ಕಾಂಗರೂಗಳ ಕಾಲು ಮುರಿದ ಟೆಂಬಾ ಬವುಮಾ – ಆಸ್ಟ್ರೇಲಿಯಾ ಹತ್ತಿಕ್ಕಿದ SAಗೆ ನಂ.1 ಪಟ್ಟ!
ಆಫ್ಘನ್ ಈಗ ಹೊಸ ಚಾಂಪಿಯನ್ಸ್!

ಕಾಂಗರೂಗಳ ಕಾಲು ಮುರಿದ ಟೆಂಬಾ ಬವುಮಾ – ಆಸ್ಟ್ರೇಲಿಯಾ ಹತ್ತಿಕ್ಕಿದ SAಗೆ ನಂ.1 ಪಟ್ಟ!ಆಫ್ಘನ್ ಈಗ ಹೊಸ ಚಾಂಪಿಯನ್ಸ್!

2025-27ರ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್​ ಈಗ ರಣರೋಚಕ ಘಟ್ಟದಲ್ಲಿದೆ. ಹಾಲಿ ಚಾಂಪಿಯನ್ ಸೌತ್ ಆಫ್ರಿಕಾ ಆಸ್ಟ್ರೇಲಿಯಾವನ್ನ ಬಗ್ಗು ಬಡಿದು ನಂಬರ್ 1 ಪಟ್ಟಕ್ಕೇರಿದೆ. ಟೆಂಬಾ ಬವುಮಾ ಕೋಟೆಯಲ್ಲಿ ಕಾಂಗರೂಗಳ ಕಾಲು ಮುರಿದಿದ್ದು ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿದೆ. ಌಂಡ್ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಒಂದೇ ದಿನ ಡಬಲ್ ಶಾಕ್ ಕೂಡ ತಟ್ಟಿದೆ.

ಇದನ್ನೂ ಓದಿ : ವೈಭವ್ ಗಾಗಿ ಸಂಜು Or ಅಭಿ ಔಟ್? – ಶ್ರೇಯಸ್ ಭಾರ.. ವೇಗಿಗಳೇ ವಿಲನ್ಸ್!

ಟೆಸ್ಟ್ ಕ್ರಿಕೆಟ್​ನಲ್ಲಿ ಹಾಲಿ ಚಾಂಪಿಯನ್ಸ್ ಆಗಿರೋ ಸೌತ್ ಆಫ್ರಿಕಾ ಮತ್ತೊಮ್ಮೆ ಆಸ್ಟ್ರೇಲಿಯಾವನ್ನ ಬಗ್ಗು ಬಡಿದಿದೆ. ಮೂರೂ ಪಂದ್ಯಗಳ ಟೆಸ್ಟ್ ಸರಣಿಯನ್ನ 2-1 ಅಂತರದಲ್ಲಿ ಗೆದ್ದು ವಿಶ್ವಕ್ರಿಕೆಟ್​ನಲ್ಲಿ ಬಾರೀ ಸಂಚಲನ ಮೂಡಿಸಿದೆ. ಡರ್ಬನ್​ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 214 ರನ್​ಗಳಿಗೆ ಗೆದ್ದು ಬೀಗಿತ್ತು. ಆ ನಂತ್ರ ಗೆಬರ್ಹಾದಲ್ಲಿ ನಡೆದ 2ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಇನ್ನಿಂಗ್ಸ್ ಜೊತೆಗೆ 31 ರನ್​ಗಳಿಂದ ಪಂದ್ಯ ಗೆದ್ದಿತ್ತು. ಸಿರೀಸ್ ಡಿಸೈಡರ್ ಆಗಿದ್ದ ಮೂರನೇ ಪಂದ್ಯವಂತೂ ರಣರೋಚಕವಾಗಿತ್ತು. ಕೇಪ್​ಟೌನ್ ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 176 ರನ್​ಗಳಿಂದ ಗೆದ್ದ ಸೌತ್ ಆಫ್ರಿಕಾ ಪಂದ್ಯದ ಜೊತೆ ಸರಣಿಯನ್ನೂ ಕೈವಶ ಮಾಡಿಕೊಳ್ತು. ಸರಣಿಯಲ್ಲಿ ಆಸ್ಟ್ರೇಲಿಯಾದ ಓಪನರ್ ಮ್ಯಾಟ್ ರೆನ್‌ಶಾ ಇಡೀ ಸರಣಿಯಲ್ಲಿ 369 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡರೆ, ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 15 ವಿಕೆಟ್ ಹಾಗೂ ಸೌತ್ ಆಫ್ರಿಕಾದ ಸ್ಪಿನ್ನರ್ ಸೈಮನ್ ಹಾರ್ಮರ್ 14 ವಿಕೆಟ್ ಕಸಿದು ಮಿಂಚಿದರು. ಹೀಗೆ ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿದ್ದ ಈ ಸರಣಿಯಿಂದ ಟೆಸ್ಟ್ ಫಾರ್ಮೆಟ್​ನಲ್ಲಿ ಹಲವು ಬದಲಾವಣೆಗಳಾಗಿವೆ.

ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಪಟ್ಟಕ್ಕೇರಿದ ಸೌತ್ ಆಫ್ರಿಕಾ!

ಆಸೀಸ್ ವಿರುದ್ಧದ ಟೆಸ್ಟ್ ಸರಣಿಯನ್ನ ಗೆದ್ದು ಐಸಿಸಿ ಮೆನ್ಸ್ ಟೆಸ್ಟ್ ತಂಡಗಳ ರ್ಯಾಂಕಿಂಗ್​ನಲ್ಲಿ   ನಂ.1 ಪಟ್ಟಕ್ಕೇರಿದೆ. ಅದೂ ಕೂಡ 10 ವರ್ಷಗಳ ಬಳಿಕ. 2016ರ ನಂತರ ಸೌತ್ ಆಫ್ರಿಕಾ ಮೊದಲ ಸ್ಥಾನಕ್ಕೇರಿದೆ. ಹಾಗಂತ ರ್ಯಾಂಕಿಂಗ್​ನಲ್ಲಿ ಅಷ್ಟೇ ಅಲ್ಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-27ರ ಸೈಕಲ್​ನಲ್ಲೂ ಎರಡನೇ ಸ್ಥಾನಕ್ಕೆ ಜಿಗಿದಿದೆ. ಟೆಂಬಾ ಬವುಮಾ ತಂಡದ ಕ್ಯಾಪ್ಟನ್ ಆದ್ಮೇಲೆ ಅವ್ರ ಪ್ರದರ್ಶನ ಡೇಂಜರಸ್ ಆಗಿದೆ.

ಟೆಸ್ಟ್ ಕ್ರಿಕೆಟ್‌ ನಲ್ಲಿ ಅತ್ಯಂತ ಅಪಾಯಕಾರಿ ತಂಡವಾದ ಸೌತ್ ಆಫ್ರಿಕಾ!

ಟೆಂಬಾ ಬವುಮಾ ತಂಡದ ನಾಯಕರಾದ ಬಳಿಕ ಸೌತ್ ಆಫ್ರಿಕಾ ತಂಡದ ಪ್ರದರ್ಶನ ಕಂಪ್ಲೀಟ್ ಆಗಿ ಬದಲಾಗಿದೆ. ಇತಿಹಾಸದಲ್ಲೇ ಕಾಣದಂತಹ ಅದ್ಭುತ ಯಶಸ್ಸನ್ನು ಸಾಧಿಸುತ್ತಿದೆ. 2025ರಲ್ಲಿ ಬವುಮಾ ನಾಯಕತ್ವದಲ್ಲೇ ಸೌತ್ ಆಫ್ರಿಕಾ ತಂಡವು ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 27 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿತು. ಈಗ ಆಸೀಸ್ ವಿರುದ್ಧವೂ ಗೆದ್ದು 10 ವರ್ಷಗಳ ಬಳಿಕ ಐಸಿಸಿ ರ್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ. ಬವುಮಾ ಅವರ ಟೆಸ್ಟ್ ನಾಯಕತ್ವದ ದಾಖಲೆ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮವಾಗಿದೆ. ಟೆಂಬಾ ಅಡಿಯಲ್ಲಿ ಸೌತ್ ಆಫ್ರಿಕಾ 15 ಟೆಸ್ಟ್ ಪಂದ್ಯಗಳನ್ನ ಆಡಿದ್ದು ಇತ್ತೀಚೆಗೆ ಆಸೀಸ್ ವಿರುದ್ಧ ಮೊದಲ ಪಂದ್ಯ ಸೋತಿದ್ದು ಬಿಟ್ರೆ 13 ಪಂದ್ಯಗಳಲ್ಲಿ ತಂಡ ಗೆದ್ದಿದೆ. 1 ಪಂದ್ಯ ಡ್ರಾ ಆಗಿದೆ. 86.67% ಗೆಲುವಿನ ಶೇಕಡಾವಾರು ಹೊಂದಿದ್ದು ಇದು ವಿಶ್ವದ ಯಾವುದೇ ಪ್ರಸ್ತುತ ನಾಯಕನಿಗಿಂತ ಗ್ರೇಟ್. ಌಂಡ್ ಇದುವರೆಗೆ ಒಂದೇ ಒಂದು ಟೆಸ್ಟ್ ಸರಣಿಯನ್ನೂ ಸೋತಿಲ್ಲ. ಹಾಂಗಂತ ಇಲ್ಲಿ ಬವುಮಾ ಜಸ್ಟ್ ಕ್ಯಾಪ್ಟನ್ ಆಗಿ ಅಷ್ಟೇ ಅಲ್ಲ. ಆಟದ ವಿಚಾರದಲ್ಲೂ ಅದ್ಭುತ ಪ್ರದರ್ಶನ ಬರ್ತಿದೆ. ನಾಯಕನಾದ ಬಳಿಕ ಅವರ ಬ್ಯಾಟಿಂಗ್ ಸರಾಸರಿ ಕೂಡ 15ರಷ್ಟು ಹೆಚ್ಚಾಗಿದೆ. ಹೀಗೆ ಟೆಂಬಾ ಮಾಸ್ಟರ್​ಸ್ಟ್ರೋಕ್​ಗೆ ತತ್ತರಿಸಿದ ಆಸೀಸ್ ಪಡೆಗೆ ಮತ್ತೊಂದು ಶಾಕ್ ತಟ್ಟಿದೆ.

ಹಾಂಗ್ ಕಾಂಗ್ ಸಿಕ್ಸಸ್ ನಲ್ಲಿ ಆಸೀಸ್ ಗೆ ಚಳ್ಳೆಹಣ್ಣು ತಿನ್ನಿಸಿದ ಆಫ್ಘನ್!

ಮತ್ತೊಂದೆಡೆ ವಿಶ್ವಕ್ರಿಕೆಟ್​ನಲ್ಲಿ ಹಾಂಗ್ ಕಾಂಗ್ ಸಿಕ್ಸಸ್ 2026 ಟೂರ್ನಿ ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಫೈನಲ್ ಮ್ಯಾಚಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿದ ಆಫ್ಘಾನಿಸ್ತಾನ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದಾರೆ. ಗುಲ್ಬದಿನ್ ನೈಬ್ ಅಂಡರ್​ನಲ್ಲಿ ಕಣಕ್ಕಿಳಿದ ಆಫ್ಘನ್ ಮುಂದೆ ಕಾಂಗರೂಗಳ ಆಟ ನಡೆಯಲೇ ಇಲ್ಲ. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಂಡಿದ್ರು. ಌಂಡ್ ಇದು ಕೇವಲ 6 ಓವರ್​ಗಳ ಟೂರ್ನಿ ಆಗಿದ್ರಿಂದ ಆಸ್ಟ್ರೇಲಿಯಾ ಆರು ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 115 ರನ್‌ಗಳನ್ನ ಕಲೆ ಹಾಕಿತ್ತು. 116 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ್ದ ಆಫ್ಘನ್ ತಂಡ ಇನ್ನೂ ಐದು ಎಸೆತಗಳು ಬಾಕಿ ಇರುವಾಗ್ಲೇ ಪಂದ್ಯವನ್ನ ಗೆಲ್ಲೋದ್ರ ಜೊತೆಗ ಚಾಂಪಿಯನ್ ಪಟ್ಟಕ್ಕೂ ಏರಿತು. ಆದ್ರೆ ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಹೀನಾಯ ಪ್ರದರ್ಶನ ನೀಡಿ 11ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಕೃನಾಲ್ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಮೊದಲಿಗೆ ಪಾಕಿಸ್ತಾನ, ಯುಎಇ ವಿರುದ್ಧ ಸೋತಿದ್ದ ಭಾರತ ನಂತ್ರ ಇಂಗ್ಲೆಂಡ್ ವಿರುದ್ಧ ಪಲ್ಟಿಯಾಗಿತ್ತು. ಕೊನೆಗೆ 11ನೇ ಸ್ಥಾನಕ್ಕಾಗಿ ನಡೆದ ಫೈಟ್​ನಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಟೂರ್ನಿಗೆ ಗುಡ್ ಬೈ ಹೇಳಿದೆ.

Shantha Kumari

Leave a Reply

Your email address will not be published. Required fields are marked *