ತಿನಲ್ಲಿ ಯಾವುದೇ ಬಲಿಷ್ಠ ತಂಡದ ವಿರುದ್ಧ ಕಣಕ್ಕಿಳಿದಿಲ್ಲ. ಇದೀಗ ಅವರು ಸೌತ್ ಆಫ್ರಿಕಾ ತಂಡವನ್ನು ಎದುರಿಸಬೇಕಿದೆ.  ಈ ಪಂದ್ಯದ ಮೂಲಕ ನಾವು ಭಾರತ ತಂಡದ ಬಂಡವಾಳ ಬಯಲು ಮಾಡುತ್ತೇವೆ  ಎಂದು  ಹೇಳಿದ್ದಾರೆ.  ಭಾರತದ ಮೇಲೆ ಹೆಚ್ಚಿನ ಒತ್ತಡವಿದ್ದು, ಪಂದ್ಯ ಗೆಲ್ಲೋ ವಿಶ್ವಾಸದಲ್ಲಿದೆ.

Kishor KV

Leave a Reply

Your email address will not be published. Required fields are marked *