AUS ಕಳ್ಳಾಟಕ್ಕೆ SA ಕೌಂಟರ್! – ಬಾಲ್ ಟ್ಯಾಂಪರಿಂಗ್ ಕಿಡಿ ಆರಿಲ್ವಾ?
ಸೋಲಿನ ಪಾಠ ಕಲಿಸ್ತಾರಾ ಟೆಂಬಾ?

2025ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲಿಸ್ಟ್ ತಂಡಗಳಾದ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೀತಿದೆ. ಅಕ್ಟೋಬರ್ 9ರಿಂದ ಡರ್ಬನ್ನಲ್ಲಿ ಫಸ್ಟ್ ಮ್ಯಾಚ್ ಆರಂಭವಾಗಿದ್ದು ಟಾಸ್ ಗೆದ್ದಿರೋ ಆಸೀಸ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಫಸ್ಟ್ ಬ್ಯಾಟಿಂಗ್ ಮಾಡ್ತೀವಿ ಅಂತಾ ಬ್ಯಾಟಿಂಗ್ ಚೂಸ್ ಮಾಡಿಕೊಂಡಿದ್ದಾರೆ. ಌಂಡ್ ಎರಡೂ ಕಡೆ ಫೈಟ್ ತುಂಬಾ ಚೆನ್ನಾಗಿ ಹೋಗ್ತಿದೆ. ಆದ್ರಿಲ್ಲಿ ಪ್ರಸ್ತುತ ಸರಣಿಗಿಂದ 2018ರ ಸರಣಿಯೇ ಟ್ರೆಂಡಿಂಗ್ನಲ್ಲಿದೆ. ಬಾಲ್ ಟ್ಯಾಂಪರಿಂಗ್ ವಿವಾದ ಮತ್ತೆ ಎದ್ದು ಕೂತಿದೆ. ಆಸೀಸ್ ಪ್ಲೇಯರ್ಸ್ ಮಾಡಿದ್ದ ಮೋಸ ಹೈಲೆಟ್ ಆಗ್ತಿದೆ. ಸ್ಯಾಂಡ್ ಪೇಪರ್ ಗೇಟ್ ಹಗರಣ ಸದ್ದು ಮಾಡ್ತಿದೆ. ಈ ಸಲ ನಮ್ಮ ಕ್ಯಾಮೆರಾಗಳು ಶಾರ್ಪ್ ಆಗಿವೆ ಅಂತಾ ಸ್ಪೋರ್ಟ್ಸ್ ಚಾನೆಲ್ ಕೂಡ ಕೌಂಟರ್ ಕೊಟ್ಟಿದೆ.
ಇದನ್ನೂ ಓದಿ : CSK ತಂಡದಿಂದ ಹಸ್ಸಿಗೆ ಗೇಟ್‌ಪಾಸ್! 15 ವರ್ಷಗಳ ಸಂಬಂಧಕ್ಕೆ ಅಂತ್ಯ!
ಕ್ರಿಕೆಟ್ ಜಗತ್ತಿನ ಎರಡು ಬಲಿಷ್ಠ ಟೆಸ್ಟ್ ತಂಡಗಳ ನಡುವೆ ಮತ್ತೆ ರಣರೋಚಕ ಟೆಸ್ಟ್ ಕನದ ಆರಂಭವಾಗಿದೆ. ಒಂದ್ಕಡೆ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಮತ್ತೊಂದೆಡೆ ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ. 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಚಾಂಪಿಯನ್ ಆಗಿದ್ದ ದಕ್ಷಿಣ ಆಫ್ರಿಕಾ, ಇದೀಗ ತವರಿನಲ್ಲೇ ಮತ್ತೊಮ್ಮೆ ಆಸೀಸ್‌ಗೆ ಸವಾಲು ಹಾಕಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಯಾರು ಗೆಲ್ತಾರೆ ಅನ್ನೋ ಲೆಕ್ಕಾಚಾರಗಳೂ ಶುರುವಾಗಿವೆ. ಅದ್ರಲ್ಲೂ 2018ರ ಬಳಿಕ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಆಡುತ್ತಿದೆ. 2018ರ ಪ್ರವಾಸ ಬಾಲ್ ಟ್ಯಾಂಪರಿಂಗ್ ವಿವಾದದಿಂದಾಗಿ ಕ್ರಿಕೆಟ್ ಇತಿಹಾಸದಲ್ಲೇ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದಾದ್ಮೇಲೆ ಆಸೀಸ್ ಪಡೆ ಟೆಸ್ಟ್ ಪಂದ್ಯಗಳಿಗಾಗಿ ಸೌತ್ ಆಫ್ರಿಕಾಗೆ ಕಾಲಿಟ್ಟಿರೋದು ಇದೇ ಮೊದಲು.
ಬಲಿಷ್ಠ ಆಟಗಾರರ ದಂಡು.. ಯಾರಿಗೆ ಸರಣಿ ಗೆಲುವಿನ ಲಕ್?
ಸದ್ಯ ಎರಡೂ ಕಡೆಯೂ ಬಲಿಷ್ಠ ಆಟಗಾರರ ದಂಡೇ ಇದೆ. ಆಸ್ಟ್ರೇಲಿಯಾ ತಂಡದಲ್ಲಿ ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ರಂಥ ಪ್ಲೇಯರ್ಸ್ ಇದ್ರೆ ಅತ್ತ ದಕ್ಷಿಣ ಆಫ್ರಿಕಾ ತಂಡದಲ್ಲಿ ಟೆಂಬಾ ಬವುಮಾ, ಏಡನ್ ಮಾರ್ಕ್ರಮ್, ರಯಾನ್ ರಿಕೆಲ್ಟನ್, ಮಾರ್ಕೊ ಯಾನ್ಸನ್ ಮತ್ತು ಅನ್ರಿಚ್ ನಾರ್ಟ್ಜೆ ಗೇಮ್ ಚೇಂಜರ್ಸ್ ಆಗ್ತಾರೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯ ದೃಷ್ಟಿಯಿಂದಲೂ ಎರಡೂ ತಂಡಗಳಿಗೆ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಬಾರಿಯ ಸರಣಿಗಿಂತ ಜಾಸ್ತಿ 2018ರಲ್ಲಿ ಎರಡೂ ತಂಡಗಳ ನಡುವಿನ ಮುಖಾಮುಖಿಯಲ್ಲಿನ ಬಾಲ್ ಟ್ಯಾಂಪರಿಂಗ್ ಸುದ್ದಿ ಸದ್ದು ಮಾಡ್ತಿದೆ.
ಸರಣಿ ಆರಂಭಕ್ಕೂ ಮೊದಲೇ ಆಸೀಸ್ ಕಾಲೆಳೆದ ಸೂಪರ್ ಸ್ಪೋರ್ಟ್ಸ್!
ಅಷ್ಟಕ್ಕೂ 2018ರ ವಿವಾದ ಈ ಮಟ್ಟಿಗೆ ಸದ್ದು ಮಾಡೋಕೆ ಕಾರಣವೇ ಸೂಪರ್ ಸ್ಪೋರ್ಟ್ಸ್. ದಕ್ಷಿಣ ಆಫ್ರಿಕಾದ ಕ್ರೀಡಾ ಪ್ರಸಾರ ಸಂಸ್ಥೆಯಾದ ಸೂಪರ್ ಸ್ಪೋರ್ಟ್ಸ್ 2026ರ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಹಳೆಯ ‘ಸ್ಯಾಂಡ್‌ಪೇಪರ್ ಗೇಟ್’ ಅಂತಾನೇ ಹೆಸರಾಗಿರೋ ಬಾಲ್ ಟ್ಯಾಂಪರಿಂಗ್ ಹಗರಣವನ್ನು ನೆನಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆದಿದೆ. 2018ರ ಆ ಕಪ್ಪು ಚುಕ್ಕೆಯ ನಂತರ ಆಸ್ಟ್ರೇಲಿಯಾ ತಂಡವು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾಕ್ಕೆ ಟೆಸ್ಟ್ ಸರಣಿ ಆಡಲು ಬಂದಿದೆ. ಸೂಪರ್ ಸ್ಪೋರ್ಟ್ಸ್ ಸಂಸ್ಥೆಯು ತನ್ನ ಅಧಿಕೃತ ‘X’ ಖಾತೆಯಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ “ಈ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ನಮ್ಮ ಕ್ಯಾಮೆರಾಗಳು ತೀಕ್ಷ್ಣವಾಗಿರಲಿವೆ” ಎಂಬ ಬರಹದೊಂದಿಗೆ ಕ್ಯಾಮೆರಾ ಎಮೋಜಿಯನ್ನು ಬಳಸಿ ಆಸ್ಟ್ರೇಲಿಯಾವನ್ನು ಕೆಣಕಿದೆ. ಈ ಪ್ರೋಮೋದೊಂದಿಗೆ ಸೂಪರ್ ಸ್ಪೋರ್ಟ್ಸ್, 2018ರಲ್ಲಿ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಸ್ಯಾಂಡ್‌ಪೇಪರ್‌ನಿಂದ ಚೆಂಡನ್ನು ಉಜ್ಜುತ್ತಿದ್ದ ದೃಶ್ಯ ಹಾಗೂ ಅದಾದ ನಂತರ ಆಸ್ಟ್ರೇಲಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಾದ ಮೂಮೆಂಟ್ಸ್ನ ಇಡೀ ವಿಡಿಯೋವನ್ನು ಮತ್ತೊಮ್ಮೆ ಪೋಸ್ಟ್ ಮಾಡಿದೆ. ಆಸೀಸ್ ಆಟಗಾರರ ಕಳ್ಳಾಟವನ್ನ ಜಗತ್ತಿಗೆ ಬಹಿರಂಗಪಡಿಸಿದ್ದೇ ಇದೇ ಸೂಪರ್ ಸ್ಪೋರ್ಟ್ಸ್‌ನ ಅತ್ಯಾಧುನಿಕ ಕ್ಯಾಮೆರಾಗಳು. ಆ ಫೂಟೇಜ್‌ನಿಂದಾಗಿಯೇ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬ್ಯಾನ್‌ಕ್ರಾಫ್ಟ್ ನಿಷೇಧಕ್ಕೊಳಗಾಗಬೇಕಾಯಿತು.
ಆಸೀಸ್ ಆಟಗಾರರ ಕಳ್ಳಾಟ!
ಮಾರ್ಚ್ 24, 2018, ಕೇಪ್ ಟೌನ್ ನ 3ನೇ ಟೆಸ್ಟ್ ಪಂದ್ಯದಲ್ಲಿ ಘಟನೆ
ಪಂದ್ಯದ ಮೂರನೇ ದಿನ ಆಸ್ಟ್ರೇಲಿಯಾದ ಆಟಗಾರ ಕ್ಯಾಮರೂನ್ ಬ್ಯಾನ್ ಕ್ರಾಫ್ಟ್
ಚೆಂಡಿನ ಆಕಾರ ಬದಲಿಸಲು ಸ್ಯಾಂಡ್ ಪೇಪರ್ ನಿಂದ ಉಜ್ಜುತ್ತಿರುವುದು ಸೆರೆ
ಆರಂಭದಲ್ಲಿ ಟೇಪ್ ಬಳಸಿದ್ದೇವೆ ಎಂದಿದ್ರೂ ತನಿಖೆಯಲ್ಲಿ ಸ್ಯಾಂಡ್ ಪೇಪರ್ ಒಪ್ಪಿಗೆ
ಚೆಂಡಿನ ಒಂದು ಭಾಗವನ್ನು ರಫ್ ಮಾಡಿ ರಿವರ್ಸ್ ಸ್ವಿಂಗ್ ಪಡೆಯುವ ಉದ್ದೇಶ
ಅಂದಿನ ನಾಯಕ ಸ್ಟೀವ್ ಸ್ಮಿತ್ ಇದು ಗೊತ್ತಿದೆ ಎಂದಿದ್ದು ತಡೆಯಲು ವಿಫಲ
ವೈಸ್ ಕ್ಯಾಪ್ಟನ್ ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಐಡಿಯಾ ಕೊಟ್ಟಿದ್ದು
ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಸ್ಯಾಂಡ್ ಪೇಪರ್ ಬಳಸಿ ಚೆಂಡು ವಿಕಾರಗೊಳಿಸಿದ್ದ
ಆನ್ ಫೀಲ್ಡ್ ಅಂಪೈರ್ಸ್ ಪರಿಶೀಲನೆ ವೇಳೆ ಪ್ಯಾಂಟ್ ಒಳಗೆ ಸ್ಯಾಂಡ್ ಪೇಪರ್
ಸ್ಟೀವ್ ಗೆ 12 ತಿಂಗಳು, ಡೇವಿಡ್ ಗೆ 12 ತಿಂಗಳು, ಕ್ಯಾಮರೂನ್ ಗೆ 9 ತಿಂಗಳು ನಿಷೇಧ
ಹೀಗೆ ವಿವಾದದ ನಡುವೆಯೂ ನಡೆದ ಈ ಮ್ಯಾಚಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು 322 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ಹಾಗೇ ಸರಣಿಯನ್ನೂ ಗೆದ್ದುಕೊಂಡಿತ್ತು. 4 ಪಂದ್ಯಗಳ ಈ ಸುದೀರ್ಘ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡವು 3-1 ಅಂತರದಿಂದ ಗೆದ್ದುಕೊಂಡಿತು. ಆಸ್ಟ್ರೇಲಿಯಾ ವಿರುದ್ಧ 1970ರ ನಂತರ ದಕ್ಷಿಣ ಆಫ್ರಿಕಾ ತನ್ನ ತಾಯ್ನಾಡಿನಲ್ಲಿ ಪಡೆದ ಮೊದಲ ಸರಣಿ ಜಯ ಇದಾಗಿತ್ತು. ಕ್ರಿಕೆಟ್ ಇತಿಹಾಸದಲ್ಲಿ ಇದನ್ನ ಸ್ಯಾಂಡ್ ಪೇಪರ್ ಗೇಟ್ ಪ್ರಕರಣ ಎಂದೇ ಕರೆಯಲಾಗುತ್ತೆ. 2018ರ ವಿವಾದಾತ್ಮಕ ‘ಸ್ಯಾಂಡ್‌ಪೇಪರ್ ಗೇಟ್’ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದಲ್ಲಿದ್ದ ಒಟ್ಟು 7 ಪ್ರಮುಖ ಆಟಗಾರರು ಪ್ರಸ್ತುತ 2026ರ ಟೆಸ್ಟ್ ಸರಣಿಯ ಆಸ್ಟ್ರೇಲಿಯಾ ತಂಡದಲ್ಲಿಯೂ ಆಡುತ್ತಿದ್ದಾರೆ. ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ ವುಡ್, ನಾಥನ್ ಲಿಯೋನ್, ಮ್ಯಾಥ್ಯೂ ರೆನ್ಷಾ ಹಾಗೇ ಮಿಚೆಲ್ ಮಾರ್ಷ್ ಇದ್ದಾರೆ. ಒಟ್ನಲ್ಲಿ ಆಸೀಸ್ ಕ್ರಿಕೆಟ್ ಪುಟಗಳಲ್ಲಿ ಕಪ್ಪುಚುಕ್ಕೆಯಾಗಿರೋ ಈ ಬಾಲ್ ಟ್ಯಾಂಪರಿಂಗ್ ಈಗ ಕ್ರಿಕೆಟ್ ಜಗತ್ತಿನಲ್ಲಿ ಮತ್ತೆ ಸದ್ದು ಮಾಡ್ತಿದೆ. ಆಸೀಸ್ ಆಟಗಾರರಿಗೂ ಮುಜುಗರ ತಂದಿಟ್ಟಿದೆ.

ನೋಡಿರಿ

